Tuesday, April 15, 2025

Latest Posts

Jaipur Pink Panthers ತಂಡವನ್ನು ಮಣಿಸಿದ ಗುಜರಾತ್ ಜೈಂಟ್ಸ್ ..!

- Advertisement -

ಬೆಂಗಳೂರು : ಪ್ರೊ ಕಬಡ್ಡಿ 8ನೇ ಆವೃತ್ತಿಯು ಡಿಸೆಂಬರ್ 22 ರಿಂದ ಆರಂಭವಾಗಿದ್ದು, ನಿನ್ನೆ ನಡೆದಂತಹ ಮೊದಲ ಪಂದ್ಯದಲ್ಲಿ Gujarat Giants (ಗುಜರಾತ್ ಜೈಂಟ್ಸ್ ) Jaipur Pink Panthers (ಜೈಪುರ್ ಪಿಂಕ್ ಪ್ಯಾಂಥರ್ಸ್) ತಂಡವನ್ನು 34 – 27 ಅಂತರದಿಂದ ಪರಾಭವಗೊಳಿಸಿತು. ಪಂದ್ಯದ 20 ನಿಮಿಷದ ಮೊದಲಾರ್ಧದಲ್ಲಿ ಗುಜರಾತ್ 2 ಪಾಯಿಂಟ್ ಗಳ ಮುನ್ನಡೆಯನ್ನು ಸಾಧಿಸಿತ್ತು. ಗುಜರಾತ್ 19 ಪಾಯಿಂಟ್ ಗಳನ್ನು ಹೊಂದಿದ್ದರೆ, ಜೈಪುರ್ 17 ಅಂಕಗಳನ್ನು ಗಳಿಸಿತ್ತು. ಮೊದಲಾರ್ಧದ ನಂತರ ಯೋಜನಾತ್ಮಕವಾಗಿ ಆಟವಾಡಿ ದಂತಹ ಗುಜರಾತ್ ಮೊದಲ ಜಯವನ್ನು ಸಾಧಿಸಿತು. ಗುಜರಾತ್ ಪರ ರಾಕೇಶ್ ನರ್ವಾಲ್, ರಾಕೇಶ್, ಉತ್ತಮ ಪ್ರದರ್ಶನವನ್ನು ನೀಡಿದ್ದು, ಜೈಪುರ ಅರ್ಜುನ್ ದೇಶ್ವಾಲ್ ಅತ್ಯುತ್ತಮ ಪ್ರದರ್ಶನ ನೀಡಿದರು.

- Advertisement -

Latest Posts

Don't Miss