- Advertisement -
ಚಿತ್ರದುರ್ಗ: ಜನರ ಮೇಲೆ ದಾಳಿ ಮಾಡಿ ಪದೇ ಪದೇ ಆತಂಕ ಸೃಷ್ಟಿ ಮಾಡುತ್ತಿದ್ದ ಚಿರತೆಯನ್ನು ರೈತರು ಮನಸೋಯಿಚ್ಛೆ ಥಳಿಸಿ ಹತ್ಯೆ ಮಾಡಿರುವ ಘಟನೆ ಹೊಸದುರ್ಗದಲ್ಲಿ ನಡೆದಿದೆ.
ಹೊಸದುರ್ಗ ತಾಲೂಕಿನ ಕುರುಬರಹಳ್ಳಿ ಬಳಿ ಈ ಘಟನೆ ನಡೆದಿದೆ. ಪದೇ ಪದೇ ಗ್ರಾಮದ ಬಳಿ ಸುಳಿದು ಸಾಕು ಪ್ರಾಣಿಗಳ ಮೇಲೆರಗಿ ಜನರಲ್ಲಿ ಚಿರತೆ ಭೀತಿ ಹುಟ್ಟಿಸಿತ್ತು. ಅಲ್ಲದೆ ಇಂದು ಬೆಳಗ್ಗೆ ಗ್ರಾಮದ ಇಬ್ಬರ ಮೇಲೆರಗಿ ತೀವ್ರವಾಗಿ ಗಾಯಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಕಲ್ಲು ದೊಣ್ಣೆಗಳನ್ನು ಹಿಡಿದು ಚಿರತೆಯ ಬೆನ್ನಟ್ಟಿದ್ರು. ಅಲ್ಲದೆ ಚಿರತೆ ಸೆರೆಹಿಡಿಯೋಕೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದಿದ್ರೂ ಅವರ ಸಮ್ಮುಖದಲ್ಲೇ ಮಾನವೀಯತೆ ಮರೆತ ಗ್ರಾಮಸ್ಥರು ಚಿರತೆಯನ್ನು ಹೊಡೆದು ಹತ್ಯೆಗೈದಿದ್ದಾರೆ.
ನಿರುದ್ಯೋಗಿಗಳಿಗೆ ಗುಡ್ ನ್ಯೂಸ್!! ಮಿಸ್ ಮಾಡದೇ ಈ ವಿಡಿಯೋ ನೋಡಿ
- Advertisement -