Health Tips: ಪುಟ್ಟ ಮಕ್ಕಳಿಗೆ ಹೆಚ್ಚಿನ ಜನರು ಸ್ನಾನ ಮಾಡಿಸಿದ ಬಳಿಕ ಮೈ ತುಂಬ ಘಮ ಘಮ ಎನ್ನಲಿ ಎಂದು ಪೌಡರ್ ಹಚ್ಚುತ್ತಾರೆ. ಮನೆಗೆ ಮಗುವನ್ನು ನೋಡಲು ಬಂದವರಿಗೆ, ಮಗು ಚೆಂದಗಾಣಲಿ ಎಂದು ಮಗುವಿಗೆ ಪೌಡರ್, ಕಾಡಿಗೆ ಹಚ್ಚುತ್ತಾರೆ. ಆದರೆ ಇದರಿಂದ ಮುಂದೆ ಮಗುವಿನ ಆರೋಗ್ಯ ಹದಗೆಟ್ಟು ಹೋಗಬಹುದು. ಅದು ಹೇಗೆ ಎಂದು ವೈದ್ಯರೇ ವಿವರಿಸಿದ್ದಾರೆ ನೋಡಿ.
ಮಕ್ಕಳ ಸ್ಕಿನ್ ನಾಜೂಕಾಾಗಿರುತ್ತದೆ. ಅದೆಷ್ಟು ನಾಜೂಕು ಎಂದರೆ, ನಾವು ದೇಹಕ್ಕೆ ಏನೇ ಹಚ್ಚಿದರೂ, ಅದು ದೇಹ ಹೀರಿಕೊಳ್ಳುವಷ್ಟು. ಹಾಗಾಗಿಯೇ ಮಗುವಿನ ಆರೋಗ್ಯ ಚೆನ್ನಾಗಿರಲಿ ಎಂದೇ, ಎಣ್ಣೆ ಹಚ್ಚಿ, ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡಿಸಲಾಗುತ್ತದೆ. ಆದೇ ರೀತಿ ನಾವು ಪೌಡರ್ ಹಚ್ಚಿದಾಗ, ಅದು ದೇಹದೊಳಗೆ ಹೋಗಿ, ಮುಂದೆ ಉಸಿರಾಟದ ಸಮಸ್ಯೆ, ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿಯೇ ಮಕ್ಕಳಿಗೆ ಹೆಚ್ಚು ಪೌಡರ್ ಬಳಸಬಾರದು ಅಂತಾರೆ ವೈದ್ಯರು.
ಇನ್ನು ಮಗುವಿನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ, ಮಗು ಆರೋಗ್ಯವಾಗಿರಬೇಕು, ಗಟ್ಟಿಮುಟ್ಟಾಗಿರಬೇಕು ಅಂದ್ರೆ, ಮಗುವಿಗೆ ತಾಯಿಯ ಎದೆ ಹಾಲು ಕುಡಿಸುವುದು ತುಂಬಾನೇ ಮುಖ್ಯ. ಮಗು ಹುಟ್ಟಿದ 1 ಗಂಟೆಯೊಳಗೆ ಮಗುವಿಗೆ ತಾಯಿ ಎದೆ ಹಾಲು ಕುಡಿಯಬೇಕು. 6 ತಿಂಗಳವರೆಗೆ ಬರೀ ಎದೆ ಹಾಲನ್ನೇ ಕುಡಿಸಬೇಕು. ನೀರನ್ನು ಸಹ ಕುಡಿಸಬಾರದು ಅಂತಾ ವೈದ್ಯರು ಹೇಳುತ್ತಾರೆ. ಹೀಗೆ ಮಾಡುವುದರಿಂದ ಮಗು ಆರೋಗ್ಯವಾಗಿ, ಗಟ್ಟಿಮುಟ್ಟಾಗಿ ಬೆಳೆಯುತ್ತದೆ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.