ಮುಖ ಎಷ್ಟೇ ಅಂದವಿದ್ದರೂ, ಆ ಅಂದವನ್ನ ಇಮ್ಮಡಿಗೊಳಿಸೋಕ್ಕೆ ದಟ್ಟವಾದ ಕೂದಲಿಂದ ಮಾತ್ರ ಸಾಧ್ಯ. ಆದ್ರೆ ಈಗಿನ ಕಾಲದಲ್ಲಿ ಕೂದಲನ್ನ ದಟ್ಟವಾಗಿ ಇರಿಸೋದೇ ದೊಡ್ಡ ಚಾಲೆಂಜ್. ಇಂದಿನ ಕಾಲದ ಯುವಕ ಯುವತಿಯರ ದೊಡ್ಡ ಸಮಸ್ಯೆ ಎಂದರೆ ಕೂದಲುದುರುವ ಸಮಸ್ಯೆ. ದೇಹದಲ್ಲಿ ವಿಟಮಿನ್ ಕೊರತೆ, ನೀರಿನ ಸಮಸ್ಯೆ, ಹೀಗೆ ಅನೇಕ ಸಮಸ್ಯೆಯಿಂದ ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ.
ಈ ಸಮಸ್ಯೆ ಬಗೆಹರಿಸಲು ನಾವು ಕೊಡುವ 10 ಟಿಪ್ಸ್ ಬಳಸಿ, ನಿಮ್ಮ ಕೂದಲನ್ನ ಆರೋಗ್ಯಕರವನ್ನಾಗಿರಿಸಿಕೊಳ್ಳಿ.
1.. ಕೂದಲ ಅಂದ ಹೆಚ್ಚಿಸಿಕೊಳ್ಳಲು ಹೇರ್ ಸ್ಟ್ರೇಟ್ನರ್, ಹೇರ್ ಡ್ರೈಯರ್ ಬಳಕೆ ಮಾಡುತ್ತಾರೆ. ಆದ್ರೆ ಇದರ ಬಳಕೆಯಿಂದಲೇ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಆದ್ದರಿಂದ ಇವುಗಳ ಬಳಕೆ ಕಡಿಮೆ ಮಾಡಿ.
2.. ತಲೆಗೆ ಹೆಚ್ಚು ಎಣ್ಣೆ ಮಸಾಜ್ ಮಾಡಿದಷ್ಟು ನಿಮ್ಮ ಕೂದಲು ಆರೋಗ್ಯಕರವಾಗಿರುತ್ತದೆ. ಅಲ್ಲದೇ, ಯವ್ವನದಲ್ಲಿ ಕೂದಲಿಗೆ ಎಣ್ಣೆ ಹಚ್ಚಲು ನಿರ್ಲಕ್ಷಿಸಿದರೆ, ವೃದ್ಧಾಪ್ಯದಲ್ಲಿ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
3.. ದಟ್ಟವಾದ ಕೂದಲು ಬೇಕೆಂದರೆ ಹರಳೆಣ್ಣೆ ಬಳಸಿ.
4.. ತೆಂಗಿನ ಎಣ್ಣೆಗೆ ಅರ್ಧ ಚಮಚ ಮೆಂತ್ಯೆ ಹಾಕಿ ಕುದಿಸಿ, ಸೋಸಿ ಒಂದು ಬಾಟಲಿಯಲ್ಲಿ ಹಾಕಿಡಿ. ಈ ಎಣ್ಣೆಯಿಂದ ಹೇರ್ ಮಸಾಜ್ ಮಾಡಿಕೊಳ್ಳಿ.
5.. ಒಂದು ಪಾತ್ರೆಯಲ್ಲಿ ನೀರು ಹಾಕಿ ಅದರ ಮೇಲೆ ಒಂದು ಬೌಲ್ ಇರಿಸಿ, ಅದರಲ್ಲಿ ತೆಂಗಿನ ಎಣ್ಣೆ, ಹರಳೆಣ್ಣೆ ಮತ್ತು ವಿಟಾಮಿನ್ ಇ ಎಣ್ಣೆ ಹಾಕಿ ಕೊಂಚ ಬಿಸಿ ಮಾಡಿ. ಹೆಡ್ ಮಸಾಜ್ ಮಾಡಿಕೊಳ್ಳಿ. ಒಂದು ಗಂಟೆ ಬಳಿಕ ತಲೆಸ್ನಾನ ಮಾಡಿ.

6..ನೆಲ್ಲಿಕಾಯಿ, ಸೀಗೆಕಾಯಿ ಹಾಗೂ ಒಣಗಿದ ಕಹಿಬೇವಿನ ಎಲೆಯನ್ನು ಚೆನ್ನಾಗಿ ಅರೆದು ಪೇಸ್ಟ್ ಮಾಡಿ ತಲೆಗೆ ಹಚ್ಚಿ. ಒಂದು ಗಂಟೆ ಬಿಟ್ಟು ತಲೆ ತೊಳೆದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.
7.. ಬಾದಾಮ್ ಎಣ್ಣೆ, ಆಲಿವ್ ಆಯಿಲ್ ಮತ್ತು ಹರಳೆಣ್ಣೆ ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ತಲೆಗೆ ಹಚ್ಚಿ ಮಸಾಜ್ ಮಾಡಿ. ಒಂದು ಗಂಟೆ ಬಳಿಕ ತಲೆಸ್ನಾನ ಮಾಡಿ.
8..ಮೆಂತ್ಯೆ ಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಅರೆದು ತಲೆಗೆ ಹಚ್ಚಿಕೊಳ್ಳಿ. ಒಂದೆರಡು ಗಂಟೆ ಬಿಟ್ಟು ತಲೆ ಸ್ನಾನ ಮಾಡಿ. ನೆನೆಸಿದ ಮೆಂತ್ಯೆ ಕಂಡಿಷನರ್‌ನಂತೆ ಕೆಲಸ ಮಾಡುತ್ತದೆ.
9.. ಕೆಮಿಕಲ್ ಭರಿತ ಶ್ಯಾಂಪೂ ಬಳಸುವ ಬದಲು, ನೆಲ್ಲಿಕಾಯಿ ಪುಡಿ, ಸೀಗೆಕಾಯಿಪುಡಿ ಬಳಸಿ.
10.. ಸುಂದರ ಕೇಶರಾಶಿಗಾಗಿ ಹೇರ್ ಪ್ಯಾಕ್, ಹೇರ್ ಮಸಾಜ್ ಮಾಡುವುದಷ್ಟೇ ಅಲ್ಲದೇ, ಒಳ್ಳೆಯ ಆಹಾರ ಸೇವಿಸಿ. ಹೆಚ್ಚೆಚ್ಚು ನೀರು ಕುಡಿಯಿರಿ. ಕರಿದ ಪದಾರ್ಥಗಳನ್ನ ಕಡಿಮೆ ತಿನ್ನಿರಿ. ಮೊಳಕೆ ಕಾಳು, ತಾಜಾ ಹಣ್ಣು- ತರಕಾರಿ, ಹಾಲು- ಮೊಸರು ಸೇವಿಸಿ.
ಮನೆಮದ್ದಿನಿಂದ ಕೂದಲು ಉದುರುವಿಕೆಯ ಸಮಸ್ಯೆ ಪರಿಹಾರವಾಗದಿದ್ದಲ್ಲಿ ವೈದ್ಯರ ಬಳಿ ತೋರಿಸುವುದು ಉತ್ತಮ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ