International News: ಶಿಶು ಕುಡಿಯುವ ಬಾಟಲಿಯ ಹಾಲಿಗೆ ಅಜ್ಜಿ ಮದ್ಯ ಬೆರೆಸಿ, ಕುಡಿಸಿದ್ದು, 4 ತಿಂಗಳ ಮಗು ಕೋಮಾಗೆ ಜಾರಿದ ಘಟನೆ ಇಟಲಿಯಲ್ಲಿ ನಡೆದಿದೆ.
ಅಜ್ಜಿ ಬೇಕಂತಲೇ ಈ ಕೃತ್ಯ ಮಾಡದಿದ್ದರೂ, ಅಪ್ಪಿ ತಪ್ಪಿ ಹಾಲಿಗೆ ಮದ್ಯ ಬೆರೆಸಿದೆ. ಮಗು ಹಾಲು ಕುಡಿದ ತಕ್ಷಣ, ಅಳಲು ಪ್ರಾರಂಭಿಸಿದ್ದು, ಮಮಗು ಏಕೆ ಅಳುತ್ತಿದೆ ಎಂದು ಅಜ್ಜಿ ಹಾಲಿನ ವಾಸನೆ ನೋಡಿದ್ದಾರೆ. ಆಗ ಹಾಲಿನಲ್ಲಿ ಮದ್ಯ ಬೆರೆತಿರುವುದು ಬೆಳಕಿಗೆ ಬಂದಿದೆ. ಆಗ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗು ಕೋಮಾಗೆ ಹೋಗಿದ್ದು, ಚಿಕಿತ್ಸೆ ಪಡೆದ ಬಳಿಕ, ಕೊಂಚ ಚೇತರಿಸಿಕೊಂಡಿದೆ.
ಸದ್ಯ ಮಗುವಿಗೆ ಐಸಿಯುವಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಗು ಸದ್ಯ ಪ್ರಾಣಾಪಾಯದಿಂದ ಪಾಾರಾಗಿದ್ದು, ಮಗುವಿನ ಜೀವಕ್ಕೇನಾದರೂ ಅಪಾಯವಾದರೆ ಮಾತ್ರ, ಅಜ್ಜಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಟಲಿ ಪೊಲೀಸರು ಹೇಳಿಕೆ ನೀಡಿದ್ದಾರೆ.
ನಿಮ್ಮ ಮುತ್ತಾತ ಬಂದ್ರು ಕಾಶ್ಮೀರದಲ್ಲಿ 370 ಆರ್ಟಿಕಲ್ ವಾಪಸ್ ತರೋಕ್ಕೆ ಆಗಲ್ಲ: ಪ್ರಹ್ಲಾದ್ ಜೋಶಿ
ದೇಶದ ಸುರಕ್ಷತೆ, ಅಭಿವೃದ್ಧಿಗಾಗಿ ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ತಕ್ಕ ಪಾಠ: ಬಿ.ವೈ.ವಿಜಯೇಂದ್ರ