Sunday, September 8, 2024

Latest Posts

ಕರ್ಪೂರದಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳೇನು..?

- Advertisement -

ಕರ್ಪೂರ ಅಂದ್ರೆ, ಬರೀ ಪೂಜೆಗೆ, ಧೂಪ ದೀಪ ಹಚ್ಚೋಕ್ಕೆ ಬಳಸುವ ಸಾಮಗ್ರಿ ಅಂತಾ ನಾವು ತಿಳಿದಿದ್ದೇವೆ. ಆದ್ರೆ ಕರ್ಪೂರದಿಂದ ಆರೋಗ್ಯ ಕೂಡ ವೃದ್ಧಿಸಬಹುದು. ಅದು ಹೇಗೆ ಅನ್ನೋ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ..

1. ಹೊಟ್ಟೆ ನೋವಿನ ಸಮಸ್ಯೆ ಇದ್ದವರು, ಒಂದು ಗ್ಲಾಸ್ ನೀರಿಗೆ ಒಂದು ಚಮಚ ಅಜ್ವೈನ್ ಅಂದ್ರೆ ವೋಮವನ್ನ ಹಾಕಿ, ಚೆನ್ನಾಗಿ ಕುದಿಸಿ. ನಂತರ ಇದರಲ್ಲಿ ಕೊಂಚ ಕರ್ಪೂರದ ಪುಡಿ ಹಾಕಿ, ಸೇವಿಸಿದ್ರೆ, ಹೊಟ್ಟೆ ನೋವಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. 

2. ಕೀಲು ನೋವು ಇದ್ದಲ್ಲಿ, ಕರ್ಪೂರದ ಎಣ್ಣೆಯಿಂದ ಮಸಾಜ್‌ ಮಾಡಿದರೆ, ಕೀಲು ನೋವು ಮಾಯವಾಗುತ್ತದೆ.

3. ಪದೇ ಪದೇ ತ್ವಚೆಯ ಮೇಲೆ ತುರಿಕೆ, ಹುಳು ಕಡ್ಡಿಯಾಗಿದ್ದಲ್ಲಿ, ಒಂದು ಸ್ಪೂನ್ ತೆಂಗಿನ ಎಣ್ಣೆಗೆ ಕೊಂಚ ಕರ್ಪೂರದ ಪುಡಿ ಹಾಕಿ, ಬಿಸಿ ಮಾಡಿ, ಆರಿಸಿ, ತುರಿಕೆಯಾದ ಜಾಗದಲ್ಲಿ ಮಸಾಜ್ ಮಾಡಿ. ಇದರಿಂದ ತುರಿಕೆ ಕಡಿಮೆಯಾಗತ್ತೆ.

4. ಕೂದಲು ಉದುರುತ್ತಿದ್ದರೆ, ಡ್ಯಾಂಡ್ರಫ್ ಸಮಸ್ಯೆ ಇದ್ದರೆ, ತೆಂಗಿನ ಎಣ್ಣೆಗೆ ಕರ್ಪೂರ ಹಾಕಿ, ಬಿಸಿ ಮಾಡಿ, ಆರಿಸಿ, ಆ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿ, ತಲೆ ಸ್ನಾನ ಮಾಡಿ. ಇದರಿಂದ ಕೂದಲ ಬುಡ ಗಟ್ಟಿಗೊಳ್ಳುವುದಲ್ಲದೇ, ಡ್ಯಾಂಡ್ರಫ್ ಸಮಸ್ಯೆ ಕಡಿಮೆಯಾಗುತ್ತದೆ.

5. ಕಲೆಗಳನ್ನ ತೆಗೆದು ಹಾಕುವುದರಲ್ಲಿ ಕರ್ಪೂರ ಪ್ರಮುಖ ಪಾತ್ರವಹಿಸುತ್ತದೆ. ನಿಮ್ಮ ಮುಖದ ಮೇಲೆ ಮೊಡವೆ ಕಲೆ, ಅಥವಾ ಕೈ ಕಾಲುಗಳ ಮೇಲೆ ಸುಟ್ಟ ಗಾಯಗಳಾಗಿದ್ದರೆ, ತೆಂಗಿನ ಎಣ್ಣೆಯಲ್ಲಿ ಕರ್ಪೂರ ಹಾಕಿ ಬಿಸಿ ಮಾಡಿ, ಇಟ್ಟುಕೊಂಡಿರಿ. ಪ್ರತಿದಿನ ಗಾಯವಾದ ಅಥವಾ ಕಲೆ ಇರುವ ಜಾಗದಲ್ಲಿ ಆ ಎಣ್ಣೆಯನ್ನ ಹಚ್ಚಿದರೆ, ಕಲೆ ಹೋಗುತ್ತದೆ.

6. ಹಿಮ್ಮಡಿ ಒಡೆದಿದ್ದರೆ, ಉಗುರು ಬೆಚ್ಚಗಿನ ನೀರಿಗೆ ಕರ್ಪೂರ ಮತ್ತು ಉಪ್ಪು ಹಾಕಿ ಮಿಕ್ಸ್ ಮಾಡಿ. ಆ ನೀರಿನಲ್ಲಿ ಕಾಲನ್ನು ಹಾಕಿ, 15 ನಿಮಿಷ ಕುಳಿತುಕೊಳ್ಳಿ. ನಂತರ ಅದನ್ನ ನೀಟ್ ಆಗಿ ಒರೆಸಿಕೊಂಡು, ಅದಕ್ಕೆ ಮಾಯಶ್ಚರೈಸಿಂಗ್ ಕ್ರೀಮ್ ಹಚ್ಚಿ. ಹೀಗೆ ವಾರಕ್ಕೊಮ್ಮೆ ಮಾಡಿದರೆ, ನಿಮ್ಮ ಹಿಮ್ಮಡಿ ಸುಂದರವಾಗುತ್ತದೆ.

ನಿಮಗೆ ಕರ್ಪೂರದ ಸುವಾಸನೆಯಿಂದ ಅಥವಾ ಅದನ್ನ ಸೇವಿಸುವುದರಿಂದ ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಸೇವಿಸುವುದು ಉತ್ತಮ. ಇನ್ನು ಇಲ್ಲಿ ಹೇಳಿರುವ ಟಿಪ್ಸ್‌ಗಳಲ್ಲಿ ಕರ್ಪೂರವನ್ನ ಚಿಟಿಕೆಯಂತೆ ಬಳಸಿ. ಹೆಚ್ಚು ಕರ್ಪೂರ ಬಳಸಿದರೆ, ದೇಹದಲ್ಲಿ ಉಷ್ಣತೆ ಪ್ರಮಾಣ ಹೆಚ್ಚಾಗಿ, ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

- Advertisement -

Latest Posts

Don't Miss