ಬೆಂಗಳೂರು: ವಿಶ್ವಾಸಮತ ಯಾಚನೆ ಕುರಿತು ಸದನದಲ್ಲಿ ಉಂಟಾಗಿರುವ ಗದ್ದಲ ರಾಜ್ಯಪಾಲರ ಬಾಗಿಲು ಬಡಿಸಿತು. ಕಾಂಗ್ರೆಸ್-ಜೆಡಿಎಸ್ ವಿಶ್ವಾಸಮತ ಯಾಚನೆ ಮುಂದೂಡಿಕೆ ಮಾಡಬೇಕೆಂದು ಸ್ಪೀಕರ್ ಗೆ ಮನವಿ ಮಾಡಿದ್ದನ್ನು ವಿರೋಧಿಸಿ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿತ್ತು. ಇದಕ್ಕೆ ಸ್ಪಂದಿಸಿರೋ ರಾಜ್ಯಪಾಲರು ಇಂದೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಸಲು ಸೂಚನೆ ನೀಡಿದ್ದಾರೆ.
ಅತೃಪ್ತ ಶಾಸಕರು ವಿಪ್ ಉಲ್ಲಂಘನೆ ಕುರಿತಾಗಿ ಇತ್ಯಾರ್ಥವಾಗೋವರೆಗೂ ವಿಶ್ವಾಸಮತ ಮುಂದೂಡಿಕೆ ಮಾಡಿ ಅಂತ ಹೇಳಿದ್ದ ಮೈತ್ರಿ ಪಕ್ಷದ ಸದ್ಯರು ಸ್ಪೀಕರ್ ಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಪಾಲರನ್ನು ಭೇಟಿ ಮಾಡಿತ್ತು. ಪತನದಂಚಿನಲ್ಲಿರೋ ಸರ್ಕಾರವನ್ನು ಉಳಿಸಿಕೊಳ್ಳೋದಕ್ಕೆ ಮೈತ್ರಿ ಪಕ್ಷ ಸದಸ್ಯರು ನಾಟಕ ಮಾಡುತ್ತಿದ್ದಾರೆ ಅಂತ ಆರೋಪ ಮಾಡಿದ್ದ ಬಿಜೆಪಿ ನಿಯೋಗಕ್ಕೆ ಸ್ಪಂದಿಸಿರೋ ರಾಜ್ಯಪಾಲರು ಇಂದೇ ವಿಶ್ವಾಸಮತ ಯಾಚನೆಗೆ ಅವಕಾಶ ನೀಡೋದಾಗಿ ಸ್ಪೀಕರ್ ಗೆ ಸೂಚನೆ ನೀಡಿದ್ದಾರೆ.
ಆದ್ರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರೋ ಕಾಂಗ್ರೆಸ್, ಬಿಜೆಪಿ ತಾಳಕ್ಕೆ ರಾಜ್ಯಪಾಲರು ಮೇಳ ಹಾಕಿದಂತೆ ಸಂದೇಶ ರವಾನಿಸಿದ್ದಾರೆ. ಇದು ಪಕ್ಷಪಾತಿ ಧೋರಣೆ ಅಂತ ಸದನದಲ್ಲಿ ಗದ್ದಲವೆಬ್ಬಿಸಿದ್ರು. ಅಲ್ಲದೆ ಯಾವುದೇ ಕಾರಣಕ್ಕೂ ಕೆಲವೊಂದು ಕಾನೂನಾತ್ಮಕ ವಿಚಾರಗಳನ್ನು ಚರ್ಚೆಗೆ ಒಳಪಡಿಸದೆ ವಿಶ್ವಾಸಮತ ಯಾಚನೆಕಗೆ ಅವಕಾಶ ಮಾಡಿಕೊಡಬಾರದು ಅಂತ ಕಾಂಗ್ರೆಸ್ ಪಟ್ಟು ಹಿಡಿದಿದೆ. ಇನ್ನು ಬಿಜೆಪಿ ಇವತ್ತು ಎಷ್ಟೊತ್ತಾದರೂ ಸರಿ ವಿಶ್ವಾಸಮತ ಯಾಚನೆಯಾಗಲೇ ಬೇಕು ಅಂತ ಒತ್ತಾಯಿಸಿದೆ. ಈ ಕುರಿತು ಸ್ಪೀಕರ್ ಸ್ಪಷ್ಟ ನಿರ್ಣಯ ಕೈಗೊಳ್ಳದ ಹಿನ್ನೆಲೆಯಲ್ಲಿ ಸದನದಲ್ಲಿ ಗದ್ದಲ ಮುಂದುವರಿದಿದೆ.
ಜೋಡೆತ್ತುಗಳ ಕಡೇ ಆಟ ಸಕ್ಸಸ್ ಆಗುತ್ತಾ..?ಮಿಸ್ ಮಾಡದೇ ಈ ವಿಡಿಯೋ ನೋಡಿ