Wednesday, March 12, 2025

Latest Posts

ರೈಲಿನ ಮೂಲಕ ಬಂದು ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ಗೋವಾ ಸಿಎಂ ಪ್ರಮೋದ್ ಸಾವಂತ್

- Advertisement -

News: ಕೊಲ್ಲೂರು: ಗೋವಾ ಸಿಎಂ ಪ್ರಮೋದ್ ಸಾವಂತ್ ಉಡುಪಿಯ ಕೊಲ್ಲೂರಿಗೆ ರೈಲಿನ ಮೂಲಕ ಬಂದು, ಮೂಕಾಂಬಿಕೆಯ ದರ್ಶನ ಪಡೆದಿದ್ದಾರೆ.

ಗೋವಾದಿಂದ ಬೈಂದೂರು ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ಪ್ರಮೋದ್ ಸಾವಂತ್ ಅವರನ್ನು ಶಾಸಕರಾಾದ ಗುರುರಾಜ್ ಅವರು ಬರಮಾಡಿಕೊಂಡರು. ಬಳಿಕ ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನಕ್ಕೆ ಹೋಗಿ, ದೇವಿ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೇ ಚಂಡಿಕಾ ಹೋಮದಲ್ಲೂ ಭಾಗಿಯಾಗಿದ್ದರು.

ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನ ಚಂಡಿಕಾ ಹೋಮಕ್ಕಾಗಿಯೇ ಪ್ರಸಿದ್ಧಿ ಪಡೆದಿದೆ. ಇಲ್ಲಿ ಪ್ರತಿದಿನ ಚಂಡಿಕಾ ಹೋಮ ನಡೆಯುತ್ತದೆ. ಕೆಲವು ದಿನ ಭಕ್ತರು ಚಂಡಿಕಾ ಹೋಮ ನಡೆಸುತ್ತಾರೆ. ಮತ್ತೆ ಕೆಲವು ದಿನ, ದೇವಸ್ಥಾನದಿಂದಲೇ ಚಂಡಿಕಾ ಹೋಮ ನಡೆಸಲಾಗುತ್ತದೆ.

ಹಲವರು ನಟ ನಟಿಯರು, ರಾಜಕಾರಣಿಗಳು ಕಷ್ಟಕಾಲದಲ್ಲಿ ದೇವಿಯ ದರ್ಶನ ಪಡೆದು, ಕಷ್ಟದಿಂದ ಪಾರಾದ ಎಷ್ಟೋ ಉದಾಹರಣೆಗಳಿದೆ. ಕೆಲ ದಿನಗಳ ಹಿಂದೆ ನಟ ದರ್ಶನ್ ಜೈಲು ವಾಸ ಅನುಭವಿಸುತ್ತಿದ್ದಾಗ, ಪತ್ನಿ ವಿಜಯಲಕ್ಷ್ಮೀ ದೇವಿ ದರ್ಶನ ಮಾಡಿ, ಚಂಡಿಕಾ ಯಾಗದಲ್ಲಿ ಭಾಗವಹಿಸಿ, ಪತಿಯನ್ನು ಜೈಲಿನಿಂದ ಬಿಡುಗಡೆಯಾಗುವಂತೆ ಮಾಡೆಂದು ದೇವಿಯಲ್ಲಿ ಬೇಡಿದ್ದರು. ಕೆಲ ತಿಂಗಳಲ್ಲೇ ದರ್ಶನ್‌ಗೆ ಬೇಲ್ ಸಿಕ್ಕಿತು.

- Advertisement -

Latest Posts

Don't Miss