Health Tips: ಈಗಿನ ಕಾಲದ ಆಹಾರ ಪದ್ಧತಿಯಿಂದ ಹಲವರು ದೇಹದ ಬೊಜ್ಜು ಹೆಚ್ಚಿಸಿಕೊಂಡು, ಡಯಟ್ ಮಾಡಿ, ಮತ್ತೆ ಫಿಟ್ ಆಗಬೇಕು ಅಂತಾ ಒದ್ದಾಡುತ್ತಿರುತ್ತಾರೆ. ಕೆಲವರು ಯೋಗ, ಜಿಮ್ ಜಾಯಿನ್ ಮಾಡಿ, ತೂಕ ಇಳಿಸುವ ಪ್ರಯತ್ನ ಮಾಡುತ್ತಾರೆ. ಮತ್ತೆ ಕೆಲವರು ಡಯಟ್ ಮಾಡಿ ತೂಕ ಇಳಿಸಲು ನೋಡುತ್ತಾರೆ. ಆದ್ರೆ ತೂಕ ಇಳಿಸುವುದು ಅಷ್ಟು ಈಸಿಯಲ್ಲ. ಅದರಲ್ಲೂ ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಿ, ಫಿಟ್ ಆಗಿ ಇರುವುದಂತೂ ಈಸಿ ಅಲ್ಲವೇ ಅಲ್ಲ.
ಯಾಕಂದ್ರೆ ಕೆಲವರು ತಮ್ಮದೇ ರೀತಿಯಲ್ಲಿ, ಮನಸ್ಸಿಗೆ ಬಂದ ಹಾಗೆ ಡಯಟ್ ಮಾಡಿ, ತೂಕ ಇಳಿಸಿಕೊಳ್ಳುತ್ತಾರೆ. ಆದರೆ ಹೀಗೆ ತೂಕ ಇಳಿಸಿಕೊಳ್ಳುವಾಗ, ನಿಮ್ಮ ದೆಹದಲ್ಲಿ ಕೆಲವು ವ್ಯತ್ಯಾಸಗಳು ಕಂಡುಪ ಬಂದರೆ, ಇದು ತೂಕ ಇಳಿಸಿಕೊಳ್ಳುವ ತಪ್‌ಪು ವಿಧಾನ ಎಂದು ನೀವು ಅರಿತುಕೊಳ್ಳಬೇಕಾಗುತ್ತದೆ.
ಮೊದಲ ಲಕ್ಷಣ ಅಂದ್ರೆ ನಿಮ್ಮ ದೇಹದ ಬೊಜ್ಜು ಕರಗುವುದು ಬಿಟ್ಟು, ನಿಮ್ಮ ದೇಹದಲ್ಲಿರುವ ಮಾಂಸಖಂಡಗಳು ಸಣ್ಣಗಾಗುವುದು. ಅವುಗಳು ತೂಕ ಕಳೆದುಕೊಳ್ಳುವುದು. ನೀವು ಡಯಟ್ ಮಾಡುವಾಗ, ನಿಮ್ಮ ಮಾಂಸಖಂಡಗಳು ತೂಕ ಕಳೆದುಕೊಳ್ಳುತ್ತಿದೆ ಎಂದಲ್ಲಿ, ಅದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತಿದೆ ಎಂದರ್ಥ.
ಹೀಗೆ ಆಗುವುದರಿಂದ ನಿಮ್ಮ ದೇಹದಲ್ಲಿ ಶಕ್ತಿಕುಂದಿ ಹೋಗುತ್ತದೆ. ಮುಖದ ಸೌಂದರ್ಯ ಹಾಳಾಗುತ್ತದೆ. ನೆನಪಿನ ಶಕ್ತಿ ಹೊರಟು ಹೋಗುತ್ತದೆ. ಮೂಳೆಗಳು ದುರ್ಬಲಗೊಳ್ಳುತ್ತದೆ. ಅಲ್ಲದೇ, ಗ್ಯಾಸ್ಟಿಕ್ ಸಮಸ್ಯೆ ಉಂಟಾಗುತ್ತಿದೆ. ನಿಮ್ಮ ಮೂಳೆಗಳಲ್ಲಿ ನೋವುಂಂಟಾಗುತ್ತಿದೆ ಎಂದಲ್ಲಿ, ನಿಮ್ಮ ದೇಹದಲ್ಲಿರುವ ಬೊಜ್ಜು ಇಳಿಯುತ್ತಿಲ್ಲ. ಬದಲಾಗಿ ನಿಮ್ಮ ದೇಹದಲ್ಲಿರುವ ಪೌಷ್ಠಿಕಾಂಶಗಳು ನಾಶವಾಗುತ್ತಿದೆ ಎಂದರ್ಥ. ಹಾಗಾಗಿ ನೀವೇ ತೂಕವಿಳಿಸಿಕೊಳ್ಳುವ ಬದಲು ಡಯಟಿಶಿಯನ್ ಬಳಿ ಸಲಹೆ ಪಡೆಯುವುದು ಉತ್ತಮ.