Monday, June 16, 2025

Latest Posts

ತೊಂಡೆಕಾಯಿ ಕೂಡ ದೇಹಕ್ಕೆ ಉತ್ತಮ ಪೋಷಕಾಂಶ ನೀಡಬಲ್ಲದು ಗೊತ್ತಾ..?

- Advertisement -

ಹೆಚ್ಚಿನವರು ತೊಂಡೆಕಾಯಿಯನ್ನ ಸೇವಿಸುವುದೇ ಇಲ್ಲ. ವರ್ಷದಲ್ಲಿ ಒಮ್ಮೆ ತೊಂಡೆಕಾಯಿ ಸೇವಿಸುವುದೂ ಹೆಚ್ಚು. ಆದ್ರೆ ಹಳ್ಳಿ ಕಡೆ ಜನ ಹೆಚ್ಚಾಗಿ ತೊಂಡೆಕಾಯಿಯನ್ನ ಸೇವಿಸುತ್ತಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಹೆಚ್ಚಾಗ ತೊಂಡೆಕಾಯಿ ಬಳಕೆ ಮಾಡ್ತಾರೆ. ಈ ತೊಂಡೆಕಾಯಿ ಆರೋಗ್ಯಕ್ಕೂ ಒಳ್ಳೆಯದು. ಹಾಗಾಗಿ ನಾವಿಂದು ತೊಂಡೆಕಾಯಿ ಬಳಸುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ದೇಹದಲ್ಲಿ ಉಷ್ಣತೆ ಹೆಚ್ಚಾಗಿ ನಾಲಿಗೆಯ ಮೇಲೆ ಅಥವಾ ತುಟಿಯ ಮೇಲೆ ಗುಳ್ಳೆಗಳಾಗುತ್ತದೆ. ಈ ಗುಳ್ಳೆಗಳಿಂದ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಆಗ ನೀವು ಅರ್ಧ ಹಸಿ ತೊಂಡೆಕಾಯಿಯನ್ನ ಸೇವಿಸಬೇಕು. ಇದರಿಂದ ನಿಮ್ಮ ಬಾಯಿಯಲ್ಲಾದ ಗುಳ್ಳೆಯಿಂದ ಮುಕ್ತಿ ಪಡೆಯಬಹುದು. ತೊಂಡೆಕಾಯಿಯಿಂದ ಮಜ್ಜಿಗೆ ಹುಳಿ ಮಾಡಲಾಗತ್ತೆ. ತೊಂಡೆಕಾಯಿ, ಕೊಬ್ಬರಿ ತುರಿ ಮತ್ತು ಮಜ್ಜಿಗೆ ಹಾಕಿ ಮಾಡುವ ಈ ಸಾರಿಗೆ ಒಗ್ಗರಣೆ ಬಿದ್ದರೆ, ಸಖತ್ ಟೇಸ್ಟಿಯಾಗಿರತ್ತೆ. ಅಲ್ಲದೇ ಆರೋಗ್ಯಕ್ಕೂ ಉತ್ತಮ.

ಶ್ವಾಸಕೋಶದ ಸಮಸ್ಯೆ ಇದ್ದವರು, ತೊಂಡೆಕಾಯಿ ಎಲೆಯನ್ನು ನೀರಿನಲ್ಲಿ ಕುದಿಸಿ, ಕಶಾಯದ ರೀತಿ ಸೇವಿಸುವುದು ಒಳ್ಳೆಯದು. ತೊಂಡೆಕಾಯಿ ಪದಾರ್ಥ ಮಾಡುವಾಗ ಕೊಂಚ ತುಪ್ಪ ಬಳಿಸಿದರೆ ಉತ್ತಮ. ಇದರಿಂದ ಹೊಟ್ಟೆ ನೋವಿನ ಸಮಸ್ಯೆ ಇದ್ದರೆ ಮುಕ್ತಿ ಪಡೆಯಬಹುದು. ತೊಂಡೆಕಾಯಿಯ ಸಾಂಬಾರ್ ಕೂಡ ತಿನ್ನಲು ರುಚಿಯಾಗಿರತ್ತೆ. ಕೊಬ್ಬರಿ ಮಸಾಲೆಯನ್ನ ಹಾಕಿ ಈ ಸಾಂಬಾರ್ ತಯಾರಿಸಲಾಗುತ್ತದೆ. ಇದರ ಜೊತೆ ನೀವು ನಿಮಗಿಷ್ಟವಾದ ತರಕಾರಿಯನ್ನ ಸೇರಿಸಬಹುದು.

ಶುಗರ್ ಇದ್ದವರು ತೊಂಡೆಕಾಯಿ ಸೇವಿಸಿದರೆ ಒಳ್ಳೆಯದು. ಇದು ಶುಗರನ್ನು ಕಂಟ್ರೋಲ್‌ನಲ್ಲಿಡಲು ಸಹಾಯ ಮಾಡುತ್ತದೆ. ದಕ್ಷಿಣ ಕನ್ನಡದವರು ತೊಂಡೆಕಾಯಿ ಪಲ್ಯ ಮಾಡ್ತಾರೆ. ಅದಕ್ಕೆ ಹಸಿ ಗೇರುಬೀಜ, ದ್ರಾಕ್ಷಿಯನ್ನ ಬಳಸಲಾಗುತ್ತದೆ. ಖಾರ, ಸಿಹಿ ಸಮವಾಗಿರುವ ಈ ಪಲ್ಯ ಬಲು ರುಚಿಯಾಗಿರುತ್ತದೆ. ಆರೋಗ್ಯಕ್ಕೂ ಒಳ್ಳೆಯದು. ತೊಂಡೆಕಾಯಿ ಸೇವನೆ ಮಾಡಿದ್ರೆ ನಾಲಿಗೆ ದಪ್ಪ ಆಗುತ್ತದೆ. ನೆನಪಿನ ಶಕ್ತಿ ಕ್ಷಿಣಿಸುತ್ತದೆ ಅಂತಾ ಕೆಲವರು ಹೇಳ್ತಾರೆ. ಆದ್ರೆ ಅದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಆದ್ರೆ ಅಗತ್ಯಕ್ಕಿಂತ ಹೆಚ್ಚು ತೊಂಡೆಕಾಯಿ ಸೇವನೆ ಮಾಡಬಾರದು. ಇನ್ನು ನಿಮಗೆ ತೊಂಡೆಕಾಯಿ ತಿಂದರೆ ಅಲರ್ಜಿ ಎಂದಾದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ತೊಂಡೆ ಸೇವಿಸುವುದು ಉತ್ತಮ.

- Advertisement -

Latest Posts

Don't Miss