Saturday, July 27, 2024

Latest Posts

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಿದ್ದರಾಮಯ್ಯ, ಶಿವಕುಮಾರ್ ನೇರ ಹೊಣೆ: ಪ್ರಲ್ಹಾದ್ ಜೋಶಿ

- Advertisement -

Hubli News: ಕಳೆದ 10-ವರ್ಷ ಅವಧಿಯ ಭಯೋತ್ಪಾದಕ ಕೃತ್ಯ ಮತ್ತು ಚಟುವಟಿಕೆಗಳ ಗ್ರಾಫ್ ಗಮನಿಸಿದರೆ ದೇಶದ ಎಲ್ಲ ಭಾಗಗಳಲ್ಲಿ ಶೇಕಡಾ 90 ರಷ್ಟು ಕಡಿಮೆಯಾಗಿದೆ. ಆದರೆ ಕರ್ನಾಟಕಲ್ಲಿ ಕಡಿಮೆಯಾಗಿಲ್ಲ, ಇದಕ್ಕೆ ಸಿದ್ದರಾಮಯ್ಯನವರ ನಾನ್ಸೆನ್ಸ್ ಅಪ್ರೋಚ್ ಬಿಟ್ಟು ಬೇರೇನೂ ಕಾರಣವಲ್ಲ ಎಂದು ಜೋಶಿ ಹೇಳಿದರು.

ಕೇವಲ ಕ್ಷುಲ್ಲಕ ವೋಟ್ ಬ್ಯಾಂಕ್ ಗಾಗಿ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಕಟ್ಟರ್ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ರಕ್ಷಣೆ ನೀಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಅವರು, ಉಗ್ರವಾದಿಗಳಿಗೆ ಕರ್ನಾಟಕ ಕ್ರಮೇಣ ಸುರಕ್ಷಿತ ಅಡಗುದಾಣವಾಗಿ ಪರಿಣಮಿಸಿದೆ ಎಂದು ಹೇಳಿದ ಜೋಶಿ, ಕಳೆದ 10-ವರ್ಷ ಅವಧಿಯ ಭಯೋತ್ಪಾದಕ ಕೃತ್ಯ ಮತ್ತು ಚಟುವಟಿಕೆಗಳ ಗ್ರಾಫ್ ಗಮನಿಸಿದರೆ ದೇಶದ ಎಲ್ಲ ಭಾಗಗಳಲ್ಲಿ ಶೇಕಡಾ 90 ರಷ್ಟು ಕಡಿಮೆಯಾಗಿದೆ. ಆದರೆ ಕರ್ನಾಟಕಲ್ಲಿ ಕಡಿಮೆಯಾಗಿಲ್ಲ, ಇದಕ್ಕೆ ಸಿದ್ದರಾಮಯ್ಯನವರ ನಾನ್ಸೆನ್ಸ್ ಅಪ್ರೋಚ್ ಬಿಟ್ಟು ಬೇರೇನೂ ಕಾರಣವಲ್ಲ ಎಂದರು.

ಶುಕ್ರವಾರ ಬೆಂಗಳೂರುಗೆ ಹೋಗಿ ಗಾಯಾಳುಗಳನ್ನು ಭೇಟಿಯಾಗಿದ್ದೆ ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಒಬ್ಬ ಮಹಿಳೆ ತನ್ನ ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ, ಹಾಗಾಗದಿರಲಿ ಅಂತ ಭಗವಂತನನ್ನು ಪ್ರಾರ್ಥಸುವುದಾಗಿ ಅವರು ಹೇಳಿದರು.

ಇಂಥ ಘಟನೆಗಳು ನಡೆದಾಗ ರಾಜ್ಯ ಸರ್ಕಾರದ ಹೇಳಿಕೆಗಳು ದುಷ್ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಕುಮ್ಮಕ್ಕು ನೀಡುವಂತಿರುತ್ತವೆ ನಾವೇನೇ ಮಾಡಿದರೂ ರಕ್ಷಣೆ ಸಿಗುತ್ತದೆ ಎಂಬ ನಿರಾಳ ಭಾವ ಅವರಲ್ಲಿ ಹುಟ್ಟಿಕೊಂಡಿದೆ ಎಂದು ಹೇಳಿದ ಜೋಶಿ, ನಿನ್ನೆ ರಾಮೇಶ್ವರಂ ಕೆಫೆಯಲ್ಲಿ ನಡೆದಿರುವ ಘಟನೆಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನೇರವಾಗಿ ಹೊಣೆಗಾರರು ಎಂದರು.

ರಾಜಕೀಯಕ್ಕೆ ವಿದಾಯ ಹೇಳಿದ ಮಾಜಿ ಕ್ರಿಕೇಟಿಗ ಗೌತಮ್ ಗಂಭೀರ್..

ರಾಮೇಶ್ವರಂ ಕೆಫೆ ಸ್ಪೋಟ ಕೇಸ್: ಆಸ್ಪತ್ರೆಗೆ ಭೇಟಿ ಕೊಟ್ಟು, ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

ರಾಜ್ಯದ ಸಾಮಾನ್ಯ ಜನರ ಬದಕು ಅಸುರಕ್ಷಿತವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

- Advertisement -

Latest Posts

Don't Miss