Health Tips: ಹಿರಿಯರು ತಮಗೆ ಬರುವ ಎಂಥ ಆರೋಗ್ಯ ಸಮಸ್ಯೆಯನ್ನು ಎದುರಿಸಲು ಸಿದ್ಧರಾಗಿರುತ್ತಾರೆ. ಆದರೆ ಮಕ್ಕಳಿಗೇನಾದರೂ ಆರೋಗ್ಯ ಸಮಸ್ಯೆಯಾದರೆ, ಅದನ್ನು ಸಿಹಿಸಿಕ“ಳ್ಳಲಾಗುವುದಿಲ್ಲ. ಇನ್ನು ಮಕ್ಕಳಿಗೆ ಎಂಥ ಆರೋಗ್ಯ ಸಮಸ್ಯೆ ಬಂದರೂ ನಾವು ಅದನ್ನು ನಿರ್ಲಕ್ಷಿಸಬಾರದು. ಅದರಲ್ಲೂ ಜ್ವರ, ವಾಂತಿ, ಬೇಧಿ ಬಂದಲ್ಲಿ, ವೈದ್ಯರ ಬಳಿ ಪರೀಕ್ಷಿಸಿ, ಚಿಕಿತ್ಸೆ ಕ“ಡಿಸುವುದು ತುಂಬಾ ಮುಖ್ಯ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
ನವಜಾತ ಶಿಶು ಮತ್ತು ಮಕ್ಕಳ ತಜ್ಞರಾದ ಡಾ.ಪ್ರಿಯ ಶಿವಳ್ಳಿ ಅವರು ಈ ಬಗ್ಗೆ ವಿವರಿಸಿದ್ದು, ಮಗು ಮತ್ತು ತಾಯಿಯ ರಕ್ತ ಕಣ ಬೇರೆ ಬೇರೆ ಇದ್ದಲ್ಲಿ, ಮಗುವಿಗೆ ಜಾಯಿಂಡೀಸ್ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿಯೇ ಹುಟ್ಟಿದ ಮಗುವಿಗೆ ಲೈಟ್ ಥೆರಿಪಿ ನೀಡಿ, ಹಳದಿ ಬಣ್ಣವನ್ನು ತಿಳಿಗ“ಳಿಸಲಾಗುತ್ತದೆ. ಇದು ಶಿಶುವಿನಲ್ಲಿ ಬರುವ ಕಾಮಾಲೆ ರೋಗವಾಗಿದೆ.
ಇನ್ನು ಹೆಚ್ಚು ವಯಸ್ಸಿನ ಮಕ್ಕಳಲ್ಲಿ ಬರುವ ಖಾಯಿಲೆಯ ಲಕ್ಷಣಗಳು ಬೇರೆ ರೀತಿ ಇರುತ್ತದೆ. ಸರಿಯಾಗಿ ಹಸಿವಾಗುವುದಿಲ್ಲ. ಏನು ತಿನ್ನಬೇಕು ಎನ್ನಿಸುವುದಿಲ್ಲ. ವಾಂತಿ, ಜ್ವರ, ಬೇಧಿಯಾಗುತ್ತದೆ. ಇಂಥ ಸಮಯದಲ್ಲಿ ಪೋಷಕರು ನಿರ್ಲಕ್ಷ್ಯ ವಹಿಸದೇ, ವೈದ್ಯರ ಬಳಿ ಮಕ್ಕಳನ್ನು ಕರೆದುಕ“ಂಡು ಹೋಗುವುದು ತುಂಬಾ ಮುಖ್ಯ. ಹಲವು ಕೇಸ್‌ನಲ್ಲಿ ಮಕ್ಕಳ ಜೀವ ಹೋಗಿದೆ. ಹೀಗಾಗಿ ಇಂಥ ಸಮಯದಲ್ಲಿ ಕಾಳಜಿ ವಹಿಸುವುದು ತುಂಬಾ ಮುಖ್ಯ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.