Health Tips: ಕರ್ನಾಟಕ ಟಿವಿ ಹೆಲ್ತ್ ಯೂಟ್ಯೂಬ್ ಚಾನೆಲ್‌ನಲ್ಲಿ ಹಲವು ರೋಗಗಳಿಗೆ ಸಂಬಂಧಿಸಿದ, ರೋಗಗಳ ಪರಿಹಾರಕ್ಕೆ ಸಂಬಂಧಿಸಿದ ವೀಡಿಯೋವನ್ನು ನೀವು ನೋಡಿರಬಹುದು. ಅದೇ ರೀತಿ ನಾವಿಂದು ಪಿತ್ತಕೋಶದಲ್ಲಿ ಕಲ್ಲಿದ್ದರೆ, ಅದಕ್ಕೆ ಕಾರಣವೇನು ಎಂದು ಹೇಳಲಿದ್ದೇವೆ.
ಡಾ. ಅರ್ಜುನ್ ಅವರು ಈ ಬಗ್ಗೆ ವಿವರಿಸಿದ್ದು, ಕಲ್ಲುಗಳ ಸೇವನೆಯಿಂದ ಕಲ್ಲಾಗುವುದಲ್ಲ. ಬದಲಾಗಿ ಬೇರೆಯದ್ದೇ ಕಾರಣಗಳಿಂದ ಪಿತ್ತಕೋಶದಲ್ಲಿ ಕಲ್ಲಾಗುತ್ತದೆ. ಆದರೆ ಪಿತ್ತಕೋಶದಲ್ಲಿ ಕಲ್ಲಾಗಿದ್ದರ ಬಗ್ಗೆ ಹಲವರಿಗೆ ಸೂಚನೆಯೇ ಸಿಗುವುದಿಲ್ಲ. ರೂಟಿನ್ ಚೆಕಪ್‌ಗೆ ಹೋದಾಗ, ಪಿತ್ತಕೋಶದಲ್ಲಿ ಕಲ್ಲಿರುವ ಬಗ್ಗೆ ಗೊತ್ತಾಗುತ್ತದೆ.
ಅಥವಾ ಅಲ್ಲಿ ಅರ್ಧ ಗಂಟೆಯಿಂದ ಒಂದು ಗಂಟೆಯವರೆಗೂ ನೋವಾಗುತ್ತದೆ. ಆಗ ಸಣ್ಣ ನೋವೆಂದು ಹಲವರು ಪೇನ್ ಕಿಲ್ಲರ್ ತೆಗೆದುಕೊಂಡು ಸುಮ್ಮನಾಗುತ್ತಾರೆ. ಆದರೆ ಇದೇ ನೋವು ಮುಂದೆ ದೊಡ್ಡದಾಗಿ, ಹೆಚ್ಚು ಕಲ್ಲು ಬೆಳೆದಿರುತ್ತದೆ. ಹಾಗಾಗಿ ರೂಟಿನ್ ಚೆಕಪ್ ಮಾಡುವುದು ಅಗತ್ಯ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.