Hubballi News: ಹುಬ್ಬಳ್ಳಿ: ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ, ಹುಬ್ಬಳ್ಳಿಯಲ್ಲಿ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ ಕಿಡಿಕಾರಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್ ಅಶೋಕಗೆ ಹರಿಪ್ರಸಾದ ಬಗ್ಗೆ ಪ್ರಶ್ನೆ ಕೇಳಿದ್ದೇ ತಡ, ನಡುವೆಯೇ ಆಕ್ರೋಶದಿಂದ ಬೆಲ್ಲದ್ ಪ್ರತಿಕ್ರಿಯಿಸಿದ್ದಾರೆ. ಗೊದ್ರಾದಲ್ಲಿ ರಾಮ ಭಕ್ತರ ಮೇಲೆ ಮುಸ್ಲೀಂರು ಸುಟ್ಟವರು ಯಾರು. ಸರ್ಕಾರ ರಕ್ಷಣೆ ಕೊಡಬೇಕು, ಗೋದ್ರಾದಲ್ಲಿ ಸುಟ್ಟವರು ಮುಸ್ಲಿಮರು. ಗೋದ್ರಾ ಮಾಡಿದಂತೆ ಮಾಡ್ತೇನೆ ಎಂದರೆ ಏನು, ಹಿಂದೂಗಳನ್ನ ಸುಡ್ತಿರಾ..? ಎಂದು ಬೆಲ್ಲದ್ ಪ್ರಶ್ನಿಸಿದ್ದಾರೆ.
ಹರಿಪ್ರಸಾದ ಅವರು ಕೂಡಾ ಗೋದ್ರಾದಲ್ಲಿ ಹಿಂದೂಗಳ ಮೇಲೆ ದಾಳಿಯಾಗಿದೆ. ಅವರನ್ನ ಸುಡಲಾಯಿತು. ಇದನ್ನ ಹೇಳಿ ಅವರು ಹೆದರಿಸುವ ಕೆಲಸ ಮಾಡುತಿದ್ದಾರೆ. ಕಾಂಗ್ರೆಸ್ ಕೇವಲ ಮುಸ್ಲಿಮರು ಮತ ಹಾಕಿದ್ದಾರಾ, ಹಿಂದುಗಳು ವೋಟ್ ಹಾಕಿಲ್ವಾ. ಎಲ್ಲರ ರಕ್ಷಣೆ ಕೊಡಬೇಕು ಎಂದು ಇವರಿಗೆ ಗೊತ್ತಿಲ್ವಾ. ಗೋದ್ರಾ ರೀತಿ ಘಟನೆ ಮರುಕಳಿಸಲಿದೆ ಎಂದು ಹೇಳ್ತಾರೆ. ಇವರು ಏನು ಮಾಡುತಿದ್ದಾರೆ, ಇವರನ್ನ ಬಂಧನ ಮಾಡಬೇಕು. ಮತಿಯ ಭಾವನೆ ಕೆರಳಿಸಿ ಮುಸ್ಲಿಂ ಸಮಾಜದಿಂದ ಹಿಂದೂಗಳ ಮೇಲೆ ದಾಳಿ ಮಾಡಿಸುವ ಹುನ್ನಾರ ಇದು. ಸರ್ಕಾರ ಈ ಕೂಡಲೇ ಕ್ರಮ ತಗೊಬೇಕು ಎಂದು ಬೆಲ್ಲದ್ ಆಗ್ರಹಿಸಿದ್ದಾರೆ.
ರಾಮ ಚೈತ್ರ ಯುಗದವನು, ಒಳ್ಳೆ ಆಡಳಿತಕ್ಕೆ ರಾಮ ರಾಜ್ಯ ಅಂದರೆ ಆದರ್ಶ ರಾಜ್ಯ. ಅಂಥ ರಾಮನ ದೇವಸ್ಥಾನ ಉದ್ಘಾಟನೆ ಎಂದರೆ ಅದು ಸಾರ್ವಜನಿಕ ಕಾರ್ಯಕ್ರಮ. ಇದಕ್ಕೆ ರಾಜಕಾರಣ ಸಂಬಂಧ ಇಲ್ಲಾ. ಬಿಜೆಪಿ ಹುಟ್ಟುವ ಮೊದಲಿನ ಕೆಸ್ ಅದು. ಕೋರ್ಟ್ ದಲ್ಲಿ ಇತ್ಯರ್ಥ ಆದ ಮೇಲೆ ದೇವಾಲಯ ಕಟ್ಟಲಾಗಿದೆ. ರಾಹುಲ್ ಗಾಂಧಿ ಖರ್ಗೆ ಅವರಿಗೆ ಕೂಡಾ ಆಹ್ವಾನ ಇದೆ, ಅವರಿಗೆ ಭಕ್ತಿ ಇದ್ದರೆ ಅಟೆಂಡ್ ಆಗಲಿ. ಇಲ್ಲಂದ್ರೆ ಮಸೀದಿಗೆ ಹೋಗಿ ನಮಾಜ್ ಮಾಡಲಿ ಎಂದು ಬೆಲ್ಲದ್ ಹೇಳಿದ್ದಾರೆ.
ಹುಬ್ಬಳ್ಳಿ ಕೇಸ್ ಬಗ್ಗೆ ಮಾತನಾಡಿದ ಬೆಲ್ಲದ್, ರೌಡಿ ಶೀಟರ್ ಇದ್ದರೆ ಮೊದಲು ಹಿಡಿಯಬೇಕಿತ್ತು. ಅಶೋಕ್ ಸಿಂಘಾಲ್ ಇದ್ದಾಗಿನ ಕೆಸ್ ಅದು. ನಿಜವಾದ ಕೆಸ್ ಇದ್ದರೆ ಹಿಡಿಯಬೇಕಿತ್ತು ಎಂದು ಬೆಲ್ಲದ್ ಹೇಳಿದ್ದಾರೆ.
ಅಯೋಧ್ಯೆಗೆ ಹೋಗಲು ನಿರಾಕರಿಸುತ್ತಿದ್ದವರೂ ಈಗ ಆಹ್ವಾನ ಬಯಸುತ್ತಿದ್ದಾರೆ: ಯೋಗಿ ಆದಿತ್ಯವಾಥ್
ರೋಗಿಯ ಕುಟುಂಬಸ್ಥರ ಒಪ್ಪಿಗೆ ಇದ್ದರೆ ಮಾತ್ರ ICUಗೆ ದಾಖಲಿಸಬಹುದು: ಕೇಂದ್ರ ಆಸ್ಪತ್ರೆಯ ಹೊಸ ರೂಲ್ಸ್
ಇತಿಹಾಸದಲ್ಲಿ ಮೊದಲ ಬಾರಿಗೆ ಅಯ್ಯಪ್ಪಸ್ವಾಮಿಯ ದರ್ಶನ ಪಡೆದ ಮಂಗಳಮುಖಿ..