Health News : ದಿನನಿತ್ಯದ ಜಂಜಾಟದ ಜೊತೆ ನಮಗೆ ಪ್ರಮುಖವಾಗಿ ಕಾಡೋದು ಅಧಿಕ ತೂಕದ ಸಮಸ್ಯೆ ಆದ್ರೆ ಬೇಗನೆ ತೂಕ ಇಳಿಸಿಕೊಳ್ಳಲು ಮೊದಲಾಗಿ ನಾವು ಓಡೋದೆ ಜಿಮ್ ಕಡೆಗೆ ಆದ್ರೆ ಈ ಎಲ್ಲದರ ಬದಲಾಗಿ ಇಂತಹ ಮನೆ ಮದ್ದು ಪಾನೀಯ ಕುಡಿದರೆ ಖಂಡಿತವಾಗಿ ನೀವು ಆರೋಗ್ಯಕರವಾಗಿಯೇ ತೂಕ ಇಳಿಸಬಹುದು. ಹಾಗಿದ್ರೆ ಆ ಪಾನೀಯ ಯಾವುದು ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್……..
ದೇಹದ ತೂಕವು ಹೆಚ್ಚಾಗಿ ಬೊಜ್ಜು ಆವರಿಸಿಕೊಂಡರೆ, ನಾನಾ ರೀತಿಯಲ್ಲಿ ಆರೋಗ್ಯ ಸಮಸ್ಯೆಗಳು ಕಾಡುವ ಭಯ ನಮ್ಮನ್ನು ಕಾಡುತ್ತೆ. ಹೀಗಾಗಿ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಆರೋಗ್ಯಕರ ಉಪಾಯ ಇಲ್ಲಿದೆ. ಮಲಗುವ ಮುಂಚೆ ನಾವು ಹೇಳುವ ಪಾನೀಯಗಳನ್ನು ಕುಡಿದರೆ ಸಾಕು. ನಿಮ್ಮ ಹೆಚ್ಚಾದ ದೇಹದ ತೂಕ ಕಡಿಮೆ ಮಾಡಲು ನಿಮಗೆ ನೆರವಾಗುತ್ತವೆ…
ನೆನೆಸಿದ ಮೆಂತ್ಯ ನೀರು: ಮೆಂತ್ಯೆ ನಮ್ಮ ಆರೋಗ್ಯಕ್ಕೆ ತುಂಬಾನೆ ಪ್ರಯೋಜನಕಾರಿ. ಮೆಂತೆಯಿಂದ ಆನೇಕ ಆರೋಗ್ಯ ಸಮಸ್ಯೆಗಳನ್ನು ನಾವು ಪರಿಹರಿಸಿಕೊಳ್ಳಬಹುದು.
ಆಗಾಗ ನೆನೆಸಿದ ಮೆಂತ್ಯ ನೀರು ಕುಡಿಯುವುದರಿಂದ ದೇಹದ ಬಿಸಿ ಹೆಚ್ಚಾಗಿ ತೂಕ ಕಡಿಮೆಯಾಗುತ್ತದೆ. ಒಳ್ಳೆಯ ಫಲಿತಾಂಶ ಗಳಿಗಾಗಿ ಮಲಗುವ ಒಂದು ಗಂಟೆ ಮುಂಚೆ ಇದನ್ನು ಕುಡಿಯಬೇಕು.
ದಾಲ್ಚಿನ್ನಿ ಚಹಾ: ದಾಲ್ಚಿನ್ನಿ ಚಹಾ ಸಹ ನಮ್ಮ ದೇಹವನ್ನು ಸ್ವಚ್ಛ ಮಾಡುತ್ತದೆ ಜೊತೆಗೆ ಮೆಟಬಾಲಿಸಂ ಪ್ರಕ್ರಿಯೆಯನ್ನು ವೃದ್ಧಿಸುತ್ತದೆ. ಬಹಳ ಸುಲಭವಾಗಿ ಹೆಚ್ಚಾದ ಬೊಜ್ಜನ್ನು ಕರಗಿಸಲು ಈ ಚಹಾ ನಮಗೆ ಸಹಕಾರಿಯಾಗುತ್ತದೆ.
ದ್ರಾಕ್ಷಿರಸ: ಕಪ್ಪು ದ್ರಾಕ್ಷಿ ಹಣ್ಣು ಅತ್ಯಂತ ಆರೋಗ್ಯಕರ ಪ್ರಯೋಜನ ನೀಡುತ್ತದೆ. ಪ್ರತಿ ದಿನ ರಾತ್ರಿ ಮಲಗುವ ಮುಂಚೆ ಸಕ್ಕರೆ ಹಾಕದೆ ಒಂದು ಸಣ್ಣ ಕಪ್ ದ್ರಾಕ್ಷಿ ಹಣ್ಣಿನ ಜ್ಯೂಸ್ ಕುಡಿದು ಮಲಗಿದರೆ ಉತ್ತಮ. ಇದು ಬೊಜ್ಜು ಕರಗಿಸಲು ಸಹಕಾರಿ.
ಸಾಧಾರಣ ನೀರು : ಕುಡಿಯುವ ನೀರಿನಲ್ಲಿ ಯಾವುದೇ ಕ್ಯಾಲೋರಿಗಳು ಇರುವುದಿಲ್ಲ. ಇದರಿಂದ ನೆಮ್ಮದಿಯ ನಿದ್ರೆ ಬರುತ್ತೆ. ನಿದ್ರೆ ಮಾಡುವಾಗ ತೂಕ ಕಮ್ಮಿ ಆಗುತ್ತೆ. ಮಲಗುವ ಮುಂಚೆ ಬಿಸಿ ನೀರು ಇಲ್ಲವೇ ಸಾಧಾರಣ ನೀರು ಕುಡಿಯೋ ಅಭ್ಯಾಸ ಉತ್ತಮ.
ಚಾಮೋಮೈಲ್ ಚಹಾ: ಚಾಮೋಮೈಲ್ ಹೂವಿನ ಗುಣವೇ ಹಾಗೆ. ದೇಹದಲ್ಲಿರುವ ಬೇಡದ ಕೆಟ್ಟ ವಿಷಕಾರಿ ಅಂಶಗಳನ್ನು ಹೊರಗೆ ಹಾಕುವ ಮೂಲಕ ತೂಕವನ್ನು ನಿಯಂತ್ರಣ ಮಾಡುತ್ತದೆ.
ಅರಿಶಿನ ಬೆರೆಸಿದ ಹಾಲು: ರಾತ್ರಿ ಚೆನ್ನಾಗಿ ನಿದ್ರೆ ಬರಲಿ ಎಂದು ಕುಡಿಯುವ ಅರಿಶಿನ ಮಿಶ್ರಿತ ಹಾಲು ನೆಮ್ಮದಿಯ ನಿದ್ರೆ ಕೊಡುತ್ತದೆ. ಇದರ ಜೊತೆಗೆ ನಮಗೆ ಗೊತ್ತಿಲ್ಲದೆ ಮೆಟಬಾಲಿಸಂ ಉತ್ತೇಜಿಸಿ, ವಿಷಕಾರಿ ಅಂಶಗಳನ್ನು ಹೊರಗೆ ಹಾಕಿ ತೂಕ ಕಮ್ಮಿ ಮಾಡಲು ಇದು ಸಹಕರಿಸುತ್ತದೆ.
ಫರ್ಮೆಂಟೆಡ್ ಫುಡ್ ಎಂದರೇನು..? ಇದನ್ನು ನಾವು ಪ್ರತಿದಿನ ಸೇವಿಸುತ್ತೇವೆ. ಹಾಗಾದ್ರೆ ಇದು ಒಳ್ಳೆಯದಾ..?




