ಹುಬ್ಬಳ್ಳಿ:ಹಳಿಯಾಳ ವಿಭಾಗದ ಕುಳಗಿ ಶಾಖೆಯ ವಿರ್ನೋಲಿ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಗೀಶ್ ನಾಯಕ್ ಎನ್ನುವ ಉಪವಲಯ ಅರಣ್ಯಧಿಕಾರಿ ಕುಮುಟಾ ತಾಲೂಕಿನ ಬಾಡ ಗ್ರಾಮದವರು. ಕಳೆದ 13 ವರ್ಷಗಳಿಂದ ಅರಣ್ಯಧಿಕಾರಿಯಾಗಿ ಸೇವೆ ಸಲ್ಲಿಸುತಿದ್ದರು.
ಜೂನ್ 27 ರಂದು ಸಾಗವಾನಿ ಸಸಿಗಳಿಗೆ ಕೀಟನಾಶಕ ಸೀಂಪಡಿಸುವ ವೇಳೆ ಯಡವಟ್ಟು ಮಾಡಿಕೊಂಡಿದ್ದಾರೆ.ಕೀನಾಶಕ ಸಿಂಪಡಿಸಿದ ನಂತರ ಕೈತೊಳಿಯದೆ ನೀರನ್ನು ಕುಡಿದ ಸ್ವಲ್ಪ ಸಮಯದ ನಂತರ ಆಹಾರವನ್ನು ಸೇವಿಸಿದ್ದಾರೆ. ಹೊಟ್ಟೆಯಲ್ಲಿ ಉರಿ ಕಾಣಿಸಿಕೊಂಡಿದೆ ನಂತರ ತಮ್ಮ ಖಾಸಗಿ ಆಸ್ಪತ್ರೆಗೆ ತೆರಳಿ ವೈಧ್ಯರನ್ನು ಸಂಪರ್ಕಿಸಿದಾಗ ಆಂಟಿಬಯಾಡಿಕ್ ಮಾತ್ರೆ ನೀಡಿದ್ದಾರೆ.
ನಂತರ ಮರುದಿನ ಹುಬ್ಬಳ್ಳಿಯ ಎಸ್ ಡಿ ಎಮ್ ಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿಯೂ ಸಹ ಚಿಕಿತ್ಸೆ ನೀಡಲು ಒಂದು ದಿನ ವಿಳಂಭವಾಗಿದೆ.ಚಿಕಿತ್ಸೆ ನಡೆಸಿದಾಗ ಆಗಲೇ ಕಿಡ್ನಿ, ಲಿವರ್, ಲಂಗ್ಸ್ ಗಳು ಡ್ಯಾಮೇಜ್ ಆಗಿರುವುದು ಕಂಡುಬಂದಿದೆ ನಂತರ ಹೆಚ್ಚಿನ ಚಿಕೆತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಅಲ್ಲಿಯೂ ಕೂಡಾ ಚಿಕಿತ್ಸೆಗೆ ಸ್ಪಂದಿಸದ ಯೋಗೀಶ್ ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ದುರಾದೃಷ್ಟವಷಾತ್ ನಿನ್ನೆ ರಾತ್ರಿ ಯೋಗಿಶ್ ಕೊನೆಯುಸಿರೆಳೆದಿದ್ದಾರೆ.
ಆದರೆ ಇಲ್ಲಿಯವರೆಗೂ ಪೊಲೀಸ್ ಠಾಣೆಯಲ್ಲಿ ಈ ಘಟನೆ ಕುರಿತು ಯಾವುದೇ ಪ್ರಕರಣ ದಾಖಲು ಮಾಡದೆ ನಿರ್ಲಕ್ಷ ತೋರಿದ್ದಾರೆ. ಅಧಿಕಾರಿಗೆ ಹೆಂಡತಿ ಮಕ್ಕಳಿದ್ದೂ ಅವರ ಕುಟುಂಬಕ್ಕೆ ಇಲ್ಲಿಯವರೆಗೂ ಸ್ಪಂದಿಸುತಿಲ್ಲ. ಅರಣ್ಯಾಧಿಕಾರಿ ಸಾವಿನ ಘಟನೆಯನ್ನು ಮಣ್ಣಲ್ಲೆ ಮುಚ್ಚಿ ಹಾಕುವ ಹುನ್ನಾರು ನಡೆಸುತಿದ್ದಾರೆ. ಕರ್ತವ್ಯದಲ್ಲಿರುವಾಗಲೇ ಈ ಘಟನೆ ನಡೆದರೂ ಇಲ್ಲಿಯವರೆಗೂ ಯಾರು ಸಹ ಸಹಕರಿಸಿಲ್ಲ.
ಇನ್ನೊಂದು ವಿಷಯ ತಿಲಿಯುವುದೇನೆಂದರೆ ಅರಣ್ಯದ ಮಣ್ಣಲ್ಲಿ ಈ ರೀತಿಯ ಪ್ಯಾರಾಕ್ಯೂಟ್ ಎನ್ನುವ ವಿಷಪೂರಿತ ಕೀಟನಾಶಕ ಸಿಂಪಡಿಸುವ ಅವಶ್ಯಕತೆ ಇತ್ತಾ ? ಒಂದು ವೇಳೆ ಕೀಟ ಈ ಸಸಿಗಳನ್ನು ಕಾಡಿನಲ್ಲಿರುವ ಪ್ರಾಣಿಗಳು ಸೇವಿಸಿದರೆ ಅವುಗಳ ಗತಿ ಏನು ಎನ್ನುವ ಪ್ರಶ್ನೆ ಪರಿಸಿರ ಪ್ರೇಮಿಗಳು ಕೇಳುತಿದ್ದಾರೆ .
ಸಿಡ್ನಿಯಲ್ಲಿರುವ ಸ್ವಾಮಿನಾರಾಯಣ ದೇಗುಲ ಧ್ವಂಸ: ಖಲಿಸ್ತಾನಿಗಳಿಂದ ಕೃತ್ಯ