News 1
ಈಗ ಎಲ್ಲೆಲ್ಲೂ ಡಾಲಿ ಧನಂಜಯ್ ಅಭಿನಯದ ಹೆಡ್ ಬುಶ್ ಸಿನಿಮಾದ್ದೇ ಸದ್ದು. ಬರೋಬ್ಬರಿ 22 ಕೋಟಿಗೆ ಹೆಡ್ ಬುಷ್ ಸೋಲ್ಡೌಟ್ ಆಗಿದೆ. ಹೆಡ್ ಬುಶ್ ಸಿನಿಮಾ ರಿಲೀಸ್‌ಗೂ ಮುನ್ನವೇ, ಬೊಂಬಾ‘್ ಬ್ಯುಸಿನೆಸ್ ಮಾಡಿದೆ. ಹೆಡ್‌ಬುಷ್‌ಗೆ ಜೀ ಸ್ಟುಡಿಯೋ ಫಿದಾ ಆಗಿದ್ದು, ಡಾಲಿ ಜಯರಾಜ್ ಕ್ರೆಜ್‌ಗೆ ದೊಡ್ಡ ಡೀಲ್ ಸಿಗುವ ಮೂಲಕ, ಹೆಡ್ ಬುಷ್ ಸಿನಿಮಾ 22 ಕೋಟಿ ಲಾಭ ಗಳಿಸಿದೆ.
News 2
ಹೆಡ್ ಬುಶ್ ಸಿನಿಮಾ ಟ್ರೇಲರ್ ರಿಲೀಸ್ ಆಗಿದ್ದು, ಬಾಲಿವುಡ್, ಟಾಲಿವುಡ್ , ಕಾಲಿವುಡ್ ವಿಮರ್ಶಕರಿಂದ ಶಹಬಾಸ್ ಎನ್ನಿಸಿಕೊಂಡಿದೆ. ಮುಂಬೈ, ದೆಹಲಿ ಜನ ಕೂಡ ಜಯರಾಜ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಹೆಡ್ ಬುಷ್ ಗೆ ಪ್ಯಾನ್ ಇಂಡಿಯಾ ಕ್ರೇಜ್ ಆಗಿದೆ.
ವಾರಾಣಸಿಯಲ್ಲಿ ಗಂಗಾರತಿ ಮಾಡಿದ ಬನಾರಸ್ ಹೀರೋ ಝೈದ್ ಖಾನ್!
News 3
ಇನ್ನು ಹೆಡ್‌ಬುಷ್ ಸಿನಿಮಾ ಟಿಕೇಟ್ ಬುಕಿಂಗ್ಸ್ ಓಪೆನ್ ಆಗಿದ್ದು, ಎರಡು ದಿನದ ಮೊದ್ಲೇ ಭರ್ಜರಿ ಟಿಕೆಟ್ ಬುಕಿಂಗ್ ಆಗಿದೆ..
News 4
ಹೆಡ್‌ಬುಷ್ ಸಿನಿಮಾ ಕ್ರೇಜ್ ಇಂಡಿಯಾದಲ್ಲಷ್ಟೇ ಅಲ್ಲದೇ, ದುಬೈನಲ್ಲೂ ಶುರುವಾಗಿದೆ. ಹೆಡ್‌ಬುಷ್ ಟೀಂ ಸಿನಿಮಾ ಪ್ರಮೋಶನ್‌ಗಾಗಿ ದುಬೈಗೆ ಹಾರಿದ್ದು, ದುಬೈ ಮರಳುಗಾಡಿನಲ್ಲಿ ರೌಂಡ್ಸ್ ಹಾಕುತ್ತಿದ್ದಾರೆ. ಜಯರಾಜ್ ಅಂಡ್ ಗ್ಯಾಂಗ್ ಹಬೀಬಿ ಬೆಲ್ಲಿ ಡಾನ್ಸ್ ಮಾಡಿದ್ದು, ಇವರ ಡಾನ್ಸ್ ನೀನಾಸಂ ಸತೀಶ್ ಕೈಚಳಕದಲ್ಲಿ ವಿಡಿಯೋ ಸೆರೆಯಾಗಿದೆ.
ಸುಂದರ ಶೀರ್ಷಿಕೆಯ “ಕೌಸಲ್ಯಾ ಸುಪ್ರಜಾ ರಾಮ” ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ..
News 5
ದೀಪಾವಳಿಗೆ ಮಾರುಕಟ್ಟೆಯಲ್ಲಿ ಹೆಡ್ ಬುಶ್ ಪಟಾಕಿ ಮಾರಾಟಕ್ಕೆ ಬಂದಿದೆ. ಡಾಲಿ ಬಾಂಬ್..ಜಯರಾಜ್ ರಾಕೆಟ್.. ಹಬೀಬಿ ಫ್ಲವರ್ ಪಾಟ್.. ಗಂಗಾ ಮರ್ಚಿ ಪಟಾಕಿ, ಕೊತ್ವಾಲ್ ಭೂಚಕ್ರ, ಹೀಗೆ ಜಯರಾಜ್ ಸಿನಿಮಾದಲ್ಲಿ ಬರುವ ಪಾತ್ರಗಳ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಪಟಾಕಿಗಳು ಲಗ್ಗೆ ಇಟ್ಟಿದೆ.