Health Tips: ಡಾ.ಪ್ರಿಯಾ ಶಿವಳ್ಳಿ ಅವರು ಬೇಸಿಗೆಯಲ್ಲಿ ಮಕ್ಕಳ ತ್ವಚೆಯನ್ನು ಯಾವ ರೀತಿ ಆರೋಗ್ಯವಾಗಿ ಇಡಬೇಕು ಎಂದು ಸಲಹೆ ನೀಡಿದ್ದಾರೆ.
ಬೇಸಿಗೆಯಲ್ಲಿ ರಜೆ ಇರುವ ಕಾರಣಕ್ಕೆ ಮಕ್ಕಳು ಬಿಸಿಲಿನಲ್ಲಿ ಆಡೋಕ್ಕೆ ಹೋಗೋದು ಸಹಜ. ಆದರೆ ಹಾಗೆ ಬಿಸಿಲಿಗೆ ಹೋದಾಗ, ಅವರ ತ್ವಚೆ ಡ್ಯಾಮೇಜ್ ಆಗಬಹುದು. ಹಾಾಗಾಗಿ ನಾವು ಅವರ ತ್ವಚೆಯ ಆರೈಕೆ ಚೆನ್ನಾಗಿ ಮಾಡಬೇಕು.
ಬಿಸಿಲಿನಲ್ಲಿ ಆಡುವಾಗ, ನಮ್ಮ ದೇಹದಲ್ಲಿರುವ ನೀರಿನ ಅಂಶ ಕಡಿಮೆಯಾಗುತ್ತದೆ. ಹಾಗಾಗಿ ಪದೇ ಪದೇ ಮಕ್ಕಳು ನೀರು ಕುಡಿಯಬೇಕು. ಅಥವಾ ಮನೆಯಲ್ಲೇ ಮಾಡುವ ಲಸ್ಸಿ, ಸೂಪ್, ಮಜ್ಜಿಗೆ, ಎಳನೀರು, ಜ್ಯೂಸ್, ತರಕಾರಿ, ಹಣ್ಣಿನ ಸೇವನೆ ಮಾಡಬೇಕು. ಇದರಿಂದ ನಮ್ಮ ದೇಹ ತಂಪಾಗಿರುತ್ತದೆ. ಅಲ್ಲದೇ, ನಮ್ಮ ತ್ವಚೆ ಚೆನ್ನಾಗಿಬೇಕು ಅಂದ್ರೆ ನಾವು, ಮೈ ತುಂಬ ಉಡುಪು ಧರಿಸಬೇಕು. ಮಕ್ಕಳಿಗೂ ಸೆಕೆ ಎಂದು ಸ್ಲಿವ್‌ಲೆಸ್ ಅಂಗಿ ಹಾಕುವ ಬದಲು, ಪೂರ್ತಿ ತೋಳಿನ ಅಂಗಿಯನ್ನೇ ಹಾಕಿ. ಇದರಿಂದ ಅವರ ತ್ವಚೆ ಆರೋಗ್ಯವಾಗಿರುತ್ತದೆ.
ಇನ್ನು ಮಕ್ಕಳ ತ್ವಚೆಗೆ ಉತ್ತಮ ಕ್ವಾಲಿ”ಿಯ ಸನ್‌ಸ್ಕ್ರೀನ್ ಹಾಕಿ. ಎಸ್‌ಪಿಎಫ್ 50 ಇರುವ ಸನ್‌ಸ್ಕ್ರೀಮ್ ಮಕ್ಕಳಿಗೆ ಬಳಸಬಹುದು. ಈ ಬಗ್ಗೆ ಇನ್ನಷ್”ು ಮಾಹಿತಿಗಾಗಿ ವೀಡಿಯೋ ನೋಡಿ.