Monday, July 22, 2024

Latest Posts

ಕಾಂಪ್ರಮೈಸ್ ಮಾಡಿಕೊಂಡು ಸೇಫ್ ಮಾಡೋ ಪ್ರಮೇಯ ಇಲ್ಲ: ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್

- Advertisement -

Sandalwood News: ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್ ಸುದ್ದಿಗೋಷ್ಠಿ ನಡೆಸಿ, ದರ್ಶನ್ ಕೇಸ್ ಬಗ್ಗೆ ಮಾತನಾಡಿದ್ದು,  ಈ ಅನ್ಯಾಯವನ್ನ ಖಂಡಿಸಲೇಬೇಕು. ದರ್ಶನ್ ಚಿತ್ರರಂಗದ ಮೇರುನಟ. ಮೊದಲು ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳುತ್ತೇವೆ. ನಾಳೆ ನಾವೆಲ್ಲಾ ದುರ್ಗಕ್ಕೆ ಹೋಗ್ತೀವಿ. ಕಾನೂನಿನಡಿ ಪೊಲೀಸರು ಕಾರ್ಯ ಮಾಡ್ತಿದ್ದಾರೆ.. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದಿದ್ದಾರೆ.

ಅಲ್ಲದೇ ಬ್ಯಾನ್ ವಿಚಾರ ಕಲಾವಿದರ ಸಂಘ ಎಲ್ಲರೂ ಸೇರಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಕೊಲೆ ವಿಚಾರ ಇದು.. ತುಂಬಾ ಸೂಕ್ಷ್ಮ ವಿಚಾರವಿದು. 2011ರಲ್ಲಿ ನಾವು ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿಯನ್ನ ಮಾತಾಡಿಸಿ ಸರಿ ಮಾಡಿದ್ವಿ. ಆದರೆ ಈಗ ಹಾಗೆ ಆಗಲ್ಲ. ಇದಕ್ಕೆ ಕಾನೂನಿನ‌ ತೊಡಕು ಇದೆ. ನಿರ್ಮಾಪಕರು ಕೋಟ್ಯಂತರ ರೂಪಾಯಿ ಹಣ ಹಾಕಿದ್ದಾರೆ. ನಿರ್ಮಾಪಕರ ಆರ್ಥಿಕ ಸ್ಥಿತಿಯನ್ನ ನೋಡಬೇಕಾಗುತ್ತೆ. ಮೂರು ತಿಂಗಳಿಂದ ಐದು ತಿಂಗಳ ವರೆಗೆ ದರ್ಶನ್ ಶೂಟಿಂಗ್ ಭಾಗಿಯಾಗೋದು ಡೌಟು. ಆ ನಿರ್ಮಾಪಕರನ್ನ ಕರೆಸಿ, ಅವರಿಗೆ ಯಾವ ರೀತಿ ಸಹಾಯ ಮಾಡಲು ಸಾಧ್ಯವೋ ಹಾಗೆ ಮಾಡುತ್ತೇವೆ ಎಂದಿದ್ದಾರೆ.

ನಾವು ಕಾಂಪ್ರಮೈಸ್ ಮಾಡಿಕೊಂಡು ಸೇಫ್ ಮಾಡೋ ಪ್ರಮೇಯ ಇಲ್ಲ. ಆಗಿರೋದು ಕೊಲೆ. ಇಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಮುಂದಿನ ನಾಲ್ಕೈದು ದಿನಗಳಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುತ್ತೇವೆ. ಎಲ್ಲಾ ಸ್ಟಾರ್ ಗಳ‌ ಅಭಿಮಾನಿಗಳಿಗೆ ಈ ಮೂಲಕ ವಿನಂತಿ. ಯಾರೂ ಯಾವ ವಿಚಾರದ ಬಗ್ಗೆಯೂ ಸೋಶಿಯಲ್ ಮೀಡಿಯಾಗಳಲ್ಲಿ ಯಾರನ್ನೂ ಪ್ರವೋಕ್ ಮಾಡಬೇಡಿ ಎಂದು ಅಭಿಮಾನಿಗಳಿಗೆ ಸುರೇಶ್ ಕಿವಿ ಮಾತು ಹೇಳಿದ್ದಾರೆ.

ದರ್ಶನ್ ಮಾಡಿರೋ ಕೃತ್ಯ ನಾವು ಖಂಡಿಸ್ತೀವಿ. ಈ ಸಭೆಯಲ್ಲಿ ಮುಖ್ಯವಾಗಿ ಚರ್ಚೆ ಆಗಿದ್ದು, ರೇಣುಕಾಸ್ವಾಮಿ ಕುಟುಂಬದ ಬಗ್ಗೆ, ಅವರ ಕುಟುಂಬದ ದುಃಖ ನೋಡಿ ಬೇಸರವಾಯ್ತು. ನಾಳೆ ಇ.ಸಿ ಟೀಂ ಆ ಕುಟುಂಬವನ್ನು ಭೇಟಿ ಮಾಡ್ತೀವಿ. ದರ್ಶನ್ ವಿಚಾರವಾಗಿ ಕಾನೂನು ಸತ್ಯಾಸತ್ಯತೆ ಹುಡುಕಾಟ ನಡೆಸಿದೆ. ಆರೋಪ ಸಾಬೀತಾದ ನಂತರ ಮುಂದಿನ ನಡೆ ತಿಳಿಸ್ತೀವಿ.  ಎನ್ಕೈರಿ ರಿಪೋರ್ಟ್ ಬಂದ ನಂತರ ನಾವು ಬ್ಯಾನ್ ವಿಚಾರ ತಿಳಿಸ್ತೀವಿ.

ಸದ್ಯಕ್ಕೆ ಬ್ಯಾನ್ ಮಾಡುವ ಯಾವುದೇ ಯೋಚನೆ ಇಲ್ಲ. 2011ರಲ್ಲೂ ದರ್ಶನ್ ದಂಪತಿಗಳ ಮಧ್ಯೆ ನಾವು ಕಾಂಪ್ರಮೈಸ್ ಮಾಡಿದ್ವಿ. ಆದ್ರೀಗ ಕೊಲೆ ಪ್ರಕರಣ ಅದನ್ನು ಕಾನೂನು ಕ್ರಮ ತೆಗೆದುಕೊಳ್ಳುತ್ತೆ. ನಿರ್ಮಾಪಕರ ಕಷ್ಟಗಳೂ ಇರೋದ್ರಿಂದ ದರ್ಶನ್ ನಂಬಿ ಬಂಡವಾಳ ಹೂಡಿರುತ್ತಾರೆ. ಆದ್ರಿಂದ ಅದೆಲ್ಲವನ್ನೂ ನೋಡಿಕೊಂಡು ನಾವು ಮುಂದಿನ ನಿರ್ಧಾರ ತೆಗೆದುಕೊಳ್ತೀವಿ. ಅದಕ್ಕೆ ಸಮಯದ ಅವಕಾಶ ಬೇಕು.. ಕೂಡಲೇ ಬ್ಯಾನ್ ನಿರ್ಧಾರ ತೆಗೆದುಕೊಳ್ಳುವ ಯೋಚನೆ ಇಲ್ಲ ಎಂದು ಎನ್‌.ಎಂ.ಸುರೇಶ್ ಹೇಳಿದ್ದಾರೆ.

ಮಗಳನ್ನು ಸ್ಟೇಶನ್‌ಗೆ ಕರೆಸಿದ ಬಗ್ಗೆ ಪವಿತ್ರಗೌಡ ಮಾಜಿ ಪತಿ ಸಂಜಯ್ ಸಿಂಗ್ ಕರ್ನಾಟಕ ಟಿವಿಗೆ ಪ್ರತಿಕ್ರಿಯೆ

ಸೈಬರ್ ಕ್ರೈಮ್ ನಡೆದ್ರೆ ಏನು ಮಾಡಬೇಕು..? ಖದೀಮರು ಯಾವ ರೀತಿ ನಿಮ್ಮ ಮೊಬೈಲ್ ಹ್ಯಾಕ್ ಮಾಡ್ತಾರೆ..?

Sandalwood News: ದರ್ಶನ್​ಗೆ ಎಣ್ಣೆ, ಸಿಗರೇಟ್! ಸ್ಟೇಷನ್​ಗೆ ಟೆಂಟ್!

- Advertisement -

Latest Posts

Don't Miss