- Advertisement -
ಬೆಂಗಳೂರು: ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಅರಣ್ಯ ಇಲಾಖೆ ಭರ್ಜರಿ ಸುದ್ದಿ ನೀಡಿದೆ. 5 ವರ್ಷಗಳಲ್ಲಿ 3085 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಅನುಮೋದನೆ ನೀಡಿದ್ದು ಈ ಕುರಿತು ಕೆಲ ದಿನಗಳಲ್ಲಿ ಅರ್ಜಿ ಆಹ್ವಾನಿಸಲಿದೆ.
ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ, ಉಪವಲಯ ಅರಣ್ಯಾಧಿಕಾರಿ, ಅರಣ್ಯ ರಕ್ಷಕ, ಅರಣ್ಯ ವೀಕ್ಷಕ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಅನುಮೋದಿಸಿದೆ.
ಈ ಸಾಲಿನಲ್ಲಿ ಒಟ್ಟು 323 ಹುದ್ದೆ , 2020ರಲ್ಲಿ 613 ಹುದ್ದೆ, 2021 ರಲ್ಲಿ 768, 2022ರಲ್ಲಿ 920, 2023ರಲ್ಲಿ 461 ಭರ್ತಿ ಮಾಡಲು ಸರ್ಕಾರ ಅನುಮೋದನೆ ನೀಡಿದೆ.
ಹೆಚ್ಚಿನ ಮಾಹಿತಿಗಾಗಿ ಅರಣ್ಯ ಇಲಾಖೆಯ ಅಧಿಕೃತ ವೆಬ್ ಸೈಟ್ ಸಂಪರ್ಕಿಸಬಹುದಾಗಿದೆ.
ಆ ಪಕ್ಷ ಸೇರಿದ್ರೆ ಮಾತ್ರ ಸುಮಲತಾ ಸ್ವಾಭಿಮಾನ ಉಳಿಯುತ್ತಂತೆ…! ಮಿಸ್ ಮಾಡದೇ ಈ ವಿಡಿಯೋ ನೋಡಿ.
- Advertisement -