ಯಾರಿಗೂ ಸಕ್ಸಸ್ ಅನ್ನೋದು ಈಸಿಯಾಗಿ ಒಲಿದು ಬರೋದಿಲ್ಲ. ಯಶಸ್ಸು ಸಿಗಬೇಕು ಅಂದ್ರೆ ಕಷ್ಟಪಡಬೇಕು. ತಾಳ್ಮೆಯಿಂದಿರಬೇಕು. ಅವಮಾನ ಸನ್ಮಾನಗಳನ್ನ ಒಂದೇ ರೀತಿ ಕಾಣುವುದನ್ನೂ ಕಲಿಯಬೇಕು. ಆಗ ಮಾತ್ರ ನಾವು ಯಶಸ್ಸಿನ ಮೆಟ್ಟಿಲು ಹತ್ತೋಕ್ಕೆ ಸಾಧ್ಯ. ಇದೇ ರೀತಿ ಗೌರವ್ ಶೆಟಟ್ಟಿಗೂ ಕೂಡ ಯಶಸ್ಸು ಈಸಿಯಾಗಿ ಸಿಕ್ಕಿಲ್ಲ. ಅವರು ಕೂಡ ಕಷ್ಟಪಟ್ಟು ಈಗ ಫೇಮಸ್ ಆಗಿದ್ದಾರೆ. ಈ ಬಗ್ಗೆ ಗೌರವ್ ಮಾತನಾಡಿದ್ದಾರೆ.
ಗೌರವ್‌ಗೆ ಟೈಮ್ ಸಿಕ್ಕಾಗ, ಹೊಸ ಹೊಸ ಕಥೆಗಳನ್ನು ಬರೆದು ಇಡ್ತಾರಂತೆ. ಅವಕಾಶ ಸಿಕ್ಕಾಗ ಆ ಕಥೆಗೆ ಡೈರೆಕ್ಷನ್ ಮಾಡ್ಬೇಕು ಅನ್ನೋದು ಅವರ ಕನಸು. ಗೌರವ್ ಪ್ರಕಾರ, ಹಿಂದೆ ಮಾಡಿರುವ ಕೆಲ ರೂಲ್ಸ್‌ಗಳನ್ನ ನಾವು ಚೇಂಜ್ ಮಾಡಿ, ನಮ್ಮ ದಾರಿಯಲ್ಲಿ ನಾವು ನಡಿಯಬೇಕು. ನಾವು ನಾವೇ ತಡೆ ಗೋಡೆ ಹಾಕಿಕೊಳ್ಳುವ ಬದಲು. ಹೊಸದಾಗಿ ನಾವೇ ಏನಾದರೂ ಮಾಡ್ಬೇಕು ಅನ್ನೋದು ಗೌರವ್ ಯೋಚನೆ.
ಇನ್ನು ಗೌರವ್‌ಗೂ ಕೂಡ ಸಿನಿ ಇಂಡಸ್ಟ್ರಿಯಲ್ಲಿ ಹಲವು ಅಡೆತಡೆಗಳಾಗಿದೆ. ಶೂಟಿಂಗ್ ಇದೆ ಎಂದು ಕರೆದು ಮನೆಗೆ ಕಳಿಸೋದು, ರೋಲ್ ಕೊಟ್ಟು ರಿಜೆಕ್ಟ್ ಮಾಡಿ ಕಳಿಸೋದು, ಹೀಗೆ ಲ್ಲ ಆಗಿದೆಯಂತೆ. ಆದ್ರೆ ಗೌರವ್, ಅದು ಅವರ ತಪ್ಪು ಅಂತಾ ಹೇಳೋಕ್ಕೆ ಆಗಲ್ಲ. ಕೆಲವೊಮ್ಮೆ ಅಲ್ಲಿಯೂ ಪ್ರಾಬ್ಲ್ಂ ಆಗಿರುತ್ತದೆ. ಅವ್ರು ಕೂಡ ಕಷ್ಟಪಟ್ಟಿರ್ತಾರೆ. ಹಾಗಾಗಿ ಅವ್ರದ್ದು ತಪ್ಪು ಅಂತಾ ಹೇಳೋಕ್ಕೆ ಆಗಲ್ಲ ಅಂತಾ ಹೇಳ್ತಾರೆ ಗೌರವ್.