Wednesday, April 24, 2024

Latest Posts

ಇಸ್ತಾಂಬುಲ್‌ ನೈಟ್ ಕ್ಲಬ್‌ನಲ್ಲಿ ಅಗ್ನಿ ದುರಂತ: 29 ಮಂದಿಯ ದುರ್ಮರಣ

- Advertisement -

International News: ಇಸ್ತಾಂಬುಲ್‌ನ ನೈಟ್ ಕ್ಲಬ್‌ನಲ್ಲಿ ಅಗ್ನಿ ದುರಂತ ಸಂಭವಿಸಿದ್ದು, 29 ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಗಾಯವಾಗಿದೆ. ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.

10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಇವರೆಲ್ಲರೂ ನೈಟ್ ಕ್ಲಬ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇನ್ನೊಂದು ವಿಚಾರ ಅಂದ್ರೆ ನೈಟ್‌ ಕ್ಲಬ್ ಸಖತ್ ಫೇಮಸ್ ಆಗಿದ್ದು, ಇಲ್ಲಿ ಪ್ರತಿದಿನ ಹಲವರು ಸೇರುತ್ತಿದ್ದರು. ಆದರೆ ನೈಟ್ ಕ್ಲಬ್‌ನಲ್ಲಿ ಕಾಮಗಾರಿ ನಡೆಯುತ್ತಿದ್ದ ಕಾರಣ, ನೈಟ್ ಕ್ಲಬ್ ಕ್ಲೋಸ್ ಮಾಡಲಾಗಿದ್ದು, ಈ ಕೆಲಸದ ವೇಳೆಯೆ ಅಗ್ನಿ ಅವಘಡ ಸಂಭವಿಸಿ, ಅಲ್ಲಿ ಕೆಲಸ ಮಾಡುವವರಲ್ಲೇ 29 ಮಂದಿ ಸಾವನ್ನಪ್ಪಿದ್ದಾರೆ.

ಇನ್ನು ಈ ನೈಟ್ ಕ್ಲಬ್ ಮ್ಯಾನೇಜರ್ ಸೇರಿ, ಕೆಲವು ಸಿಬ್ಬಂದಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಇಸ್ರೇಲ್‌ನಲ್ಲಿ ಅಲ್ ಜಜೀರಾ ವಾಹಿನಿ ನಿಷೇಧ: ಬೆಂಜಮಿನ್ ನೆತನ್ಯಾಹು

ನಿಮ್ಮ ನಡೆಯೇ ನನ್ನದೂ ಆಗಿರಲಿದೆ. ಜೊತೆಯಾಗಿ ಮಂಡ್ಯವನ್ನು ಮತ್ತಷ್ಟು ಅಭಿವೃದ್ದಿ ಪಡಿಸೋಣ: ಸಂಸದೆ ಸುಮಲತಾ

ಅಡ್ಡದಾರಿಯಲ್ಲಿ ಚುನಾವಣೆ ಎದುರಿಸಲು ಹೋದರೆ, ಸೋಲು ಕಟ್ಟಿಟ್ಟ ಬುತ್ತಿ: ಅಮಿತ್ ಶಾ ವಿರುದ್ಧ ಸಿಎಂ ವಾಗ್ದಾಳಿ

- Advertisement -

Latest Posts

Don't Miss