ಹಸಿರು ಬಟಾಣಿ ಅಂದ್ರೆ ನಮಗೆಲ್ಲ ಪಲಾವ್, ಪನೀರ್ ಕರಿ, ಪಲ್ಯ ಇವುಗಳೇ ನೆನಪಿಗೆ ಬರತ್ತೆ. ಆದ್ರೆ ಈ ಹಸಿರು ಬಟಾಣಿಯನ್ನ ಯಾರೂ ಹಸಿಯಾಗಿ ತಿನ್ನೋಕ್ಕೆ ಇಷ್ಟಪಡಲ್ಲ. ಕಾರಣ ಇದು ಸ್ವಲ್ಪ ಕಹಿಯಾಗಿರತ್ತೆ. ಆದ್ರೂ ಕೂಡ ನೀವು ಹಸಿ ಬಟಾಣಿಯಿಂದ ತಿನ್ನುವುದರಿಂದ, ಕೆಲ ಆರೋಗ್ಯಕರ ಲಾಭ ಪಡಿಯಬಹುದು. ಹಾಗಾದ್ರೆ ಯಾವುದು ಆ ಆರೋಗ್ಯಕರ ಲಾಭ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಡಯಾಬಿಟೀಸ್ ರೋಗಿಗಳಿಗೆ ಹಸಿರು ಬಟಾಣಿ ಉತ್ತಮ ಆಹಾರ. ಆದ್ರೆ ಲಿಮಿಟ್‌ನಲ್ಲಿ ತಿನ್ನಬೇಕಷ್ಟೇ. ಇದನ್ನ ನೀವು ನಿಯಮಿತವಾಗಿ ತಿಂದ್ರೆ, ನಿಮ್ಮ ಡಯಾಬಿಟೀಸ್ ಕಂಟ್ರೋಲಿನಲ್ಲಿರುತ್ತದೆ. ಇದು ಫೈಬರ್ ಮತ್ತು ಪ್ರೋಟೀನ್ ತತ್ವಗಳಿಂದ ಕೂಡಿದ್ದು, ಇದರಿಂದ ದೇಹದಲ್‌ಲಿ ಶುಗರ್ ಪ್ರಮಾಣ ಕಂಟ್ರೋಲಿನಲ್ಲಿರುತ್ತದೆ. ಹಾಗಾಗಿ ಶುಗರ್ ಸಮಸ್ಯೆ ಇದ್ದವರು ಹಸಿರು ಬಟಾಣಿಯನ್ನ ತಿನ್ನಬೇಕು.
ಹಸಿರು ಬಟಾಣಿಯಲ್ಲಿ ಲೋ ಫೈಬರ್ ಮತ್ತು ಲೋ ಕ್ಯಾಲರಿ ಇರುವ ಕಾರಣ, ಇದು ತೂಕ ಇಳಿಸುವುದರಲ್ಲಿ ಸಹಾಯ ಮಾಡುತ್ತದೆ. ಗರ್ಭಿಣಿಯರು ಕೂಡ ಹಸಿ ಬಟಾಣಿಯನ್ನು ತಿನ್ನಬೇಕು. ಇದು ಮಗುವಿನ ಆರೋಗ್ಯವನ್ನ ಉತ್ತಮಗೊಳಿಸುತ್ತದೆ. ಇನ್ನು ಹೊಟ್ಟೆ ಕ್ಯಾನ್ಸರ್ ಬರದಂತೆ ತಡೆಯಲು ಕೂಡ, ಹಸಿ ಬಟಾಣಿ ಸಹಕಾರಿ. ಹಸಿ ಬಟಾಣಿಯ ಸೂಪ್ ಕೂಡ ಮಾಡಿ ಕುಡಿಯಬಹುದು.
ಅಗತ್ಯಕ್ಕಿಂತ ಹೆಚ್ಚು ಹಸಿ ಬಟಾಣಿ ತಿಂದರೆ, ಆರೋಗ್ಯ ಸುಧಾರಿಸುವ ಜಾಗದಲ್ಲಿ, ರೋಗ ಹೆಚ್ಚುತ್ತದೆ. ಹಾಗಾಗಿ ಹಸಿರು ಬಟಾಣಿಯನ್ನ ಲಿಮಿಟ್‌ನಲ್ಲಿ ತಿನ್ನಬೇಕು. ಇನ್ನು ನಿಮಗೆ ಹಸಿ ಬಟಾಣಿ ತಿಂದ್ರೆ ಅಲರ್ಜಿ ಎಂದಾದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಸೇವಿಸುವುದು ಉತ್ತಮ.