Dharwad News: ಧಾರವಾಡ : ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿಕೊಂಡು ಬಂದ ಯುವಕನೋರ್ವ ಬೇಂದ್ರೆ ಬಸ್ಸು ಹಾಗೂ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದುಕೊಂಡು ಹುಚ್ಚಾಟ ಮೆರೆದಿರುವ ಘಟನೆ ನಗರದ ಜ್ಯುಬಿಲಿ ವೃತ್ತ ಹಾಗೂ ಕಾರ್ಪೋರೇಶನ್ ಬಳಿ ನಡೆದಿದೆ.
ಕನಾ೯ಟಕ ಕಾಲೇಜ್ ರಸ್ತೆಯಿಂದ ತನ್ನ ಕಾರನ್ನು ಮನಬಂದಂತೆ ಚಲಾಯಿಸಿಕೊಂಡು ಬಂದ ಯುವಕನೋರ್ವ ಬೇಂದ್ರೆ ಬಸ್ಸಿಗೆ ತನ್ನ ಕಾರು ಡಿಕ್ಕಿಪಡಿಸಿದ್ದಾನೆ . ಮುಂದೆ ಅದೇ ರೀತಿ ಕಾರು ಚಲಾಯಿಸಿಕೊಂಡು ಕೆಲವೊಂದಿಷ್ಟು ಬೈಕ್‌ಗಳಿಗೂ ತನ್ನ ಕಾರು ಡಿಕ್ಕಿಪಡಿಸಿದ್ದಾನೆ . ಬೆಳ್ಳಂಬೆಳಿಗ್ಗೆಯೇ ವಿಪರೀತ ಮದ್ಯ ಕುಡಿದಿದ್ದ ಈತನನ್ನ ಕಲಾಭವನದ ಬಳಿ ಸ್ಥಳೀಯರು ತಡೆದು ನಿಲ್ಲಿಸಿದ್ದಾರೆ .
ಈ ವೇಳೆ ತನ್ನ ಕಾರಿನ ಮೇಲೆ ತಾನೇ ಹತ್ತಿ ನಿಂತು ಯಾರನ್ನೂ ಲೆಕ್ಕಿಸದೇ ಹುಚ್ಚಾಟ ಮೆರೆದಿದ್ದಾನೆ . ತಕ್ಷಣ ಸ್ಥಳಕ್ಕೆ ಬಂದ ಸಂಚಾರ ಠಾಣೆ ಪೊಲೀಸರು ಆ ಯುವಕನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
Political News: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ: ಸೂರಜ್ ರೇವಣ್ಣ ಅರೆಸ್ಟ್..