Sunday, July 6, 2025

Latest Posts

Health Tips: SSLC EXAM ಸಮಯದಲ್ಲಿ ಮಕ್ಕಳ ಬಾಯಲ್ಲಿ ಹುಣ್ಣು ಯಾಕೆ ಬರುತ್ತೆ?

- Advertisement -

Health Tips: ಮಕ್ಕಳ ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ಹಲವು ಆರೋಗ್ಯ ಸಮಸ್ಯೆಗಳಾಗುತ್ತದೆ. ಕೆಲವರಿಗೆ ಹೊಟ್ಟೆ ನೋವು, ವಾಂತಿ, ಜ್ವರ ಬರುವುದು ಹೀಗೆಲ್ಲ ಆಗುತ್ತದೆ. ಇನ್ನು ಕೆಲವರಿಗೆ ಬಾಯಿಗೆ ಹುಣ್ಣಾಗುತ್ತದೆ. ಹೀಗಾಗಿ ಓದಲು ಕೂಡ ಕಷ್ಟವಾಗುವ ಪರಿಸ್ಥಿತಿ. ಡಾ.ಆಂಜೀನಪ್ಪ ಅವರು ಯಾಕೆ ಮಕ್ಕಳಿಗೆ ಪರೀಕ್ಷಾ ಸಮಯದಲ್ಲಿ ಈ ರೀತಿ ಬಾಯಿ ಹುಣ್ಣಾಗುತ್ತದೆ ಎಂದು ವಿವರಿಸಿದ್ದಾರೆ.

ದೇಹದಲ್ಲಿ ಉಷ್ಣತೆ ಹೆಚ್ಚಾದಾಗ, ಹೆಚ್ಚು ಖಾರಾ ಪದಾರ್ಥ ತಿಂದಾಗ ಬಾಯಿಯಲ್ಲಿ ಹುಣ್ಣಾಗುತ್ತದೆ. ಹಾಗಾಗಿ ಯಾರಿಗೆ ಆಗಲಿ ದೇಹವನ್ನು ಆದಷ್ಟು ತಂಪಾಗಿರಿಸಿಕೊಳ್ಳಬೇಕು. ಅದರಲ್ಲೂ ಬೇಸಿಗೆಗಾಲದಲ್ಲಿ ಸೂರ್ಯನ ಶಾಖ ಹೆಚ್ಚಾಗಿರುವ ಕಾರಣ, ಆರೋಗ್ಯಕರ ಆಹಾರ, ತಂಪು ಆಹಾರದಿಂದಲೇ ನಾವು ನಮ್ಮ ದೇಹವನ್ನು ತಂಪಾಗಿರಿಸಿಕೊಳ್ಳಲು ಸಾಧ್ಯ.

ಹಾಗಾಗಿ ಬೇಸಿಗೆಯಲ್ಲಿ, ಪರೀಕ್ಷಾ ಸಮಯದಲ್ಲಿ ಆದಷ್ಟು ಮಕ್ಕಳಿಗೆ ಖಾರ ಖಾರವಾಗಿರುವ ಆಹಾರ ಕೊಡುವುದನ್ನು ನಿಲ್ಲಿಸಿ. ಹೆಚ್ಚು ಐಸ್‌ಕ್ರೀಮ್ ಸೇವನೆಯೂ ದೇಹದಲ್ಲಿ ಉಷ್ಣತೆ ಹೆಚ್ಚಿಸಬಹುದು. ಅದರ ಬದಲು ಮನೆಯಲ್ಲೇ ತಯಾರಿಸಿದ, ಐಸ್ ಬಳಸದೇ ಮಾಡಿದ ಜ್ಯೂಸ್ ಕೊಡಿ. ಹಣ್ಣಿನ ರಸ, ಮೊಳಕೆ ಕಾಳು. ಮಜ್ಜಿಗೆ, ಮೊಸರು, ಎಳನೀರಿನ ಸೇವನೆ ಹೆಚ್ಚು ಮಾಡುವುದರಿಂದ ದೇಹ ತಂಪಾಗಿರುತ್ತದೆ. ಈ ವೇಳೆ ಬಾಯಿಯಲ್ಲಿ ಹುಣ್ಣಾಗುವ ಸಮಸ್ಯೆ ಬರುವುದಿಲ್ಲ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss