Thursday, December 26, 2024

Latest Posts

Infertility : ಮಕ್ಕಳಾಗ್ತಿಲ್ಲ.. ಹೆಚ್ಚಾಗ್ತಿದೆ ಪ್ರಾಬ್ಲಂ..ಕಾರಣ ಏನು..? ಪರಿಹಾರ ಏನು..?

- Advertisement -

ಭಾರತದಲ್ಲಿ 10 ದಂಪತಿಗಳಲ್ಲಿ 6 ದಂಪತಿಗಳು ಸಂತಾನ ಸಮಸ್ಯೆ ಫೇಸ್ ಮಾಡ್ತಿದ್ದಾರೆ.. ಮಕ್ಕಳಾಗ್ತಿಲ್ಲ ಅಂತ ದುಡ್ಡಿದ್ದವರೇ, ಸ್ಥಿತಿವಂತರೇ ಕೊರಗ್ತಿದ್ದಾರೆ, ಕೆಲವರು ಸಾವಿನ ದಾರಿ ಹಿಡಿದಿದ್ದಾರೆ.. ಮಕ್ಕಳು ಆಗದೇ ಇರೋದಕ್ಕೆ ಕಾರಣ ಗಂಡನಾ? ಹೆಂಡ್ತಿನಾ? ಇಲ್ಲ ಲೈಫ್​ಸ್ಟೈಲ್ ಅಥವಾ ಒತ್ತಡ, ಇಲ್ಲ ಅನುವಂಶೀಯ ಗುಣ ಕಾರಣ ಆಗ್ತಿದ್ಯಾ? ಈ ಬಗ್ಗೆ ಇಂದು ಕಂಪ್ಲೀಟ್ ಮಾಹಿತಿ ಕೊಡ್ತಿದ್ದೀವಿ.

ಹಿಂದಿನ ಕಾಲದಲ್ಲಿ ಮಕ್ಕಳಿರಲವ್ವ ಮನೆ ತುಂಬಾ ಅಂತ ಹರಸಿ ಆಶೀರ್ವಾದ ಮಾಡ್ತಿದ್ರು.. ಇತ್ತೀಚಿನ ದಿನಗಳಲಗಲ್ಲಿ ಮಕ್ಕಳಾದ್ರೆ ಸಾಕವ್ವ ಅನ್ನೋ ರೀತಿ ಆಗಿದೆ. ಕೆಲವರು ಒಂದೇ ಮಕ್ಕಳು ಸಾಕಪ್ಪ ಅಂತ ಸುಮ್ನಾಗಿದ್ದಾರೆ. ಆದ್ರೆ ಎಷ್ಟೋ ದಂಪತಿಗಳಿಗೆ ಆ ಒಂದು ಮಗುವಿನ ಭಾಗ್ಯವೂ ಇಲ್ಲ..ಯುವ ದಂಪತಿಗಳಲ್ಲಿ ಈಗ ಸಂತಾನ ಹೀನತೆ ಸಮಸ್ಯೆ ಕಾಣಿಸಿಕೊಳ್ತಿದೆ. ಇತ್ತೀಚೆಗೆ ವಿವಾಹಿತರಲ್ಲಿ ಕಾಣಿಸ್ತಿರೋ ಅತಿ ದೊಡ್ಡ ಸಮಸ್ಯೆ ಅಂದ್ರೆ ಸಂತಾನ ಹೀನತೆ. ಮಹಿಳೆಯರು ಹಾಗೂ ಪುರುಷರು ಕೂಡ ಈ ಸಂತಾನಹೀನತೆಗೆ ಕಾರಣ ಆಗಬಹುದು.ಗಂಡು ಅಥವಾ ಹೆಣ್ಣು ಯಾರೊಬ್ಬರಲ್ಲಿ ಆದ್ರೂ ಸಮಸ್ಯೆ ಕಾಣಿಸಿಕೊಂಡ್ರೆ ಅದು ಸಂತಾನಹೀನತೆಗೆ ಕಾರಣ ಆಗಬಲ್ಲದು.. ಇದು ನಿಜಕ್ಕೂ ಬೇಸರದ ವಿಚಾರ.

 

 

ಪ್ರಸ್ತುತ ದಿನಗಳಲ್ಲಿ ಲಕ್ಷಾಂತರ ಜನರಿಗೆ ಮಕ್ಕಳು ಆಗ್ತಿಲ್ಲ ಅನ್ನೋ ಕೊರಗು ಕಾಡುತ್ತಿದೆ. ನಾವು ಎಷ್ಟು ಲಕ್ಷ ಬೇಕಾದ್ರೂ ಹಣ ಖರ್ಚು ಮಾಡ್ತೀವಿ ಒಂದು ಮಗು ಆಗಲಿ ಅಂತಾ ಯುವ ದಂಪತಿಗಳು ಆಸ್ಪತ್ರೆಗಳಿಗೆ ಅಲೆಯುತ್ತಿದ್ದಾರೆ. ಇದ್ರಲ್ಲಿ ಶೇ.10ರಷ್ಟು ಮಂದಿ ಸಕ್ಸಸ್ ಕಂಡು, ಖುಷಿಯಿಂದಿದ್ದಾರೆ. ಆದರೆ, ಎಷ್ಟೇ ಹಣ ಖರ್ಚು ಮಾಡಿದ್ರೂ, ಎಷ್ಟೇ ದೇವರಿಗೆ ಹರಕೆ ಹೊತ್ತರೂ ಕೆಲವರಿಗೆ ಮಕ್ಕಳು ಆಗುತ್ತಿಲ್ಲ. ನಮಗೆ ಮಕ್ಕಳಾಗಿಲ್ಲ ಅನ್ನೋ ಕೊರಗಿನಲ್ಲಿ ಕೋಟ್ಯಂತರ ಭಾರತೀಯರಿದ್ದಾರೆ.

ದೇಶದಲ್ಲಿ ಸಂತಾನ ಸಮಸ್ಯೆ ಎಷ್ಟಿದೆ ಅನ್ನೋದನ್ನು ಈ ಅಂಕಿ ಅಂಶಗಳಲ್ಲಿ ಗಮನಿಸಿ

ಭಾರತದಲ್ಲಿ ಬಂಜೆತನ
– 2.75 ಕೋಟಿ ಜನರಿಗೆ ಬಂಜೆತನದ ಸಮಸ್ಯೆ
– 10 ದಂಪತಿಗಳಲ್ಲಿ 6 ಮಂದಿಯಲ್ಲಿ ಸಮಸ್ಯೆ
– ಕರ್ನಾಟಕದ ಮಹಿಳೆಯರಲ್ಲಿ ಸಂತಾನ ಸಮಸ್ಯೆ
– ಪ್ರತಿ ಸಾವಿರ ಮಹಿಳೆಯರಲ್ಲಿ 28 ಮಂದಿಗೆ ಸಮಸ್ಯೆ
– ಗೋವಾದಲ್ಲಿ ಸಾವಿರಕ್ಕೆ 49 ಮಂದಿಯಲ್ಲಿ ಬಂಜೆತನ

ಮದುವೆ ಆದ್ಮೇಲೆ ಮಕ್ಕಳು ಆಗ್ಲೇ ಬೇಕು. ಇಲ್ಲ ಅಂದ್ರೆ ಅದು ದಾಂಪತ್ಯದಲ್ಲಿ ಕಲಹಕ್ಕೆ ನಾಂದಿ ಹಾಡುತ್ತೆ.. ಮಕ್ಕಳಿಗಾಗಿಯೇ ಗಂಡ ಹೆಂಡತಿ ಕಿತ್ತಾಡೋದನ್ನ ನೋಡಿದ್ದೀವಿ. ಕೊನೆಗೆ ಅದು ದಾಂಪತ್ಯದಲ್ಲಿ ಬಿರುಕಿಗೆ ಕಾರಣ ಆಗಿ ವಿಚ್ಛೇದನದವರೆಗೂ ಹೋಗ್ತಿದೆ. ಕೆಲವರು ಮಕ್ಕಳಾಗಿಲ್ಲ ಅಂತ 2ನೇ ಮದುವೆ ಆಗೊದನ್ನೂ ನೋಡಿದ್ದೀವಿ. ಇನ್ನು ಕೆಲವರು ಮಕ್ಕಳಿಲ್ಲ ಎಂದು ನಿಂದನೆಗೆ ಒಳಗಾಗಿ ಆತ್ಮಹತ್ಯೆಯ ದಾರಿಯನ್ನೂ ಹಿಡಿದ ಉದಾಹರಣೆಗಳಿವೆ

ಇಂದಿನ ದಿನದಲ್ಲಿ ಮಕ್ಕಳಾಗದೇ ಇರೋದಕ್ಕೆ ಹಲವು ಕಾರಣಗಳಿವೆ. ಇದ್ರಲ್ಲಿ ಗಂಡು ಹೆಣ್ಣು ಇಬ್ಬರಲ್ಲಿನ ಸಮಸ್ಯೆಗಳೇ ಕಾರಣ..

ಸಂತಾನ ಹೀನತೆಗೆ ಕಾರಣ
– ಪುರುಷರಲ್ಲಿ ವೀರ್ಯಾಣುಗಳ ಕೊರತೆ
– ಮಹಿಳೆಯರಲ್ಲಿ ಗರ್ಭಕೋಶ ಸಮಸ್ಯೆ
– ಹಾರ್ಮೋನ್​​​​​ ಅಸಮತೋಲನ
– ಥೈರಾಯ್ಡ್, ಪಿಸಿಓಎಸ್ ಸಮಸ್ಯೆ
– ಅತಿಯಾದ ಧೂಮಪಾನ, ಮದ್ಯಪಾನ
– ಮಧುಮೇಹ, ಅತಿಯಾದ ತೂಕ
– ಲೈಂಗಿಕ ಸಮಸ್ಯೆಗಳು, ಕೆಲಸದ ಒತ್ತಡ
– ಅನಾರೋಗ್ಯಕರ ಜೀವನ ಶೈಲಿ
– ಅನುವಂಶಿಕ ದೋಷಗಳು
– ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದು

ಸಂತಾನ ಸಮಸ್ಯೆ ಎದುರಿಸುತ್ತಿರೋರಿಗೆ ಕೆಲವೊಂದು ಪರಿಹಾರ ಮಾರ್ಗವಿದೆ. ಪ್ರಸ್ತುತ ದಿನಗಳಲ್ಲಿ ಲಕ್ಷಾಂತರ ಜನರಿಗೆ ಮಕ್ಕಳು ಆಗ್ತಿಲ್ಲ ಅನ್ನೋ ಕೊರಗು ಕಾಡುತ್ತಿದೆ. ಇಂಥವರಿಗಾಗಿಯೇ ಈಗ ಐವಿಎಫ್​​ನಂಥಾ ಚಿಕಿತ್ಸಾ ಪದ್ಧತಿಗಳು ಲಭ್ಯವಿದೆ..
ಸಹಜವಾಗಿ ಗರ್ಭಧಾರಣೆ ಆಗದಿದ್ದಾಗ ಕೃತಕವಾಗಿ ಗರ್ಭಧಾರಣೆ ಮಾಡುವ ಪ್ರಕ್ರಿಯೆಯೇ ಇನ್‌ ವಿಟ್ರೊ ಫರ್ಟಿಲೈಸೇಷನ್‌ ಅಥವಾ ಐವಿಎಫ್‌.. ಈ ವಿಧಾನದಲ್ಲಿ, ಪತ್ನಿಯ ಅಂಡಾಣು ಹಾಗೂ ಪತಿಯ ವೀರ್ಯಾಣು ತೆಗೆದು ಪ್ರಯೋಗಾಲಯದಲ್ಲಿ ಎರಡನ್ನೂ ಸೇರಿಸಿ ನಿಗದಿತ ಅವಧಿಯವರೆಗೆ ಭ್ರೂಣವನ್ನು ಬೆಳೆಸಲಾಗುತ್ತದೆ. ನಂತರ ಅದನ್ನು ಮತ್ತೆ ಪತ್ನಿಯ ಗರ್ಭಕೋಶಕ್ಕೆ ವರ್ಗಾವಣೆ ಮಾಡಿ ಬೆಳೆಸಲಾಗುತ್ತೆ.. ಗರ್ಭಿಣಿಗೆ ಹೆರಿಗೆ ಆಗುವವರೆಗೂ ನಿಯಮಿತವಾಗಿ ನಿಗಾ ವಹಿಸಲಾಗಿರುತ್ತೆ.

ಸಾಮಾನ್ಯವಾಗಿ ಐಯುಐ ಮತ್ತು ಐವಿಎಫ್‌ ಚಿಕಿತ್ಸೆ ಮೂಲಕ ಮಕ್ಕಳನ್ನು ಮಾಡಿಕೊಳ್ಳಲು ತುಂಬಾ ದುಬಾರಿ ಹಣ ತೆರಬೇಕಾಗುತ್ತದೆ ಎಂಬ ಭಾವನೆ ಜನರಲ್ಲಿದೆ. ಆದರೆ ಆ ತಂತ್ರಜ್ಞಾನದ ಚಿಕಿತ್ಸೆ ತೀರಾ ದುಬಾರಿಯಲ್ಲ. ಉತ್ತಮ ಲ್ಯಾಬ್‌ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆಯಿಂದ ಸ್ವಲ್ಪ ಹೆಚ್ಚು ಹಣ ಖರ್ಚಾಗಲಿದೆ. ಅಗತ್ಯ ಪರೀಕ್ಷೆಗಳ ನಂತರ ಐಯುಐಗೆ ಸುಮಾರು 10 ಸಾವಿರ ಮತ್ತು ಐವಿಎಫ್‌ಗೆ ಸುಮಾರು 1.75 ರೂ. ವೆಚ್ಚ ಆಗಬಹುದು.. ಕೆಲವೆಡೆ ಇನ್ನಷ್ಟು ಹೆಚ್ಚಿನ ಹಣ ತೆರಬೇಕಾಗಿ ಬರಬಹುದು.

ಇತ್ತೀಚಿನ ದಿನದಲ್ಲಿ ಬೆಂಗಳೂರಿನ ಜನರ ಲೈಫ್ ಬದಲಾಗ್ತಿದೆ.. ಓವರ್ ನೈಟ್ ಪಾರ್ಟಿ, ಹೆಣ್ಮಕ್ಕಳಲ್ಲೂ ಕುಡಿತದ ಅಭ್ಯಾಸ, ಅತಿಯಾದ ಸಿಗರೇಟ್ ಸೇವನೆ ಕೂಡ ಮಹಿಳೆಯರಲ್ಲಿ ಬಂಜೆತನ ಆಗ್ತಿದೆ. ಬೆಂಗಳೂರಲ್ಲಿ ಇವರ ಸಂಖ್ಯೆ ಹೆಚ್ಚಾಗ್ತಾನೇ ಇದೆ.. ಬೆಂಗಳೂರಲ್ಲೇ ಇಂತವರಿಗಾಗಿ ಸಾಕಷ್ಟು ಐವಿಎಫ್​ ಕೇಂದ್ರಗಳೂ ಇವೆ.. ಮುಖ್ಯವಾಗಿ ಬೆಂಗಳೂರಿನಲ್ಲಿ ಇಂದಿರಾ ಐವಿಎಫ್, ಗರ್ಭಗುಡಿ ಐವಿಎಫ್, ಕ್ಲೌಡ್​​ ನೈನ್​​ ನಂತಹ ಹತ್ತಾರು ಐವಿಎಫ್ ಸೆಂಟರ್​​ಗಳಿವೆ.. ಈ ಐವಿಎಫ್​ ಸೆಂಟರ್​​ಗಳಿಗೆ ಸಂತಾನ ಸಮಸ್ಯೆ ಅನುಭವಿಸ್ತಿರುವವರು ಬಂದು ಫಲ ಕಾಣ್ತಿದ್ದಾರೆ.. ಮಕ್ಕಳೇ ಆಗಲ್ಲ ಅನ್ನೋರು ಕೂಡ ಈಗ ಐವಿಎಫ್​​ ಸೆಂಟರ್​ಗೆ ಒಮ್ಮೆ ಭೇಟಿ ನೀಡಿ ತಜ್ಞ ವೈದ್ಯರ ಜೊತೆ ಸಮಾಲೋಚಿಸಿದ್ರೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗೋದು ಖಂಡಿತ…

- Advertisement -

Latest Posts

Don't Miss