Health Tips: ಕೆಲವು ಸಲ ಕೆಲವು ತಾಯಂದಿರು, ಎಲ್ಲಿ ತಮ್ಮ ಅಂದಕ್ಕೆ ಅಡೆತಡೆಯಾಗುತ್ತೆಯೋ ಎಂದು ತಾನೇ ಹೆತ್ತ ಮಗುವಿಗೆ, ಹಾಲುಣಿಸುವುದಿಲ್ಲ. ಆದರೆ ವೈದ್ಯರು ಹೇಳುವ ಪ್ರಕಾರ, ತಾಯಿ ಮಗುವಿಗೆ ಹಾಲುಣಿಸಿದರೆ, ಅವಳ ಅಂದ ಎಂದಿಗೂ ಕ್ಷೀಣಿಸುವುದಿಲ್ಲ. ಅಲ್ಲದೇ, ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಕೂಡ ಕಡಿಮೆ ಇರುತ್ತದೆ. ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ಕೂಡ, ಮಗುವಿಗೆ ಯಾವ ಹಾಲು ಸೂಕ್ತ ಅನ್ನೋ ಬಗ್ಗೆ ವಿವರಿಸಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ಪುಟ್ಟ ಮಕ್ಕಳಿಗೆ ಎದೆ ಹಾಲು, 6 ತಿಂಗಳು ತುಂಬಿದ ಬಳಿಕ ಹಸುವಿನ ಹಾಲನ್ನು ನೀಡಬಹುದು. ಆದರೆ ವಯಸ್ಕರಿಗೆ, ಹಾಲಿನಿಂದ ಯಾವುದೇ ಪೋಷಕಾಂಶ ಸಿಗುವುದಿಲ್ಲ. ಏಕೆಂದರೆ ಅವರಿಗೆ ಹಾಲಲಿಲ್ಲರುವ ಪೋಷಕಾಂಶ ಸಾಕಾಗುವುದಿಲ್ಲ. ಹಾಗಾಗಿ ಅವರು ಆರೋಗ್ಯಕರ ಹಣ್ಣು, ತರಕಾರಿ ಸೇವನೆ ಮಾಡಬೇಕು.
ಇನ್ನು ಯಾರೇ ಆಗಲಿ ಹಾಲು ಉಪಯೋಗಿಸುವ ಸಮಯದಲ್ಲಿ ಕಾಯಿಸಿದ ಹಾಲು ಉಪಯೋಗಿಸಬೇಕು. ಹಸಿ ಹಾಲನ್ನು ಯಾವುದೇ ಕಾರಣಕ್ಕೂ ಸೇವಿಸಬಾರದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.