ಕೆಲ ವಾರಗಳ ಹಿಂದೆ ಮೃಣಾಲ್ ಠಾಕೂರ್ ಮತ್ತು ತಮಿಳು ನಟ ಧನುಶ್ ನಡುವಿನ ಪ್ರೇಮ ಹಾಗೂ ಮದುವೆ ಗಾಸಿಪ್ ಗಳು ಸಖತ್ ಟ್ರೆಂಡಿಂಗ್‌ನಲ್ಲಿತ್ತು. ಆದರೆ ನಟಿ ಮೃಣಾಲ್ ಈ ಗಾಸಿಪ್‌ಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು.
ಇದೀಗ ಮತ್ತೆ ಈ ಜೋಡಿ ಕುರಿತು ಹೊಸ ಸಿನಿಮಾ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಒಟ್ಟಿಗೆ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ವಿಚಾರ ಹೊರ ಬಿದ್ದಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ವರದಿಗಳ ಪ್ರಕಾರ, ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಧನುಶ್ ಅವರು ನಿರ್ದೇಶನ ಮಾಡಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. . ಈ ಮೂಲಕ ಮೃಣಾಲ್ ಮೊದಲ ಬಾರಿಗೆ ತಮಿಳು ಚಿತ್ರರಂಗಕ್ಕೆ ಪ್ರವೇಶಿಸಲಿದ್ದಾರೆ. ಈ ಕುರಿತು ಇನ್ನೂ ಅಧಿಕೃತ ಘೋಷಣೆ ಹೊರಬಂದಿಲ್ಲ. ಆದರೆ ಹಳೆಯ ಗಾಸಿಪ್‌ಗಳ ಜೊತೆ ಈ ಹೊಸ ಸುದ್ದಿ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ.
ಒಟ್ಟಿನಲ್ಲಿ, ಇದು ನಿಜವಾದ ಸಿನಿಮಾ ಅಪ್ಡೇಟ್ ಆಗುತ್ತದೆಯೇ ಅಥವಾ ಕೇವಲ ಚರ್ಚೆಯಷ್ಟೇ ಆಗಿಯೇ ಉಳಿಯುತ್ತದೆಯೇ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.




