Wednesday, May 15, 2024

Latest Posts

ನಿಮ್ಮ ಪತ್ನಿಯಲ್ಲಿ ಇಂಥ ಗುಣವಿದ್ದರೆ ನೀವೇ ಅದೃಷ್ಟವಂತರು ಅಂತಾರೆ ಚಾಣಕ್ಯರು..

- Advertisement -

Spiritual Story: ಇಂದಿನ ಕಾಲದಲ್ಲಿ ಗುಣವಂತ, ಪತಿಯೊಂದಿಗೆ ಹೊಂದಿಕೊಂಡು ಹೋಗುವ, ವಿದ್ಯಾವಂತ ಹೆಣ್ಣು ಸಿಗುವುದು ತುಂಬಾನೇ ಅಪರೂಪ. ಚಾಣಕ್ಯರ ಪ್ರಕಾರ ನಿಮಗೆ ಕೆಲ ಗುಣವಿರುವ ಹೆಣ್ಣು ಸಿಕ್ಕರೆ ನೀವೇ ಅದೃಷ್ಟವಂತರಂತೆ. ಹಾಗಾದ್ರೆ ಒಂದು ಅತ್ಯುತ್ತಮ ಪತ್ನಿಯಾಗಬೇಕಾದರೆ ಎಂಥ ಗುಣವಿರಬೇಕು ಅಂತಾ ತಿಳಿಯೋಣ ಬನ್ನಿ..

ಮೊದಲ ಗುಣ ಮುಖದಲ್ಲಿ ಕಳೆ ಮತ್ತು ಸರಳ ಗುಣ: ನಿಮ್ಮ ಪತ್ನಿಯಾದವಳು ಕಪ್ಪಗಿದ್ದರೂ, ಆಕೆಯ ಮುಖದಲ್ಲಿ ಕಳೆ ಇದ್ದು, ಆಕೆ ಹೆಚ್ಚು ಶೋಕಿ ಮಾಡದೇ, ಸರಳವಾಗಿದ್ದರೆ, ಆಕೆ ಉತ್ತಮ ಹೆಣ್ಣು ಎಂದರ್ಥ. ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಮೇಕಪ್ ಹಾಕದೇ, ಹೊರಗೆ ಹೋಗಲು ಅಂಜುತ್ತಾರೆ. ಆದರೆ ನಿಮ್ಮ ಪತ್ನಿಯಾದವಳು, ಮೇಕಪ್ ಇಲ್ಲದೆಯೂ ಇರಲು ಇಷ್ಟಪಡುತ್ತಾಳೆ. ಮತ್ತು ಆಕೆಗೆ ಸರಳತೆ ಒಪ್ಪುತ್ತದೆ ಎಂದರೆ ನೀವು ಅದೃಷ್ಟವಂತರು ಎಂದೇ ಅರ್ಥ.

ಎರಡನೇಯ ಗುಣ ಬುದ್ಧಿವಂತಿಕೆ: ಪತ್ನಿಯಾದವಳಿಗೆ ಮನೆ ನಿಭಾಯಿಸುವ, ಖರ್ಚು ಕಡಿಮೆ ಮಾಡಿ ಸಂಸಾರ ಮಾಡುವ, ಸಂಬಂಧ ನಿಭಾಯಿಸುವ ಬುದ್ಧಿವಂತಿಕೆಯ ಗುಣವಿದ್ದಲ್ಲಿ, ಅಂಥ ಹೆಣ್ಣು ಮಕ್ಕಳಿರುವ ಮನೆಯಲ್ಲಿ ಎಂದಿಗೂ ಆರ್ಥಿಕ ಕಷ್ಟ ಬರುವುದಿಲ್ಲ. ಏಕೆಂದರೆ, ಹೆಣ್ಣು ಮಕ್ಕಳು ಕೂಡಿಟ್ಟ ಹಣ ಕಷ್ಟಕಾಲಕ್ಕೆ ಆಗುತ್ತದೆ.

ಮೂರನೇಯ ಗುಣ ಕಾಳಜಿಯ ಗುಣ: ಪತ್ನಿಯಾದವಳು ಬರೀ ಪತಿಗಷ್ಟೇ ಅಲ್ಲದೇ, ಪತಿಯ ಅಪ್ಪ, ಅಮ್ಮನ, ಮಕ್ಕಳ ಕಾಳಜಿ ಮಾಡುವುದು ಮುಖ್ಯ. ನಿಮ್ಮ ಪತ್ನಿಯಲ್ಲಿ ಎಲ್ಲರನ್ನೂ ಪ್ರೀತಿಸುವ, ಕಾಳಜಿ ಮಾಡುವ ಗುಣವಿದ್ದಲ್ಲಿ, ಅಂಥ ಪತ್ನಿ ಪಡೆದ ನೀವೇ ಪುಣ್ಯವಂತರು.

ನಾಲ್ಕನೇಯ ಗುಣ ಗುಟ್ಟು ಕಾಪಾಡಿಕೊಳ್ಳುವುದು: ಮನೆಯಲ್ಲಿ ಹಲವು ಬಾರಿ ಜಗಳ ನಡೆಯುತ್ತದೆ. ಪತಿ ಬಯ್ಯಬಹುದು ಹೊಡೆಯಬಹುದು. ಅಥವಾ ಅತ್ತೆ, ಮಾವ, ನಾದಿನಿ ಜೊತೆ ಜಗಳವಾಗಿರಬಹುದು. ಅದನ್ನು ಸಂಬಂಧಿಕರ ಬಳಿ, ತವರು ಮನೆಯವರ ಬಳಿ, ಸ್ನೇಹಿತರ ಬಳಿ ಹೇಳಿಕೊಳ್ಳಬಾರದು. ನಿಮ್ಮ ಪತ್ನಿಯಾದವಳು ಕೂಡ ಈ ರೀತಿ ಮನೆಯ ಮರ್ಯಾದೆ ಹೋಗುತ್ತದೆ ಎಂಬ ವಿಷಯ ಅರಿತು, ಗುಟ್ಟನ್ನು ಕಾಪಾಡಿಕೊಳ್ಳುವ ಗುಣ ಹೊಂದಿದ್ದಲ್ಲಿ, ಆಕೆ ಅತ್ಯುತ್ತಮ ಪತ್ನಿಯಾಗಿರುತ್ತಾಳೆ.

ಈ 4 ವಿಚಾರಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಅಂತಾರೆ ಚಾಣಕ್ಯರು..

ಬಾಲರಾಮನಿಗೆ 7 ಕೆಜಿ ತೂಕದ ಚಿನ್ನದ ರಾಮಾಯಣ ಪುಸ್ತಕ ಅರ್ಪಿಸಿದ ನಿವೃತ್ತ ಐಎಎಸ್ ಅಧಿಕಾರಿ

ಲಕ್ಷ್ಮೀ ವಾರವಾದ ಶುಕ್ರವಾರದ ದಿನ ಇಂಥ ಕೆಲಸಗಳನ್ನು ಎಂದಿಗೂ ಮಾಡಬೇಡಿ

- Advertisement -

Latest Posts

Don't Miss