Saturday, April 19, 2025

Latest Posts

Ganesh Chaturthi Special: ಇಡೀ ವಿಶ್ವದಲ್ಲಿ ಕಾಣ ಸಿಗುವ ಏಕೈಕ ಬಾಲಗಣೇಶನೀತ

- Advertisement -

Spiritual: ಇದೇ ಸೆಪ್ಟೆಂಬರ್ 7ಕ್ಕೆ ಗಣೇಶ ಚತುರ್ಥಿ ಬರುತ್ತಿದ್ದು, ಈಗಾಗಲೇ ಭಾರತದಲ್ಲಿ ಗಣಪನನ್ನು ಬರ ಮಾಡಿಕೊಳ್ಳಲು ಭರ್ಜರಿ ಸಿದ್ಧತೆ ನಡೆಯುತ್ತಿದೆ. ಇನ್ನು ಕರ್ನಾಟಕದಲ್ಲಿರುವ ಪ್ರಸಿದ್ಧ ಗಣಪನ ದೇವಸ್ಥಾನದಲ್ಲಿಯೂ ಹಬ್ಬವನ್ನು ಭಾರೀ ಸಂಭ್ರಮದಿಂದ ಆಚರಿಸಲಾಗುತ್ತದೆ. ಅಂಥ ಪ್ರಸಿದ್ಧ ದೇವಸ್ಥಾನಗಳಲ್ಲಿ ಇಡಗುಂಜಿ ಮಹಾಗಣಪತಿ ದೇವಸ್ಥಾನ ಕೂಡ ಒಂದು. ಇಂದು ನಾವು ಇಡಗುಂಜಿ ದೇವಸ್ಥಾನದ ವಿಶೇಷತೆಗಳ ಬಗ್ಗೆ ಹೇಳಲಿದ್ದೇವೆ.

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಇಡಗುಂಜಿಯಲ್ಲಿ ಈ ಮಹತೋಬಾರ ಇಡಗುಂಜಿ ಗಣಪನ ದೇವಸ್ಥಾನವಿದೆ. ಇಡೀ ವಿಶ್ವದಲ್ಲಿ ನೀವು ಕಾಣಬಹುದಾದ ಏಕೈಕ ಬಾಲಗಣೇಶ ಅಂದ್ರೆ ಅದು ಇಡಗುಂಜಿ ಮಹಾಗಣಪತಿ. ಅಲ್ಲದೇ ಬೇರೆ ಫೋಟೋಗಳಲ್ಲಿ ನೀವು ನೋಡಿದ್ರೆ, ಗಣೇಶ ಏಕದಂತನಾಗಿದ್ದಾನೆ. ಆದ್ರೆ ಇಲ್ಲಿ ಗಣೇಶನಿಗೆ ಎರಡೂ ದಂತಗಳಿದೆ. ಪ್ರತಿದಿನ ಇಲ್ಲಿ ಗಣೇಶನಿಗೆ ವಿಶೇಷ ಪೂಜೆ, ಅಲಂಕಾರ, ನೈವೇದ್ಯ, ಅಭಿಷೇಕ ಎಲ್ಲವೂ ನಡೆಯುತ್ತದೆ.

ಇನ್ನು ಮಹಾಗಣಪತಿ ಈ ಸ್ಥಳದಲ್ಲಿ ಬಂದು ನೆಲೆಸಲು ಕಾರಣವೇನು ಅಂದ್ರೆ, ವಾಲಖಿಲ್ಯ ಎಂಬ ಋಷಿಗಳು ಈ ಸ್ಥಳದಲ್ಲಿ ಹೋಮ ಹವನ ಮಾಡಿಕೊಂಡಿದ್ದರು. ಆದರೆ ಅವರಿಗೆ ಈ ಕೆಲಸ ಮಾಡಲು ತೊಂದರೆಯಾಗುತ್ತಿತ್ತು. ಆಗ ತ್ರಿಲೋಕ ಸಂಚಾರಿಯಾದ ನಾರದರು, ಈ ಸ್ಥಳದಲ್ಲಿ ಗಣೇಶನನ್ನು ಪೂಜಿಸಿದರೆ, ನಿಮ್ಮೆಲ್ಲ ಸಮಸ್ಯೆ ದೂರವಾಗುತ್ತದೆ. ನಾನೇ ಈ ಸ್ಥಳಕ್ಕೆ ಗಣೇಶನನ್ನು ಕರೆತರುತ್ತೇನೆ ಎಂದು ಹೇಳಿ, ಗಣೇಶನ ಮನವೊಲಿಸಿ ಕರೆತರುತ್ತಾರೆ.

ಜೊತೆಗೆ ನಿನಗೆ ನಿತ್ಯವೂ ಪಂಚಕಜ್ಜಾಯ ನೈವೇದ್ಯ ಮಾಡುವುದಾಗಿ ಹೇಳುತ್ತಾರೆ. ಇದೇ ಕಾರಣಕ್ಕೆ ಇಂದಿಗೂ ಒಂದು ದಿನವೂ ತಪ್ಪದೇ, ಶ್ರೀಗಣೇಶನಿಗೆ ಇಲ್ಲಿ ಪಂಚಕಜ್ಜಾಯ ನೈವೇದ್ಯ ಮಾಡಲಾಗುತ್ತದೆ. ಯಾವ ದಿನ ಇಲ್ಲಿ ಪಂಚಕಜ್ಜಾಯ ನೈವೇದ್ಯವಾಗುವುದಿಲ್ಲವೋ, ಅದೇ ಮಹಾಗಣಪತಿ ಇಡಗುಂಜಿಯನ್ನು ಬಿಟ್ಟು ಹೋಗುತ್ತಾನೆಂದು ಹಿರಿಯರು ಹೇಳುತ್ತಾರೆ..

ಇನ್ನು ಮಹಾಗಣಪತಿ ಇಲ್ಲಿ ಬಂದು ನೆಲೆ ನಿಂತ ಬಳಿಕ, ನಾರದರು ಇದನ್ನು ಇಡಗುಂಜಿ ಎಂದು ನಾಮಕರಣ ಮಾಡಿದರು. ಮೊದಲು ಈ ಸ್ಥಳ ಗುಂಜವನವಾಗಿದ್ದ ಕಾರಣ, ನಾರದರು ಇಡಾಗುಂಜ ಎಂದು ಹೇಳಿದರು. ಇಡ ಎಂದರೆ ಎಡ ಮತ್ತು ಗುಂಜ ಎಂದರೆ, ಗಿಡ ಮರಗಳಿರುವ ಸ್ಥಳ. ಹಾಗಾಗಿ ಗುಂಜವನ ಇಡಗುಂಜಿಯಾಯಿತು. ಗಣೇಶ ಚತುರ್ಥಿಯಂದು ಇಲ್ಲಿ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

- Advertisement -

Latest Posts

Don't Miss