ಹೆಚ್.ಡಿ.ರೇವಣ್ಣ ಅರೆಸ್ಟ್: ದೇವೇಗೌಡರ ಮನೆಯಲ್ಲೇ ಬಂಧನಕ್ಕೊಳಪಟ್ಟ ಮಾಜಿ ಸಚಿವ

Political News: ಕಿಡ್ನ್ಯಾಪ್ ಕೇಸ್‌ನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರನ್ನು ಅರೆಸ್ಟ್ ಮಾಡಲಾಗಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸದಲ್ಲಿ ಇರುವಾಗಲೇ, ಹೆಚ್.ಡಿ.ರೇವಣ್ಣರನ್ನು ಎಸ್‌ಐಟಿ ಅರೆಸ್ಟ್ ಮಾಡಿದೆ. ಇದೀಗ ರೇವಣ್ಣರನ್ನು ವಿಚಾರಣೆಗೆಂದು ಎಸ್‌ಐಟಿ ಕಚೇರಿಯತ್ತ ಕೊಂಡೊಯ್ಯಲಾಗುತ್ತಿದೆ.

ಕಿಡ್ನ್ಯಾಪ್ ಕೇಸ್‌ನಲ್ಲಿ ರೇವಣ್ಣ ರನ್ನು ಬಂಧಿಸಿದ್ದು, ಮಹಿಳೆಯೊಬ್ಬಳನ್ನು ಕಿಡ್ನ್ಯಾಪ್‌ ಮಾಡಿದ್ದಾಗಿ, ಆಕೆಯ ಮಗ ಕಂಪ್ಲೇಂಟ್ ನೀಡಿದ್ದಕ್ಕಾಗಿ, ರೇವಣ್ಣ ಅವರನ್ನು ಎಸ್‌ಐಟಿ ಅರೆಸ್ಟ್ ಮಾಡಿದೆ. ರೇವಣ್ಣ ಅರೆಸ್ಟ್ ಆಗಕ್ಕೂ ಮುನ್ನ, ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಅರ್ಜಿ ವಜಾಗೊಂಡ ಬಳಿಕ ಇದೀಗ ಬಂಧಿಸಲಾಗಿದೆ.

ಪ್ರಜ್ವಲ್ ರೇವಣ್ಣ ಎರಡು ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳೊಂದಿಗೆ ರಾಸಲೀಲೆ ನಡೆಸಿದ್ದು, ಅದನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದರು. ಮೊಬೈಲ್‌ನಿಂದ ಪೆನ್‌ಡ್ರೈವ್‌ಗೆ ಆ ವೀಡಿಯೋಗಳನ್ನು ಹಾಕಿದ್ದ ಕಿಡಿಗೇಡಿಗಳು, ಎಲ್ಲೆಡೆ ಅದನ್ನ ಹರಡುವಂತೆ ಮಾಡಿದ್ದು, ಪ್ರಜ್ವಲ್ ಮಾನಹಾನಿ ಮಾಡಲು ಹೋಗಿ, ಹೆಣ್ಣು ಮಕ್ಕಳ ಮಾನಹಾನಿಯನ್ನೂ ಮಾಡಿದ್ದಾರೆ.

ಸದ್ಯ ಈ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಜರ್ಮನಿಗೆ ಹೋಗಿರುವ ಪ್ರಜ್ವಲ್‌ಗಾಗಿ ಎಸ್‌ಐಟಿ ಟೀಮ್ ಅರೆಸ್ಟ್ ಮಾಡಲು ಕಾದುಕೂತಿದೆ. ಅಲ್ಲದೇ, ಪೆನ್‌ಡ್ರೈವ್ ಸ್ಪ್ರೆಡ್ ಮಾಡಿದವರನ್ನು ಅರೆಸ್ಟ್ ಮಾಡುವ ತಯಾರಿ ನಡೆಯುತ್ತಿದೆ.

ನಿಮ್ಮ ಮುತ್ತಾತ ಬಂದ್ರು ಕಾಶ್ಮೀರದಲ್ಲಿ 370 ಆರ್ಟಿಕಲ್ ವಾಪಸ್ ತರೋಕ್ಕೆ ಆಗಲ್ಲ: ಪ್ರಹ್ಲಾದ್ ಜೋಶಿ

ಕರ್ನಾಟಕದಲ್ಲಿ ಮೋದಿ ಎಷ್ಟೆಲ್ಲ ಶೌಚಾಲಯ ನಿರ್ಮಿಸಿದ್ದಾರೆ. ಆದರೂ ಕಾಂಗ್ರೆಸ್‌ನವರು ಚೊಂಬು ಹಿಡಿದು ಓಡಾಡುತ್ತಿದ್ದಾರೆ: ಅಣ್ಣಾಮಲೈ

ದೇಶದ ಸುರಕ್ಷತೆ, ಅಭಿವೃದ್ಧಿಗಾಗಿ ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ತಕ್ಕ ಪಾಠ: ಬಿ.ವೈ.ವಿಜಯೇಂದ್ರ

About The Author