Tuesday, April 30, 2024

Latest Posts

ಆಚಾರ್ಯ ಚಾಣಕ್ಯರ ಪ್ರಕಾರ ಈ 5 ಜನರ ಸಹಾಯ ಎಂದಿಗೂ ಮಾಡಬೇಡಿ..

- Advertisement -

Spiritual Story: ಜೀವನದಲ್ಲಿ ಪ್ರತಿಯೊಬ್ಬರೂ, ಒಮ್ಮೆಯಾದರೂ ಸಹಾಯ ಮಾಡಿ, ಯಾಕಾದ್ರೂ ಸಹಾಯ ಮಾಡಿದ್ನೋ ಅನ್ನೋ ಪರಿಸ್ಥಿತಿ ತಂದುಕೊಂಡಿರುತ್ತೀರಿ. ಸಹಾಯ ಮಾಡುವುದು ಒಳ್ಳೆಯ ಗುಣ ಆದರೆ, ಈ ರೀತಿ ಯಾಕಾದ್ರೂ ಸಹಾಯ ಮಾಡಿದೆನೋ ಅನ್ನೋ ಪರಿಸ್ಥಿತಿ ತಂದುಕೊಳ್ಳುವುದು ಮಾತ್ರ ಮೂರ್ಖತನ ಅಂತಾರೆ ಚಾಣಕ್ಯರು. ಚಾಣಕ್ಯರ ಪ್ರಕಾರ 5 ಜನರಿಗೆ ಎಂದಿಗೂ ಸಹಾಯ ಮಾಡಬಾರದಂತೆ. ಹಾಗಾದ್ರೆ ಯಾರು ಆ 5 ಜನ ಅಂತಾ ತಿಳಿಯೋಣ ಬನ್ನಿ..

ಮದ್ಯ ಸೇವನೆ ಮಾಡುವವರು: ಮದ್ಯ ಸೇವನೆ ಮಾಡುವವರಿಗೆ, ಸದಾ ನಶೆಯದ್ದೆ ಧ್ಯಾನವಿರುತ್ತದೆ. ಅಂಥವರಿಗೆ ನೀವು ಸಹಾಯ ಮಾಡಿದರೆ, ಅದರಿಂದೇನೂ ಪ್ರಯೋಜನವಾಗುವುದಿಲ್ಲ. ಮತ್ತು ನಶೆಯ ದಾಸರಾಗಿರುವವರು ಸದಾ ಸುಳ್ಳನ್ನೇ ನುಡಿಯುತ್ತಾರೆ. ಅಂಥವರಿಗೆ ಹಣದ ಸಹಾಯ ಮಾಡಿದರೆ, ಅದರಿಂದ ನಿಮಗೇ ನಷ್ಟವಾಗುತ್ತದೆ.

ಚರಿತ್ರಹೀನರು: ಹೆಣ್ಣಾಗಲಿ ಗಂಡಾಗಲಿ, ಯಾರು ಚರಿತ್ರಹೀನರಾಗಿರುತ್ತಾರೋ, ಅಂಥವರ ಸಹಾಯ ಎಂದಿಗೂ ಮಾಡಬಾರದು. ಮದುವೆಯಾದರೂ ಪರ ಪುರುಷನ, ಸ್ತ್ರೀಯ ಸಹವಾಸ ಮಾಡುವುದು. ಅಥವಾ ವಿವಾಾಹಕ್ಕೂ ಮುನ್ನ ಸಿಕ್ಕ ಸಿಕ್ಕವರೊಂದಿಗೆ ಸಂಬಂಧವಿರಿಸಿಕೊಳ್ಳುವವರು ಚರಿತ್ರ ಹೀನರೆನ್ನಿಸಿಕೊಳ್ಳುತ್ತಾರೆ. ಅಂಥವರು ಸಹಾಯ ಮಾಡಿದವರನ್ನೇ ಕಷ್ಟದಲ್ಲಿ ಸಿಕ್ಕಿಸಿ ಹಾಕಬಹುದು. ಹಾಗಾಗಿ ಇಂಥವರ ಸಹಾಯ ಎಂದಿಗೂ ಮಾಡಬೇಡಿ.

ದುರಾಸೆಯುಳ್ಳವರು: ದುರಾಸೆಯುಳ್ಳ ಜನರಿಗೆ ಸಹಾಯ ಮಾಡುವುದು, ಗಿಫ್ಟ್ ನೀಡುವುದು, ಅಂಥವರಿಂದ ಪ್ರೀತಿ, ಕಾಳಜಿ ಬಯಸುವುದೆಲ್ಲ ಮೂರ್ಖತನ. ಅಂಥವರು ಎಂದಿಗೂ ಯಾರಿಗೂ ಪ್ರೀತಿ, ಕಾಳಜಿ ನೀಡುವುದಿಲ್ಲ. ಅವರ ಕಣ್ಣು ನಿಮ್ಮ ಬಳಿ ಇರುವ ದುಡ್ಡು, ನೀವು ಕೊಡುವ ಉಡುಗೊರೆಯ ಮೇಲಿರುತ್ತದೆ. ನೀವು ಪಾಪರ್ ಆದಿರಿ ಎಂದು ಗೊತ್ತಾದ ತಕ್ಷಣ, ಅಂಥವರು ನಿಮ್ಮ ಜೀವನದಿಂದ ದೂರ ಹೋಗುತ್ತಾರೆ.  ಹಾಗಾಗಿ ಮನುಷ್ಯನ ಗುಣ ತಿಳಿದಿ ಸಹಾಯ ಮಾಡಿ.

ಅತೃಪ್ತರು: ಓರ್ವ ಮನುಷ್ಯನ ಬಳಿ ಎಷ್ಟೇ ಸಂಪತ್ತಿದ್ದರೂ, ಪ್ರೀತಿ ಕಾಳಜಿ ಮಾಡುವವರಿದ್ದರೂ, ಅವರ ಎಲ್ಲ ಬಯಕೆಗಳು ಈಡೇರಿದ್ದರೂ ಕೂಡ, ಯಾರು ಅತೃಪ್ತರಾಗಿರುತ್ತಾರೋ, ಅಂಥವರಿಂದ ದೂರ ಉಳಿಯುವುದೇ ಲೇಸು ಅಂತಾರೆ ಚಾಣಕ್ಯರು. ಏಕೆಂದರೆ, ಅಂಥವರು ಬರೀ ಬೇರೆಯವರ ಬಳಿ ಏನಿದೆಯೋ ಅದನ್ನು ಗಮನಿಸುತ್ತಾರೆ ವಿನಃ, ತನ್ನ ಬಳಿ ಏನಿದೆಯೋ, ಅದನ್ನು ಅನುಭವಿಸುವ ಗೌಜಿಗೆ ಹೋಗುವುದಿಲ್ಲ. ಇಂಥವರೊಂದಿಗೆ ಇದ್ದರೆ, ಅವರ ಬಾಳು ಕೂಡ ದುಃಖತಪ್ತವಾಗಿರುತ್ತದೆ.

ಇನ್ನೊಬ್ಬರಿಗೆ ಸಹಾಯ ಮಾಡಲು ಹಿಂಜರಿಯುವವರು. ಇನ್ನೊಬ್ಬರು ಕಷ್ಟದಲ್ಲಿದ್ದಾಗ, ಅಥವಾ ಸಂಬಂಧಿಕರೇ ಕಷ್ಟದಲ್ಲಿರುವಾಗ, ಸಹಾಯ ಮಾಡಲು ಹಿಂಜರಿಯುವವನ ಸಹಾಯಕ್ಕೆ ಎಂದಿಗೂ ಯಾರೂ ಬರುವುದಿಲ್ಲ. ಉತ್ತಮರು ಕಷ್ಟದಲ್ಲಿದ್ದರೆ, ಅಂಥವರ ಕಷ್ಟಕ್ಕೆ ನಾವು ಸ್ಪಂದಿಸಬೇಕು. ಯೋಗ್ಯತೆ ಇದ್ದೂ ಸ್ಪಂದಿಸದಿದ್ದಲ್ಲಿ, ಅಂಥವರ ಕಷ್ಟಕ್ಕೆ ದೇವರೂ ಸ್ಪಂದಿಸುವುದಿಲ್ಲ.

 

ಈ 4 ವಿಚಾರಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಅಂತಾರೆ ಚಾಣಕ್ಯರು..

ಬಾಲರಾಮನಿಗೆ 7 ಕೆಜಿ ತೂಕದ ಚಿನ್ನದ ರಾಮಾಯಣ ಪುಸ್ತಕ ಅರ್ಪಿಸಿದ ನಿವೃತ್ತ ಐಎಎಸ್ ಅಧಿಕಾರಿ

ಲಕ್ಷ್ಮೀ ವಾರವಾದ ಶುಕ್ರವಾರದ ದಿನ ಇಂಥ ಕೆಲಸಗಳನ್ನು ಎಂದಿಗೂ ಮಾಡಬೇಡಿ

- Advertisement -

Latest Posts

Don't Miss