Sunday, September 15, 2024

Latest Posts

Ganesh Chaturthi Special: ಗಣೇಶನಿಗೆ ನೈವೇದ್ಯ ಮಾಡಬಹುದಾದ ಕಾಯಿ ಮೋದಕ ರೆಸಿಪಿ

- Advertisement -

Recipe: ಗೌರಿ ಗಣೇಶ ಹಬ್ಬ ಸಮೀಪಿಸುತ್ತಿದೆ. ಈ ವೇಳೆ ನೈವೇದ್ಯಕ್ಕಾಗಿ ವಿಧ ವಿಧದ ಅಡುಗೆಗಳನ್ನು ಮಾಡಬೇಕಾಗತ್ತೆ. ಅದರಲ್ಲೂ ಗಣೇಶನಿಗೆ ಇಷ್ಟವಾದ ಮೋದಕವನ್ನು ಭಕ್ತರು ತಪ್ಪದೇ ಮಾಡಲೇಬೇಕು. ಹಾಗಾಗಿ ನಾವಿಂದು ಕಾಯಿ ಮೋದಕವನ್ನು ಹೇಗೆ ಮಾಡಬೇಕು ಅಂತಾ ಹೇಳಲಿದ್ದೇವೆ.

ಬೇಕಾಗುವ ಸಾಮಗ್ರಿ: ಒಂದು ಕಪ್ ಗೋಧಿ ಹಿಟ್ಟು, ಕಾಲು ಕಪ್ ಮೈದಾ, ನಾಲ್ಕು ಸ್ಪೂನ್ ತುಪ್ಪ, ಒಂದು ಸ್ಪೂನ್ ಬಿಳಿ ಎಳ್ಳು, 1 ಕಪ್ ಕಾಯಿತುರಿ, ಮುಕ್ಕಾಲು ಕಪ್ ಬೆಲ್ಲ, ಡ್ರೈಫ್ರೂಟ್ಸ್, ಏಲಕ್ಕಿ ಪುಡಿ, ಕೊಂಚ ಉಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ: ಮೊದಲು ಗೋದಿ ಹಿಟ್ಟು, ಮೈದಾ, ಉಪ್ಪು, ತುಪ್ಪ, ನೀರು ಹಾಕಿ ಹಿಟ್ಟು ಕಲಿಸಿಕೊಳ್ಳಿ. ಬಳಿಕ ಪ್ಯಾನ್ ಬಿಸಿ ಮಾಡಿ, ಅದಕ್ಕೆ ತುಪ್ಪ, ಎಳ್ಳು ಹಾಕಿ ಹುರಿಯಿರಿ. ಬಳಿಕ ಕಾಯಿತುರಿ ಸೇರಿಸಿ, ಮಧ್ಯಮ ಉರಿಯಲ್ಲಿಟ್ಟು, 2 ನಿಮಿಷ ಹುರಿಯಿರಿ.

ಬಳಿಕ ಇದಕ್ಕೆ ಬೆಲ್ಲ ಸೇರಿಸಿ ಮಿಕ್ಸ್ ಮಾಡಿ. ಬಳಿಕ ಡ್ರೈಫ್ರೂಟ್ಸ್, ಕೊಂಚ ಏಲಕ್ಕಿ ಪುಡಿ, ಹಾಕಿ ಮಿಕ್ಸ್ ಮಾಡಿ 1 ನಿಮಿಷ ಹುರಿದರೆ, ಹೂರಣ ರೆಡಿ. ಈಗ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ, ಲಟ್ಟಿಸಿ, ಅದರಲ್ಲಿ ಹೂರಣವನ್ನು ಹಾಕಿ ಮೋದಕದ ಶೇಪ್ ಕೊಟ್ಟು, ಎಣ್ಣೆಯಲ್ಲಿ ಚಿನ್ನದ ಬಣ್ಣ ಬರುವವರೆಗೂ ಕರಿದರೆ, ಮೋದಕ ರೆಡಿ.

- Advertisement -

Latest Posts

Don't Miss