Friday, December 27, 2024

Latest Posts

ಕಾಂಗ್ರೆಸ್ ಪಕ್ಷ ರಾಮ ಭಕ್ತರ ಮೇಲೆ ಇಂತಹ ಸಂಚು ರೂಪಿಸಿದೆಯೇ?: ಯತ್ನಾಳ್ ಪ್ರಶ್ನೆ

- Advertisement -

Political News: ಅಯೋಧ್ಯೆಗೆ ಹೋಗುವವರಿಗೆ ದೇವರೇ ರಕ್ಷಣೆ ಕೊಡಬೇಕು. ಗೋದ್ರಾ ರೀತಿಯ ದುರಂತ ಮತ್ತೊಮ್ಮೆ ನಡೆಯಬಹುದು. ನನಗೆ ಈ ಬಗ್ಗೆ ಮಾಹಿತಿ ಬಂದಿದೆ. ಹಾಗಾಗಿ ನಾನು ಈ ರೀತಿ ಹೇಳುತ್ತಿದ್ದೇನೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿದ್ದು, ಈ ಹೇಳಿಕೆಗೆ ಬಿಜೆಪಿಯ ಹಲವು ನಾಯಕರು ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಹರಿಪ್ರಸಾದ್‌ರನ್ನು ಈ ಕೂಡಲೇ ಬಂಧಿಸಬೇಕು. ಅಯೋಧ್ಯೆ ಕಾರ್ಯಕ್ರಮದಲ್ಲಿ ಇಂತಹ ಘಟನೆ ಜರುಗಿದರೆ, ಅದಕ್ಕೆ ಬಿ.ಕೆ.ಹರಿಪ್ರಸಾದ್ ಅವರೇ ಕಾರಣರಾಗುತ್ತಾರೆ ಎಂದು ಹೇಳಿದ್ದಾರೆ. ಇದೇ ರೀತಿ ಹಲವು ಬಿಜೆಪಿ ನಾಯಕರು ಬಿ.ಕೆ.ಹರಿಪ್ರಸಾದ್ ವಿರುದ್ಧ ಹರಿಹಾಯ್ದಿದ್ದಾರೆ.

“ಅಯೋಧ್ಯೆಗೆ ಹೋಗುವವರ ಮೇಲೆ ಗೋದ್ರಾ ಮಾದರಿಯ ಅಟ್ಯಾಕ್ ಆಗಬಹುದು” – ಬಿ.ಕೆ ಹರಿಪ್ರಸಾದ್ ಈ ಮನುಷ್ಯನನ್ನು ಬಂಧಿಸಿ ವಿಚಾರಣೆ ಮಾಡಬೇಕು, ಕಾಂಗ್ರೆಸ್ ಪಕ್ಷ ರಾಮ ಭಕ್ತರ ಮೇಲೆ ಇಂತಹ ಸಂಚು ರೂಪಿಸಿದೆಯೇ ? ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಗಾಗಿ ಗಲಭೆ ಮಾಡಿಸಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿದೆ. ಡಿಜಿಪಿಯವರೇ ಕ್ರಮ ಯಾವಾಗ? ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.

ಗುಜರಾತ್‌ನಲ್ಲಿ ಈ ರೀತಿ ರಾಮಭಕ್ತರಾದ ಕರಸೇವಕರ ಹತ್ಯೆ ನಡೆದಿತ್ತು. ಅದೇ ರೀತಿ ಅಯೋಧ್ಯೆ ಕಾರ್ಯಕ್ರಮದಲ್ಲಿ ಘಚನೆ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ನನಗೆ ಮಾಹಿತಿ ಇದೆ. ಮಾಹಿತಿ ಇದ್ದೇ ನಾನು ಈ ರೀತಿ ಹೇಳುತ್ತಿದ್ದೇನೆ. ಹಾಗಾಗಿ ಕರ್ನಾಟಕದಿಂದ ಯಾರ್ಯಾರು ಅಯೋಧ್ಯೆಗೆ ಹೋಗುತ್ತಾರೋ, ಅವರಿಗೆ ಸರಿಯಾದ ರೀತಿಯ ಬಂದೋಬಸ್ತ್ ಮಾಡಿಕೊಡಬೇಕಾಗುತ್ತದೆ. ಇಲ್ಲದೇ ಹೋದರೆ, ನಾವು ಮತ್ತೊಂದು ಗೋದ್ರಾಾವನ್ನು ಕರ್ನಾಟಕದಲ್ಲಿ ನೋಡಬೇಕಾಗುತ್ತದೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದರು.

 

ಅಯೋಧ್ಯೆಗೆ ಹೋಗಲು ನಿರಾಕರಿಸುತ್ತಿದ್ದವರೂ ಈಗ ಆಹ್ವಾನ ಬಯಸುತ್ತಿದ್ದಾರೆ: ಯೋಗಿ ಆದಿತ್ಯವಾಥ್

ರೋಗಿಯ ಕುಟುಂಬಸ್ಥರ ಒಪ್ಪಿಗೆ ಇದ್ದರೆ ಮಾತ್ರ ICUಗೆ ದಾಖಲಿಸಬಹುದು: ಕೇಂದ್ರ ಆಸ್ಪತ್ರೆಯ ಹೊಸ ರೂಲ್ಸ್

ಇತಿಹಾಸದಲ್ಲಿ ಮೊದಲ ಬಾರಿಗೆ ಅಯ್ಯಪ್ಪಸ್ವಾಮಿಯ ದರ್ಶನ ಪಡೆದ ಮಂಗಳಮುಖಿ..

- Advertisement -

Latest Posts

Don't Miss