Friday, December 27, 2024

Latest Posts

Health Tips: ಬೊಕ್ಕತಲೆಗೆ ಪರಿಹಾರವೇ ಇಲ್ಲವಾ..? ಇದಕ್ಕೆಲ್ಲಾ ಕಾರಣಗಳೇನು..?

- Advertisement -

Health Tips: ಇಂದಿನ ಕಾಲದ ಯುವಕರ ಪ್ರಮುಖ ಸಮಸ್ಯೆ ಅಂದ್ರೆ, ಬೊಕ್ಕತಲೆ. ವಯಸ್ಸು ಮೂವತ್ತು ದಾಡುವ ಮುನ್ನವೇ ತಲೆಯಲ್ಲಿರುವ ಕೂದಲುಗಳು, ಉದುರಲು ಶುರುವಾಗುತ್ತದೆ. 35ನೇ ವಯಸ್ಸಿಗಂದ್ರೆ, ತೀರಾ ವಯಸ್ಸಾದವರ ರೀತಿ ಕಾಣಲು ಶುರುವಾಗುತ್ತದೆ. ಹಾಗಾದ್ರೆ ಬೊಕ್ಕತಲೆಗೆ ಪರಿಹಾರವೇನು ಅಂತಾ ಪಾರಂಪರಿಕ ವೈದ್ಯೆ ಪವಿತ್ರಾ ವಿವರಿಸಿದ್ದಾರೆ ನೋಡಿ.

ಬೊಕ್ಕತಲೆಯ ಸಮಸ್ಯೆ ಪುರುಷರಲ್ಲೇ ಹೆಚ್ಚು ಕಾಣಿಸಿಕೊಳ್ಳಲು ಕಾರಣವೇನು ಅಂದ್ರೆ, ದೇಹದಲ್ಲಾಗುವ ಅನಾರೋಗ್ಯಕರ ಬದಲಾವಣೆಗಳು. ಈ ಬದಲಾವಣೆಯನ್ನು ಆರೋಗ್ಯಕರವಾಗಿ ಮಾಡಿಕೊಂಡರೆ, ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.

ಪುರುಷರು ಹೆಚ್ಚಾಗಿ ಹೊರಗಡೆಯೇ ತಿರುಗಾಡುತ್ತಿರುತ್ತಾರೆ. ಹಾಗಾಗಿ ದೇಹದಲ್ಲಿ ಉಷ್ಣತೆ ಹೆಚ್ಚಾಗಿರುತ್ತದೆ. ಆ ಉಷ್ಣತೆಯನ್ನು ಕಡಿಮೆ ಮಾಡಿ, ದೇಹವನ್ನು ತಂಪು ಮಾಡುತ್ತಿರಬೇಕು. ಅದಕ್ಕೆ ಬೇಕಾದ ಆಹಾರ, ಪಾನೀಯವನ್ನು ಸೇವಿಸಬೇಕು. ಆದರೆ ಆ ಬಗ್ಗೆ ಪುರುಷರು ಗಮನ ಕೊಡದ ಕಾರಣಕ್ಕೆ, ಈ ರೀತಿ ಕೂದಲು ಉದುರುವ ಸಮಸ್ಯೆ ಉದ್ಭವಿಸುತ್ತದೆ. ಪುರುಷರು ಹೆಚ್ಚು ನೀರು ಕುಡಿಯಬೇಕು. ವಾರದಲ್ಲಿ ಎರಡರಿಂದ ಮೂರು ಬಾರಿಯಾದ್ರೂ ಎಳನೀರು, ಮಜ್ಜಿಗೆ, ಹಸಿ ತರಕಾರಿ, ಹಣ್ಣುಗಳ ಸೇವನೆ ಮಾಡಿ, ದೇಹವನ್ನು ತಂಪು ಮಾಡಿಕೊಳ್ಳುತ್ತಿರಬೇಕು.

ಇನ್ನು ಪುರುಷರು ಹೆಚ್ಚಾಗಿ ಕಾಫಿ, ಟೀ ಸೇವನೆ ಮಾಡುತ್ತಿರುತ್ತಾರೆ. ಇದರಿಂದಲೂ ಕೂದಲು ಉದುರುವ ಸಮಸ್ಯೆ ಉದ್ಭವಿಸಬಹುದು. ಇನ್ನು ಹೆಚ್ಚು ಮಸಾಲೆಯುಕ್ತ ಆಹಾರ ಸೇವಿಸುವುದು, ಗೋದಿ ಮೈದಾ ಸೇವನೆ ಮಾಡುವುದು, ಹೆಚ್ಚು ಮಾಂಸದ ಸೇವನೆ ಮಾಡುವುದೆಲ್ಲ ಮಾಡಿದಾಗ, ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ.

ಇನ್ನು ನಿದ್ರಾಹೀನತೆ, ಮಾನಸಿಕ ಒತ್ತಡ, ಕುಟುಂಬ- ಕೆಲಸದ ಒತ್ತಡದಿಂದಲೂ ಪುರುಷರಿಗೆ ಬೇಗ ಬೊಕ್ಕತಲೆ ಸಮಸ್ಯೆ ಬರುತ್ತದೆ. ಹಾಗಾದ್ರೆ ಈ ಸಮಸ್ಯೆ ಪರಿಹಾರವಾಗಲು ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯಬೇಕು ಅಂದ್ರೆ ವೀಡಿಯೋ ನೋಡಿ.

- Advertisement -

Latest Posts

Don't Miss