Friday, December 27, 2024

Latest Posts

ಗೋದ್ರಾ ದುರಂತದ ರೀತಿಯ ಘಟನೆ ಮತ್ತೊಮ್ಮೆ ಮರುಕಳಿಸಬಹುದು: ಬಿ.ಕೆ. ಹರಿಪ್ರಸಾದ್

- Advertisement -

Political News: ಅಯೋಧ್ಯೆಗೆ ಹೋಗುವವರಿಗೆ ದೇವರೇ ರಕ್ಷಣೆ ಕೊಡಬೇಕು. ಗೋದ್ರಾ ರೀತಿಯ ದುರಂತ ಮತ್ತೊಮ್ಮೆ ನಡೆಯಬಹುದು. ನನಗೆ ಈ ಬಗ್ಗೆ ಮಾಹಿತಿ ಬಂದಿದೆ. ಹಾಗಾಗಿ ನಾನು ಈ ರೀತಿ ಹೇಳುತ್ತಿದ್ದೇನೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ.

ಗುಜರಾತ್‌ನಲ್ಲಿ ಈ ರೀತಿ ರಾಮಭಕ್ತರಾದ ಕರಸೇವಕರ ಹತ್ಯೆ ನಡೆದಿತ್ತು. ಅದೇ ರೀತಿ ಅಯೋಧ್ಯೆ ಕಾರ್ಯಕ್ರಮದಲ್ಲಿ ಘಚನೆ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ನನಗೆ ಮಾಹಿತಿ ಇದೆ. ಮಾಹಿತಿ ಇದ್ದೇ ನಾನು ಈ ರೀತಿ ಹೇಳುತ್ತಿದ್ದೇನೆ. ಹಾಗಾಗಿ ಕರ್ನಾಟಕದಿಂದ ಯಾರ್ಯಾರು ಅಯೋಧ್ಯೆಗೆ ಹೋಗುತ್ತಾರೋ, ಅವರಿಗೆ ಸರಿಯಾದ ರೀತಿಯ ಬಂದೋಬಸ್ತ್ ಮಾಡಿಕೊಡಬೇಕಾಗುತ್ತದೆ. ಇಲ್ಲದೇ ಹೋದರೆ, ನಾವು ಮತ್ತೊಂದು ಗೋದ್ರಾಾವನ್ನು ಕರ್ನಾಟಕದಲ್ಲಿ ನೋಡಬೇಕಾಗುತ್ತದೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ರೈಲಿನಲ್ಲಿ ರಾಮನ ಜಪ ಮಾಡುತ್ತ ಹೋಗುತ್ತಿದ್ದ ಕರ ಸೇವಕರನ್ನು ಬೆಂಕಿ ಹಚ್ಚಿ ಸುಡಲಾಗಿತ್ತು. ಆಗ ಇಡೀ ಗುಜರಾತ್‌ನಲ್ಲಿ ಧರ್ಮ ಧರ್ಮಗಳ ನಡುವೆ ದೊಡ್ಡ ಸಂಘರ್ಷವೇ ನಡೆದಿತ್ತು. ಈ ರೀತಿಯ ಘಟನೆ ಮತ್ತೆ ಮರುಕಳಿಸಬಹುದು. ಅಯೋಧ್ಯೆಗೆ ಹೋಗುವವರನ್ನು ಆ ದೇವರೇ ಕಾಪಾಡಬೇಕು ಎಂದು ಬಿ.ಕೆ.ಹರಿ ಪ್ರಸಾದ್ ಹೇಳಿದ್ದು, ಬಿಜೆಪಿಗರು ಇವರ ವಿರುದ್ಧ ಕಿಡಿಕಾರಿದ್ದಾರೆ.

ಅಯೋಧ್ಯೆಗೆ ಹೋಗಲು ನಿರಾಕರಿಸುತ್ತಿದ್ದವರೂ ಈಗ ಆಹ್ವಾನ ಬಯಸುತ್ತಿದ್ದಾರೆ: ಯೋಗಿ ಆದಿತ್ಯವಾಥ್

ರೋಗಿಯ ಕುಟುಂಬಸ್ಥರ ಒಪ್ಪಿಗೆ ಇದ್ದರೆ ಮಾತ್ರ ICUಗೆ ದಾಖಲಿಸಬಹುದು: ಕೇಂದ್ರ ಆಸ್ಪತ್ರೆಯ ಹೊಸ ರೂಲ್ಸ್

ಇತಿಹಾಸದಲ್ಲಿ ಮೊದಲ ಬಾರಿಗೆ ಅಯ್ಯಪ್ಪಸ್ವಾಮಿಯ ದರ್ಶನ ಪಡೆದ ಮಂಗಳಮುಖಿ..

- Advertisement -

Latest Posts

Don't Miss