Saturday, June 21, 2025

Latest Posts

ಹರಿವೆ ಸೊಪ್ಪಿನ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭದ ಬಗ್ಗೆ ಕೇಳಿದರೆ ಆಶ್ಚರ್ಯ ಪಡ್ತೀರಾ..

- Advertisement -

ಬರೀ ತರಕಾರಿ ತಿನ್ನುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಪೂರ್ತಿಯಾಗಿ ಸಿಗುವುದಿಲ್ಲ. ಬದಲಾಗಿ ನಾವು ಸೊಪ್ಪುಗಳನ್ನ ಕೂಡ ಸೇವಿಸಬೇಕಾಗುತ್ತದೆ. ಆರೋಗ್ಯಕ್ಕೆ ಲಾಭ ನೀಡುವಂಥ ಸೊಪ್ಪುಗಳಲ್ಲಿ ಹರಿವೆ ಸೊಪ್ಪು ಕೂಡ ಒಂದು. ಇವತ್ತು ನಾವು ಹರಿವೆ ಸೊಪ್ಪಿನ ಸೇವಿನೆಯಿಂದ ದೇಹಕ್ಕಾಗುವ ಲಾಭಗಳೇನು ಅನ್ನೋ ಬಗ್ಗೆ ಹೇಳಲಿದ್ದೇವೆ.

ಗರ್ಭಿಣಿಯರಿಗೆ ಹರಿವೆ ಸೊಪ್ಪನ್ನ ತಿನ್ನಲು ಹೇಳಲಾಗುತ್ತದೆ. ಇದರಿಂದ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆಯೂ ಉತ್ತಮವಾಗುತ್ತದೆ. ಇನ್ನು ತೂಕ ಇಳಿಸೋಕ್ಕೆ ಪ್ರಯತ್ನ ಪಡುತ್ತಿರುವವರು, ಹರಿವೆ ಸೊಪ್ಪಿನ ಸೇವನೆ ಮಾಡೋದು ಒಳ್ಳೆಯದು. ನೀವು ಎರಡು ತಿಂಗಳು, ವಾರಕ್ಕೆರಡು ಬಾರಿಯಾದ್ರೂ ಹರಿವೆ ಸೊಪ್ಪು ತಿಂದ್ರೆ, 3ರಿಂದ4 ಕೆಜಿ ತೂಕ ಇಳಿಸಿಕೊಳ್ಳುತ್ತೀರಿ. ಇದರ ಪಲ್ಯ ಮಾಡಿ ತಿಂದರೆ ಉತ್ತಮ. ಆದ್ರೆ ಅದಕ್ಕೆ ಹೆಚ್ಚು ಎಣ್ಣೆ, ಉಪ್ಪು, ಖಾರ ಬಳಸಬೇಡಿ.

ಕೀಲು ನೋವಿನ ಸಮಸ್ಯೆ, ಮೂಳೆ ನೋವು ಸಮಸ್ಯೆ ಇದ್ದಲ್ಲಿ ಹರಿವೆ ಸೊಪ್ಪಿನ ಸೇವನೆ ಮಾಡಿ. ಇದು ನಮ್ಮ ದೇಹಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತದೆ. ಮೂಳೆ ಗಟ್ಟಿಗೊಳಿಸುತ್ತದೆ. ನಾವು ಸಧೃಡವಾಗಿರುವಂತೆ ನೋಡಿಕೊಳ್ಳುತ್ತದೆ. ಹರಿವೆ ಸೊಪ್ಪಿನ ಸೂಪ್ ಮಾಡಿಯೂ ಕುಡಿಯಬಹುದು. ಸೂಪ್‌ನಲ್ಲಿ ಒಂದು ಸ್ಪೂನ್ ತುಪ್ಪ ಅಥವಾ ಕೊಂಚ ಬೆಣ್ಣೆ ಬಳಸಬಹುದು. ಇದರಿಂದ ಸೂಪ್ ಟೇಸ್ಟಿಯಾಗಿರುತ್ತದೆ ಅಲ್ಲದೇ ದೇಹಕ್ಕೆ ಶಕ್ತಿಯೂ ಸಿಗುತ್ತದೆ.

ಹರಿವೆ ಸೊಪ್ಪಿನ ಸಾರನ್ನೂ ಕೂಡ ಮಾಡಲಾಗತ್ತೆ. ಇದಕ್ಕೆ ಮೊಳಕೆ ಕಾಳನ್ನ ಸೇರಿಸಿದರೆ ಟೇಸ್ಟಿಯಾಗಿರುತ್ತದೆ. ಹೆಲ್ದಿ ಕೂಡ ಹೌದು. ಇನ್ನು ಇದರ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಫಂಗಲ್ ಇನ್‌ಫೆಕ್ಷನ್ ಬರುವುದನ್ನ ತಡೆಗಟ್ಟುತ್ತದೆ. ಹೃದಯಕ್ಕೆ, ತ್ವಚೆ ಮತ್ತು ಕೂದಲಿನ ಆರೋಗ್ಯ ಹೆಚ್ಚಿಸೋಕ್ಕೂ ಹರಿವೆ ಸೊಪ್ಪು ಸಹಕಾರಿಯಾಗಿದೆ. ಇನ್ನು ನಿಮಗೆ ಹರಿವೆ ಸೊಪ್ಪು ತಿಂದರೆ ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಸೇವಿಸುವುದು ಉತ್ತಮ.

- Advertisement -

Latest Posts

Don't Miss