Friday, June 2, 2023

Latest Posts

ಚುನಾವಣಾ ರಾಜಕೀಯಕ್ಕೆ ಜಿಟಿಡಿ ಗುಡ್ ಬೈ..!

- Advertisement -

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಎದುರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದ ಮಾಜಿ ಸಚಿವ ಜಿ ಟಿ ದೇವೇಗೌಡರು, ಸದ್ಯ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಭಾರಿ ನೊಂದಿದ್ದೇನೆ. ನನಗೆ ರಾಜಕೀಯ ಸಾಕಾಗಿದೆ. ಇಷ್ಟು ದಿನ ನಾನು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ಸ್ಪರ್ದಿಸುವುದಿಲ್ಲ ಎಂದು ಹೀಗಾಗಲೇ ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ.

ಚುನಾವಣೆ ನೋವು ನನಗಷ್ಟೇ ಗೊತ್ತು. ಮುಂದಿನ ಮೂರೂವರೆ ವರ್ಷ, ಕ್ಷೇತ್ರದ ಜನರ ಜೊತೆ ಇರುತ್ತೇನೆ. ಇಷ್ಟು ದಿನ ನನ್ನ ಜನರಿಗೆ ನಾನು ಧನ್ಯವಾದವನ್ನು ಸಹಿತ ಹೇಳುವುದಕ್ಕೆ ಆಗಿಲ್ಲ. ರಾಜಕೀಯ ಬದುಕಿನಲ್ಲಿ ನಾನು, ಯಾರ ಹಂಗಿನಲ್ಲೂ ಬದುಕಿಲ್ಲ.

ನನಗೆ ಯಾವುದೇ ರಾಜಕೀಯ ಗುರುಗಳಿಲ್ಲ. ಕುಮಾರಸ್ವಾಮಿ, ದೇವೇಗೌಡ, ಸಿದ್ದರಾಮಯ್ಯ ಯಾರಿಂದಲೂ ನನಗೆ ಸಹಾಯವಾಗಿಲ್ಲ. ಅಷ್ಟೇ ಅಲ್ಲದೇ ಚುನಾವಣೆಗಳಿಗಾಗಿ ಜೆಡಿಎಸ್‌ನಿಂದ, ಒಂದೇ ಒಂದು ರೂಪಾಯಿ ಹಣ ಪಡೆದಿಲ್ಲ. ನನ್ನ ಸ್ವಂತ ಹಣದಿಂದ ಎಲ್ಲವನ್ನೂ ಮಾಡಿದ್ದೇನೆ. ಮೈತ್ರಿ ಸರ್ಕಾರದಲ್ಲಿ ನನಗೆ ಉನ್ನತ ಶಿಕ್ಷಣ ಖಾತೆ ಬೇಡ ಎಂದು ಒಂದು ತಿಂಗಳು ದೂರ ಸರಿದಿದ್ದೆ. ಕಡೆಗೂ ನನಗೆ ಇಷ್ಟವಾದ ಖಾತೆ ಸಿಗಲಿಲ್ಲ. ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ ಎಂದು ಹೇಳುವ ಮೂಲಕ, ತಮ್ಮ ಬೇಸರವನ್ನ ಹೊರಹಾಕಿದ್ರು.

https://www.youtube.com/watch?v=BKeg2BM0578
- Advertisement -

Latest Posts

Don't Miss