- Advertisement -
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಭಜರಂಗಿ-2 ಚಿತ್ರ ಇದೀಗ ಸೆಟ್ಟೇರಿದೆ. ಇಂದು ಚಿತ್ರದ ಮುಹೂರ್ತ ನೆರವೇರಿದ್ದು ಶೂಟಿಂಗ್ ಭರದಿಂದ ಸಾಗಲಿದೆ.
ಯಡಿಯೂರು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಇವತ್ತು ಶಿವಣ್ಣ ಮುಂದಿನ ಚಿತ್ರ ಭಜರಂಗಿ-2 ಮುಹೂರ್ತ ನೆರವೇರಿತು. ಭಜರಂಗಿ, ವಜ್ರಕಾಯ ನಂತರ ಮತ್ತೆ ಹರ್ಷ- ಶಿವಣ್ಣ ಜೋಡಿ ಒಂದಾಗಿದೆ. ಹರ್ಷ ನಿರ್ದೇಶನದ ಈ ಎರಡೂ ಚಿತ್ರಗಳು ಸೂಪರ್ ಹಿಟ್ ಆಗಿತ್ತು, ಇನ್ನು ಇದೀಗ ಸೆಟ್ಟೇರಿರೋ ಭಜರಂಗಿ-2 ಕೂಡ ಇವುಗಳಂತೆಯೇ ಸೂಪರ್ ಹಿಟ್ ಆಗೋ ನಿರೀಕ್ಷೆಯಿದೆ.
ಇನ್ನು ಚಿತ್ರದ ಮೊದಲ ದೃಶ್ಯಕ್ಕೆ ಶಿವಣ್ಣ ಪತ್ನಿ ಗೀತಾ ಕ್ಲಾಪ್ ಮಾಡಿದ್ದು, ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ. ಚಿತ್ರಕ್ಕೆ ಜಯಣ್ಣ ಹಾಗೂ ಬೋಗೇಂದ್ರ ಬಂಡವಾಳ ಹೂಡಿದ್ದಾರೆ.
ಶಿವಣ್ಣನ ರುಸ್ತಂ ಚಿತ್ರಕ್ಕೆ ಕಾಯ್ತಿದ್ದಾರೆ ಬಾಲಿವುಡ್ ಮಂದಿ…! ಯಾಕೆ ಗೊತ್ತಾ..? ಮಿಸ್ ಮಾಡದೇ ಈ ವಿಡಿಯೋ ನೋಡಿ
- Advertisement -