- Advertisement -
www.karnatakatv.net :ರಾಯಚೂರು : ನಗರದ ಹೃದಯ ಭಾಗದಲ್ಲಿರುವ ರಂಗಮಂದಿರದ ಕಟ್ಟಡವನ್ನು ದುಷ್ಕರ್ಮಿಗಳು ದ್ವಂಸಮಮಾಡಿದ್ದಾರೆ. ರಾಯಚೂರು ನಗರದಲ್ಲಿರುವ ರಂಗಮಂದಿರದಲ್ಲಿ ಕೊರೋನಾದಿಂದಾಗಿ ಕಳೆದ ವರ್ಷ ವಿಧಿಸಿದ್ದ ಲಾಕ್ ಡೌನ್ ಕಾರಣ ಯಾವುದೇ ಕಾರ್ಯಕ್ರಮ ನಡೆಯುತ್ತಿರಲಿಲ್ಲ. ಅಲ್ಲದೆ ಈ ರಂಗಮಂದಿರದಲ್ಲಿ ಪುಂಡ-ಪೋಕರಿಗಳ ಅಡ್ಡಾ ಆಗಿತ್ತು. ಅಲ್ಲದೆ ಅನೈತಿಕ ಚಟುವಟಿಕೆಗಳಿಗೂ ಬಳೆಕಯಾಗ್ತಿತ್ತು ಎನ್ನಲಾಗಿದೆ.
ಅಷ್ಟು ಸಾಲದು ಎಂಬಂತೆ ಇದೀಗ ಸರ್ಕಾರಿ ರಂಗಮಂದಿರ ಕಟ್ಟದ ಮೆಟ್ಟಿಲಿನ ಗೋಡೆಯನ್ನು ಧ್ವಂಸ ಮಾಡಲಾಗಿದೆ.ಈ ಕುರಿತು ಸ್ಥಳೀಯರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಮನಕ್ಕೆ ತಂದಿದ್ದಾರೆ. ಬಳಿಕ ಇಲಾಖೆಯ ನಿರ್ದೇಶಕ ರಾಯಚೂರು ಪಶ್ಚಿಮ ಠಾಣೆಗೆ ದೂರು ನೀಡಿದ್ದು, ಸರ್ಕಾರಿ ಆಸ್ತಿ ಪಾಸ್ತಿಗೆ ಹಾನಿ ಮಾಡಿದ ಆರೋಪದಡಿ ಅಪರಿಚಿತ ದುಷ್ಕರ್ಮಿಗಳ ಮೇಲೆ ಪ್ರಕರಣ ದಾಖಲಾಗಿದೆ.
ಅನೀಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು
- Advertisement -