Health Tips: ಹಳ್ಳಿ ಕಡೆ ಜನ ಅದರಲ್ಲೂ ಉತ್ತರಕರ್ನಾಟಕದ ಕಡೆ ಜನ ಹೆಚ್ಚಾಗಿ ಊಟದೊಂದಿಗೆ ಈರುಳ್ಳಿ ಸೇವನೆ ಮಾಡುತ್ತಾರೆ. ಹಾಗಾಗಿಯೇ ಹೆಚ್ಚಿನವರು ದೀರ್ಘಾಯುಷಿಗಳಾಗಿರುತ್ತಾರೆ. ಗಟ್ಟಿಮುಟ್ಟಾಗಿರುತ್ತಾರೆ. ಯಾಕಂದ್ರೆ ಹಸಿ ತರಕಾರಿಗಳು ಸೇರಿರುವ ಅವರ ಆರೋಗ್ಯಕರ ಆಹಾರವೇ, ಅವರನ್ನು ಆರೋಗ್ಯವಂತರನ್ನಾಗಿ ಮಾಡಿರುತ್ತದೆ. ಹಾಗಾದ್ರೆ ಈರುಳ್ಳಿ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಈರುಳ್ಳಿ ಸೇವನೆಯಿಂದ ಮಧುಮೇಹ ನಿಯಂತ್ರಿಸಬಹುದು. ಶುಗರ್ ಕಂಟ್ರೋಲಿನಲ್ಲಿರಬೇಕು ಅಂದ್ರೆ, ಈರುಳ್ಳಿ ಸೇವನೆ ಮಾಡಬೇಕು. ಬೇರೆ ಹಸಿ ತರಕಾರಿಗಳೊಂದಿಗೆ ಈರುಳ್ಳಿ ಸೇರಿಸಿ, ಸಲಾಡ್ ರೀತಿ ಸೇವಿಸಬಹುದು. ಅಥವಾ ಬರೀ ಈರುಳ್ಳಿಯನ್ನಷ್ಟೇ ಊಟದೊಂದಿಗೆ ಸೇವಿಸಬಹುದು.
ಅಲ್ಲದೇ, ಈರುಳ್ಳಿ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನಿಮಗೆ ಪದೇ ಪದೇ ಜ್ವರ ಬರುತ್ತಿದೆ. ಅಥವಾ ನೆಗಡಿ ಕೆಮ್ಮು ಇದ್ದರೆ, ಹಸಿ ಈರುಳ್ಳಿ ಸೇವನೆ ಮಾಡಬೇಕು. ಇದರಿಂದ ನೆಗಡಿ ಕೆಮ್ಮು ಕಡಿಮೆಯಾಗುತ್ತದೆ. ಈರುಳ್ಳಿಯಲ್ಲಿರುವ ಆರೋಗ್ಯಕರ ಅಂಶವು, ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಅಲ್ಲದೇ, ನೀವು ಸೇವಿಸುವ ಆಹಾರ ಸರಿಯಾಗಿ ಜೀರ್ಣವಾಗುತ್ತಿಲ್ಲ. ಜೀರ್ಣಕ್ರಿಯೆ ಸಮಸ್ಯೆ ಸರಿಯಾಗಿ ಆಗುತ್ತಿಲ್ಲವೆಂದಲ್ಲಿ ಊಟದೊಂದಿಗೆ ಈರುಳ್ಳಿ ಸೇವಿಸಿ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಉತ್ತಮವಾಗಿ ಮಾಡುವುದಲ್ಲದೇ, ನಿಮ್ಮ ತೂಕವನ್ನು ಸರಿಯಾಗಿ ಇಡುತ್ತದೆ. ಜೊತೆಗೆ ನಿಮ್ಮ ದೇಹದ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಚೆನ್ನಾಗಿ ಇರಿಸಲು ಹಸಿ ಈರುಳ್ಳಿ ಸಹಕಾರಿಯಾಗಿದೆ.