Wednesday, December 11, 2024

Latest Posts

Sandalwood News: ಅಜ್ಜಿಯಾದ ಸುಮಲತಾ, ಅಭಿಷೇಕ್-ಅವಿವಾಗೆ ಗಂಡು ಮಗು ಜನನ

- Advertisement -

Sandalwood News: ಸುಮಲಂತಾ ಅಂಬರೀಷ್ ಈಗ ಅಜ್ಜಿಯಾಗಿದ್ದು, ಅಭಿಷೇಕ್ ಮತ್ತು ಅವಿವಾಗೆ ಗಂಡು ಮಗು ಜನಿಸಿದೆ. ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ಅವಿವಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸುಮಲತಾ ಕೂಡ ಮೊಮ್ಮಗನನ್ನು ಎತತ್ತಿ ಮುದ್ದಾಡಿದ್ದಾರೆ. ಇನ್ನು ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ಅವಿವಾಗೆ ಇದು ಎರಡನೇಯ ವಿವಾಹವಾಗಿದ್ದು, ಅಭಿಷೇಕ್ ಜೊತೆ ಅವಿವಾ ಹಲವು ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದರು. ಎರಡು ವರ್ಷದ ಹಿಂದೆ ಗುರು ಹಿರಿಯರ ಸಮ್ಮುಖದಲ್ಲಿ ಅವಿವಾ ಮತ್ತು ಅಭಿಷೇಕ್ ವಿವಾಹವಾಯಿತು. ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರಿಯಾಗಿರುವ ಅವಿವಾ ಕೂಡ ಫ್ಯಾಷನ್ ಡಿಸೈನರ್ ಆಗಿದ್ದರು.

ಕೆಲ ತಿಂಗಳ ಹಿಂದೆ ಅವಿವಾ ಸೀಮಂತ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆಕೆ ತಾಯಿಯಾಗುತ್ತಿದ್ದಾರೆಂದು ಸಿಹಿ ಸುದ್ದಿ ಕೊಟ್ಟಿದ್ದರು. ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದು, ಅಂಬಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಅಲ್ಲದೇ ಮಂಡ್ಯದ ಗಂಡು ಮತ್ತೆ ಹುಟ್ಟಿಬಂದಿದ್ದಾರೆಂದು ಹೇಳಿ ಖುಷಿ ಪಟ್ಟಿದ್ದಾರೆ.

- Advertisement -

Latest Posts

Don't Miss