ಸಕ್ಕರೆ ಖಾಯಿಲೆ ಇದ್ದವರಿಗೆ ಸಕ್ಕರೆ ಸೇವಿಸಬಾರದು ಅಂತಾ ಗೊತ್ತಿರುತ್ತೆ. ಆದ್ರೆ ಯಾವ ಹಣ್ಣು ಸೇವಿಸಬೇಕು ಮತ್ತು ಯಾವ ಹಣ್ಣು ಸೇವಿಸಬಾರದು ಅಂತಾ ಗೊತ್ತಿರೋದಿಲ್ಲಾ. ಆದ್ದರಿಂದ ನಾವಿವತ್ತು ಶುಗರ್ ಪೇಶೆಂಟ್‌ಗಳು ಯಾವ ಹಣ್ಣನ್ನ ತಿನ್ನಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.
ಕಿವಿ ಫ್ರೂಟ್- ಕಿವಿ ಫ್ರೂಟ್‌ನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯವಿರುತ್ತದೆ. ಅಲ್ಲದೇ, ಸಕ್ಕರೆ ಖಾಯಿಲೆ ಇದ್ದವರು ಇದನ್ನ ತಿನ್ನುವುದರಿಂದ, ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗದೇ ಇರಲು ಇದು ಸಹಾಯ ಮಾಡುತ್ತದೆ.
ಕಿತ್ತಳೆ- ಕಿತ್ತಳೆ ಹಣ್ಣು ತಿಂದರೆ ಸುಮಾರು ಪ್ರಯೋಜನಗಳಿದೆ. ಅದರಲ್ಲಿ ಸಕ್ಕರೆ ಖಾಯಿಲೆಯನ್ನ ಕಂಟ್ರೋಲ್‌ನಲ್ಲಿಡುವ ಗುಣ ಕೂಡಾ ಒಂದು. ವಿಟಾಮಿನ್ ಸಿಯಿಂದ ಭರಪೂರವಾಗಿರುವ ಕಿತ್ತಳೆ ಹಣ್ಣು, ಫೈಬರ್ ಅಂಶವನ್ನೂ ಹೊಂದಿದೆ. ಇದೆಲ್ಲ ಗುಣಗಳಿರುವ ಕಾರಣಕ್ಕೆ ಕಿತ್ತಳೆ ಹಣ್ಣು ಸೇವನೆಯಿಂದ ಶುಗರ್ ಕಂಟ್ರೋಲಿನಲ್ಲಿರುತ್ತದೆ.
ಬೆಣ್ಣೆ ಹಣ್ಣು- ಬೆಣ್ಣೆ ಹಣ್ಣಿನಿಂದ ನೀವು ಸಲಾಡ್ ಮಾಡಿ ಅಥವಾ ಮಿಲ್ಕ್ ಶೇಕ್ ಮಾಡಿ ಸೇವಿಸಬೇಕು. ಬೆಣ್ಣೆ ಹಣ್ಣು ಸಪ್ಪೆಯಾಗಿರುವ ಕಾರಣ, ಬೆಣ್ಣೆ ಹಣ್ಣಿನಲ್ಲಿ ಗ್ಲೂಕೋಸ್ ಪ್ರಮಾಣವಿರುವುದಿಲ್ಲ. ಹಾಗಾಗಿ ಇದು ಶುಗರ್ ಇದ್ದವರು ಬಳಸಬಹುದು.
ಪೇರಲೆ ಹಣ್ಣು- ಪೇರಲೆ ಹಣ್ಣು ಎಲ್ಲ ಹಣ್ಣಿಗಿಂತ ಉತ್ತಮ ಹಣ್ಣು. ಇದನ್ನು ತಿನ್ನುವುದರಿಂದ ಶುಗರ್ ಕಂಟ್ರೋಲಿನಲ್ಲಿರುವುದಲ್ಲದೇ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇನ್ನು ನಿಮಗೆ ಆ್ಯಪಲ್ ಸೇವಿಸಲು ಆಗದಿದ್ದಲ್ಲಿ, ಈ ಹಣ್ಣನ್ನ ತಿನ್ನಬಹುದು. ಇದರಲ್ಲಿ ಆ್ಯಪಲ್‌ಗಿಂತ ಹೆಚ್ಚಿನ ಪೋಷಕಾಂಶಗಳಿದೆ.
ಸೇಬು ಹಣ್ಣು- ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರು ತಿನ್ನಬಹುದಾದ ಉತ್ತಮ ಹಣ್ಣು ಅಂದ್ರೆ ಸೇಬು ಹಣ್ಣು. ಸೇಬು ಹಣ್ಣು ತಿಂದ್ರೆ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚುತ್ತದೆ. ಅಲ್ಲದೇ, ಸಕ್ಕರೆ ಖಾಯಿಲೆ ಇದ್ದವರು ಇದನ್ನ ಆರಾಮವಾಗಿ ಸೇವಿಸಬಹುದು.
ಈ ಮೇಲೆ ತಿಳಿಸಿದ ಹಣ್ಣುಗಳನ್ನು ತಿನ್ನಬಹುದು. ಆದ್ರೆ ಅದನ್ನ ಮಿತಿಯಲ್ಲಿ ಸೇವಿಸಿ. ಮತ್ತು ಚೆನ್ನಾಗಿ ತೊಳೆದು ತಿನ್ನಿ. ಹೆಚ್ಚಾಗಿ ಸೇವಿಸಿದ್ರೆ ಸಕ್ಕರೆ ಪ್ರಮಾಣ ಹೆಚ್ಚಾಗಲೂಬಹುದು. ಹಾಗಾಗಿ ಯಾವ ಆಹಾರ, ಹಣ್ಣು ಹಂಪಲು ಸೇವಿಸುವುದಿದ್ದರೂ, ಮಿತಿಯಾಗಿ ಸೇವಿಸಿ.