Monday, April 14, 2025

Latest Posts

ಪತ್ನಿಯ ಮಾತು ಕೇಳಿ ನನ್ನನ್ನು ದೂರ ಮಾಡಿದ: ಕ್ರಿಕೇಟಿಗ ರವೀಂದ್ರ ಜಡೇಜಾ ಬಗ್ಗೆ ತಂದೆಯ ಆರೋಪ

- Advertisement -

Cricket News: ಭಾರತೀಯ ಕ್ರಿಕೇಟ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗುವ, ಅದರಂತೆ ಆಟ ಆಡುವ ಟೀಂ ಇಂಡಿಯಾ ಆಟಗಾರ ಅಂದ್ರೆ ರವೀಂದ್ರ ಜಡೇಜಾ. ಅಭಿಮಾನಿಗಳು ಇವರನ್ನು ಪ್ರೀತಿಯಿಂದ ಜಡ್ಡು ಅಂತಲೂ ಕರೆಯುತ್ತಾರೆ.

ಆದರೆ ಇದೀಗ ಇವರ ಕುಟುಂಬದಲ್ಲಿ ಅಪಸ್ವರ ಕೇಳಿ ಬಂದಿದ್ದು, ಜಡೇಜಾ ಬಗ್ಗೆ ಅವರ ತಂದೆ ಆರೋಪವೊಂದನ್ನು ಮಾಡಿದ್ದಾರೆ. ಪತ್ನಿಯ ಮಾತು ಕೇಳಿ, ಮಗ ತನ್ನನ್ನು ದೂರ ಮಾಡಿದ್ದಾನೆಂದು ತಂದೆ ಆರೋಪಿಸಿದ್ದಾರೆ.

ರವೀಂದ್ರ ಜಡೇಜಾ ತಂದೆ ಅನಿರುದ್ಧ ಜಡೇಜಾ, ಮಾಧ್ಯಮದ ಎದುರಿಗೆ ಹೀಗೊಂದು ಆರೋಪ ಮಾಡಿದ್ದು, ನನ್ನ ಸೊಸೆ, ರವೀಂದ್ರ ಜಡೇಜಾ ಪತ್ನಿ ರಿವಾಬಾ, ಮಾತು ಕೇಳಿ, ರವೀಂದ್ರ ನನ್ನನ್ನು ದೂರ ಮಾಡಿದ್ದಾನೆ. ಅವಳು ಮನೆ ಒಡೆಯುವ ಕೆಲಸ ಮಾಡಿದ್ದಾಳೆ. ಅದೇನೋ ಮೋಡಿ ಮಾಡಿದ್ದಾಳೋ ಗೊತ್ತಿಲ್ಲ. ಮಗ ನನ್ನಿಂದ ದೂರವಾಗಿ ವರುಷಗಳೇ ಕಳೆದಿದೆ ಎಂದು ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೇ, ರವೀಂದ್ರ ತನ್ನ ತಂದೆ ಜೊತೆ ಮಾತನಾಡುವುದನ್ನೇ ಬಿಟ್ಟಿದ್ದಾನೆ. ಅವನು ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿತ್ತು. ನಾವೆಲ್ಲ ಒಂದೇ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದೆವು. ಆದರೆ ಮದುವೆಯಾಗಿ 3 ತಿಂಗಳು ಕಳೆದ ಬಳಿಕ, ರವೀಂದ್ರ ನನ್ನೊಂದಿಗೆ ಮಾತನಾಡುವುದನ್ನೇ ಬಿಟ್ಟ. ಇದೀಗ 5 ವರ್ಷದಿಂದ ನಾನು ಇದೇ ಫ್ಲ್ಯಾಟ್‌ನಲ್ಲಿ 20 ಸಾವಿರ ಪಿಂಚಣಿಯೊಂದಿಗೆ ಬದುಕುತ್ತಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ತಂದೆಯ ಆರೋಪವನ್ನು ತಳ್ಳಿ ಹಾಕಿ, ತಮ್ಮ ಎಕ್ಸ್ ಖಾತೆಯಲ್ಲಿ ತಮ್ಮದೇ ಭಾಷೆಯಲ್ಲಿ ಪೋಸ್ಟ್ ಮಾಡಿರುವ ರವೀಂದ್ರ ಜಡೇಜಾ, ನನ್ನ ಅಪ್ಪ ಮಾಡುತ್ತಿರುವ ಆರೋಪವೆಲ್ಲವೂ ಸುಳ್ಳು. ನನ್ನ ಪತ್ನಿಯ ಹೆಸರನ್ನು ಹಾಳು ಮಾಡಲು ಅವರು ಮಾಧ್ಯಕ್ಕೆ ಈ ರೀತಿ ಹೇಳಿದ್ದಾರೆ. ಇವೆಲ್ಲವೂ ಸ್ಕ್ರಿಪ್ಟೆಡ್. ನನಗೂ ಹೇಳಲು ಸಾಕಷ್ಟಿದೆ. ಆದರೆ ಮನೆಯ ವಿಚಾರವನ್ನು ನಾನು ಯಾರಲ್ಲಿಯೂ ಹೇಳಲು ಬಯಸುವುದಿಲ್ಲವೆಂದು ಜಡೇಜಾ ಹೇಳಿದ್ದಾರೆ.

‘ರಾವಣ ತಲೆಗಳ ಕಾಂಗ್ರೆಸ್ ಪಕ್ಷಕ್ಕೆ ಮೈಯ್ಯೆಲ್ಲಾ ರಾಜಕೀಯವೇ ತುಂಬಿದೆ. ಅದೂ ಸ್ವಾರ್ಥ ರಾಜಕೀಯ’

‘ಪ್ರಜ್ವಲ್ ರೇವಣ್ಣರ ಬಿಜೆಪಿ ಕಾರ್ಯಕರ್ತರು ನನ್ನ ಪರವಾಗಿ ಇದ್ದಾರೆ ಎಂಬ ಹೇಳಿಕೆ ಹಾಸ್ಯಸ್ಪದ’

‘ಕೇಸರಿ ಶಾಲು ಎಂದರೆ ಬಿಜೆಪಿ ಎಂದು ಯಾಕೆ ಭಾವಿಸಬೇಕು..? ಅದು ಧಾರ್ಮಿಕ ಸಂಕೇತ ಅಷ್ಟೇ..’

- Advertisement -

Latest Posts

Don't Miss