Health Tips: ಚಳಿಗಾಲ ಬಂತಂದ್ರೆ ನಾವು ಬೆಚ್ಚಗಿನ ಬಟ್ಟೆ ಹಾಕಿಕೊಳ್ಳಲು ಶುರು ಮಾಡುತ್ತೇವೆ. ಅದೇ ರೀತಿ ನಾವು ನಮ್ಮ ದೇಹವನ್ನು ಒಳಗಿನಿಂದಲೂ ಬೆಚ್ಚಗಿಡಬೇಕು ಎಂದರೆ, ಕೆಲವು ಆಹಾರಗಳನ್ನು ಸೇವಿಸಬೇಕಾಗುತ್ತದೆ. ಹಾಗಾದ್ರೆ ಯಾವುದು ಆ ಆಹಾರ ಅಂತಾ ತಿಳಿಯೋಣ ಬನ್ನಿ.
ತರಕಾರಿ: ಬೀಟ್‌ರೂಟ್, ಕ್ಯಾರೇಟ್, ಮೂಲಂಗಿ ಈ ರೀತಿ ಭೂಮಿಯೊಳಗೆ ಬೆಳೆಯುವ ತರಕಾರಿಗಳನ್ನು ನಾವು ಹೆಚ್ಚು ಬಳಸಬೇಕು. ಹಾಗಾಗಿಯೇ ಜನ ಹೆಚ್ಚಾಗಿ ಚಳಿಗಾಲದಲ್ಲಿ ಗೆಡ್ಡೆ ಗೆಣಸಿನ ಸೇವನೆ ಮಾಡುತ್ತಾರೆ. ಇದರಲ್ಲಿ ಹೆಚ್ಚು ಪೋಷಕಾಂಶಗಳು ಇರುತ್ತದೆ. ಇದು ಚಳಿಗಾಲದಲ್ಲಿ ನಮ್ಮ ದೇಹವನ್ನು ಉಷ್ಣತೆಯಿಂದ ಬೆಚ್ಚಗಿರಿಸಲು ಸಹಾಯ ಮಾಡುತ್ತದೆ.
ಇನ್ನೊಂದು ರೀತಿಯ ತರಕಾರಿ ಅಂದ್ರೆ, ಬ್ರೋಕೋಲಿ, ಹೂಕೋಸೂ, ಎಲೆ ಕೋಸೂ ಇಂಥ ತರಕಾರಿಗಳನ್ನು ತಿನ್ನಬೇಕು. ಇದರಲ್ಲಿ ವಿಟಾಮಿನ್ ಸಿ ಹೆಚ್ಚಾಗಿದ್ದು, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮತ್ತು ನಾವು ಪದೇ ಪದೇ ಅನಾರೋಗ್ಯಕ್ಕೀಡಾಗುವುದನ್ನು ತಪ್ಪಿಸುತ್ತದೆ.
ಹಸಿರು ಸೊಪ್ಪುಗಳು: ಪಾಲಕ್, ಹರಿವೆ ಸೊಪ್ಪು, ಹಸಿರು ಈರುಳ್ಳಿ ಇತ್ಯಾದಿಗಳನ್ನು ಚಳಿಗಾಲದಲ್ಲಿ ಸೇವಿಸಬೇಕು. ಹಸಿರು ಸೊಪ್ಪುಗಳನ್ನು ಚಳಿಗಾಲದಲ್ಲಿ ಸೇವಿಸುವುದರಿಂದ, ನಮ್ಮ ದೇಹಕ್ಕೆ ಬೀಟಾ ಕ್ಯಾರೋಟಿನ್ ಮತ್ತು ವಿಟಾಮಿನ್ ಎ ಸತ್ವಗಳು ದೇಹಕ್ಕೆ ಸಿಗುತ್ತದೆ.
ಡ್ರೈಫ್ರೂಟ್ಸ್, ನಟ್ಸ್, ಸೀಡ್ಸ್: ಚಳಿಗಾಲದಲ್ಲಿ ಡ್ರೈಫ್ರೂಟ್ಸ್ ಲಡ್ಡು ಅಥವಾ ಡ್ರೈಫ್ರೂಟ್ಸ್, ನಟ್ಸ್, ಸೀಡ್ಸ್ ತಿನ್ನಬೇಕು. ಪಿಸ್ತಾ, ಬಾದಾಮ್, ಗೋಡಂಬಿ, ಖರ್ಜೂರ, ಕಲ್ಲಂಗಡಿ ಬೀಜ, ಇತ್ಯಾದಿಗಳ ಸೇವನೆಯಿಂದ ನಮ್ಮ ದೇಹದಲ್ಲಿ ಉಷ್ಣತೆಯ ಪ್ರಮಾಣ ಚೆನ್ನಾಗಿರುತ್ತದೆ.
ಕಿತ್ತಳೆ ಹಣ್ಣು: ಕಿತ್ತಳೆ ಹಣ್ಣು ಚಳಿಗಾಲದ ಸೀಸನಲ್ ಫ್ರೂಟ್. ಕಿತ್ತಳೆ ದೇಹಕ್ಕೆ ತಂಪು ನೀಡುವ ಹಣ್ಣು. ಆದರೆ ಇದನ್ನು ಚಳಿಗಾಲದಲ್ಲೇ ಸೇವಿಸಬೇಕು ಅನ್ನುವುದಕ್ಕೆ ಒಂದು ಕಾರಣವಿದೆ. ಅದೇನೆಂದರೆ, ಚಳಿಗಾಲದಲ್ಲಿ ನಾವು ದೇಹವನ್ನು ಬೆಚ್ಚಗಿರಿಸಲು, ದೇಹಕ್ಕೆ ಉಷ್ಣವಾಗಿರುವ ಆಹಾರವನ್ನೇ ಸೇವಿಸುತ್ತೇವೆ. ಅದನ್ನು ಬ್ಯಾಲೆನ್ಸ್ ಮಾಡಲು, ದೇಹಕ್ಕೆ ತಂಪು ನೀವು ಕಿತ್ತಳೆ ಹಣ್ಣಿನ ಸೇವನೆ ಮಾಡುವುದು ಅತ್ಯಗತ್ಯ. ಹಾಗಾಗಿ ಚಳಿಗಾಲದಲ್ಲಿ ಕಿತ್ತಳೆ ಹಣ್ಣಿನ ಸೇವನೆ ಮಾಡಬೇಕು.