ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುತ್ತಿರೋ ಅಕ್ಕಿಯ ಪ್ರಮಾಣವನ್ನು ಏರಿಕೆ ಮಾಡುವ ಕುರಿತಂತೆ ಇಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಿತು. ಅಕ್ಕಿ ವಿತರಣೆ ಜಾಸ್ತಿ ಮಾಡಿ ಅಂತ ಕಾಂಗ್ರೆಸ್, ಇಲ್ಲ ಜಾಸ್ತಿ ಮಾಡೋ ಚಾನ್ಸೇ ಇಲ್ಲ, ಅಂತ ಜೆಡಿಎಸ್ ಸಚಿವರು. ಹೀಗೆ ಚೌಕಾಸಿ ಮಾಡಿ ಕೊನೆಗೆ ಯಥಾವತ್ತಾಗಿ ಯೋಜನೆ ಮುಂದುವರಿಸಲು ತೀರ್ಮಾನ ಮಾಡಲಾಯ್ತು.
ಸಚಿವ ಸಂಪುಟ ಸಭೆಯಲ್ಲಿ ಇವತ್ತು ಅನ್ನಭಾಗ್ಯ ಯೋಜನೆಯಡಿ ವಿತರಿಸುತ್ತಿರೋ ಅಕ್ಕಿಯನ್ನ ಜಾಸ್ತಿ ಮಾಡೋಣ ಇದರಿಂದ ಬಡವರಿಗೆ ಅನುಕೂಲವಾಗುತ್ತೆ ಅಂತ ಕಾಂಗ್ರೆಸ್ ಸಚಿವರು ಪ್ರಸ್ತಾಪಿಸಿದ್ರು. ಆದ್ರೆ ಇದಕ್ಕೊಪ್ಪದ ಸಿಎಂ ಕುಮಾರಸ್ವಾಮಿ, ಇದೀಗ ಬಡವರಿಗೆ ನೀಡಲಾಗ್ತಿರೋ ಅಕ್ಕಿಯನ್ನ ಅವರೇ ಅಂಗಡಿಯವರಿಗೆ ಮಾರಾಟಮಾಡುತ್ತಿದ್ದಾರೆ. ಹೀಗಾಗಿ 7 ಕೆ.ಜಿ ಗೆ ಬದಲಾಗಿ 5 ಕೆಜಿ ವಿತರಣೆ ಮಾಡೋಣ. ಇದರಿಂದ ಉಳಿತಾಯವಾಗೋ ಹಣವನ್ನ ಅಭಿವೃದ್ಧಿ ಕೆಲಸಗಳಿಗೆ ಬಳಸಬಹುದು ಅಂತ ಹೇಳಿದ್ರು.
ಆದ್ರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಜಮೀರ್ ಅಹಮದ್, ಬಿಲ್ ಕುಲ್ ಆಗಲ್ಲ, ಕೊಡೋ ಹಾಗಿದ್ರೆ ಜಾಸ್ತಿ ಕೊಡೋಣ, ಕಡಿಮೆ ಮಾಡಿದ್ರೆ, ಮೋದಿ ವಿತರಿಸುತ್ತಿರೋ ಅಕ್ಕಿಯನ್ನೇ ನಾವು ಜನರಿಗೆ ತಲುಪಿಸುತ್ತಿದ್ದೀವಿ ಎನ್ನುವಂತಾಗುತ್ತೆ. ಹೀಗಾಗಿ ಕಡಿಮೆ ಮಾಡಲೇಬೇಡಿ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ರು.
ಬಳಿಕ ಈ ವಿಚಾರವಾಗಿ ಚರ್ಚಿಸಿದ ಮೈತ್ರಿ ಸಚಿವರು ಇದೀಗ ನೀಡುತ್ತಿರೋ 7 ಕೆಜಿ ಅಕ್ಕಿ ವಿತರಣೆಯನ್ನೇ ಮುಂದುವರಿಸಿಕೊಂಡು ಹೋಗೋಣ ಅಂತ ನಿರ್ಧಾರಕ್ಕೆ ಬಂದಿದ್ದಾರೆ.
ಸರ್ಕಾರ ಮಾಡ್ತಿರೋ ಪೂಜೆಯಿಂದ ಮಳೆ ಬರುತ್ತಾ…??? ಈ ಪರ್ಜನ್ಯ ಹೋಮ ಅಂದರೇನು…? ತಪ್ಪದೇ ಈ ವಿಡಿಯೋ ನೋಡಿ