Hassan News: ಹಾಸನ: ಕೂಲಿ ಕೆಲಸಕ್ಕೆ ತೆರಳುತ್ತಿದ್ದವನ ಮೇಲೆ ಕಾಡಾನೆ ದಾಳಿ ಮಾಡಿದ್ದು, ಕಾಡಾನೆ ತುಳಿತದಿಂದ ವ್ಯಕ್ತಿಯ ಕಾಲು ಮುರಿದಿದೆ.
ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ವಾಟೆಹಳ್ಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾಡಾನೆ ತುಳಿತದಿಂದ ವ್ಯಕ್ತಿಯ ಕಾಲು ಮುರಿದಿದೆ. ದಿವಾಕರ್ ಶೆಟ್ಟಿ (60) ಗಾಯಗೊಂಡ ವ್ಯಕ್ತಿಯಾಗಿದ್ದು, ಇಂದು ಬೆಳಿಗ್ಗೆ ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಕಾಡಾನೆ ಬಂದು ದಾಳಿ ಮಾಡಿದ್ದು, ದಿವಾಕರ್ ಶೆಟ್ಟಿಯನ್ನು ಕಾಲಿನಿಂದ ತುಳಿದಿದೆ. ಇದರಿಂದ ದಿವಾಕರ್ ಅವರ ಬಲಗಾಲು ಮುರಿದಿದೆ.
ಇನ್ನು ನೋವು ತಡೆಯಲಾಗದೇ, ದಿವಾಕರ್ ಕಿರುಚುತ್ತಿದ್ದಂತೆ, ಕಾಡಾನೆ ಕಾಫಿ ತೋಟದೊಳಗೆ ಓಡಿ ಹೋಗಿದೆ. ಅದೃಷ್ಟವಶಾತ್ ದಿವಾಕರ್ ಪ್ರಾಣ ಉಳಿದಿದೆ. ಬಳಿಕ ಸ್ಥಳೀಯರು ಅವರನ್ನು ತಾಲೂಕು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿದ್ದು, ಸ್ಥಳಕ್ಕೆ ಇಟಿಎಫ್ ತಂಡ ಭೇಟಿ ನೀಡಿ, ಪರಿಶೀಲನೆ ಮಾಡಿದೆ. ಇನ್ನು ಕಾಡಾನೆ ದಾಳಿಯಿಂದ ಕೂಲಿ ಕಾರ್ಮಿಕರು ಬೆಚ್ಚಿಬಿದ್ದಿದ್ದು, ತೋಟದ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.
Hassan News: ಹಾಸನ: ಹಾಸನ ಹೊರವಲಯದ ಸಮುದ್ರವಳ್ಳಿ ಬಳಿ, ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದ್ದು, ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಈ ಟ್ಯಾಂಕರ್ ಹೋಗುತ್ತಿದ್ದು, ಗ್ಯಾಸ್ ಪಲ್ಟಿಯಾದ ವೇಳೆ ಚಾಲಕ ಕೆಲ ಕಾಲ ಡ್ರೈವಿಂಗ್ ಸೀಟ್‌ನಲ್ಲಿ ಸಿಲುಕಿದ್ದ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ, ಡ್ರೈವರ್‌ನನ್ನು ರಕ್ಷಿಸಿದ್ದಾರೆ.
ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್: ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್
Sandalwood News: ಪವಿತ್ರಾ ಮೊಬೈಲ್‌ಗೆ ಮರ್ಮಾಂಗದ ಚಿತ್ರ ಕಳಿಸಿದ್ದ ರೇಣುಕಾಸ್ವಾಮಿ!