Friday, November 22, 2024

Latest Posts

ಬಸಳೆ ಸೊಪ್ಪಿನಲ್ಲಿದೆ ಆರೋಗ್ಯಕರ ಗುಣಗಳು..!

- Advertisement -

ನಮಸ್ತೆ ಗೆಳೆಯರೇ ನಾವು ಸೇವಿಸುವ ಹಲವು ಬಗೆಯ ಸೊಪ್ಪು ತರಕಾರಿಗಳ ಆರೋಗ್ಯ ಮಹತ್ವ ನಮಗೆ ಕೆಲವೊಂದು ಬಾರಿ ತಿಳಿಯದೆ ಇರುವುದಿಲ್ಲ. ಅಂಥಹ ಗುಂಪಿಗೆ ಚಿರಪರಿಚಿತವಾದ ಸೊಪ್ಪು ಬಸಳೆ ಸೊಪ್ಪು. ಇದೊಂದು ಸದಾ ಕಾಲ ಹಚ್ಚ ಹಸಿರಿನಿಂದ ಕಂಗೊಳಿಸುವ ಬಳ್ಳಿಯಾಗಿದ್ದು, ಸುಮಾರು 9 ಮೀಟರ್ ನಷ್ಟು ಎತ್ತರ ಬೆಳೆಯಬಲ್ಲದು. ಇದರ ಎಲೆಗಳು ನೋಡಲು ವೀಳ್ಯದೆಲೆಯಂತೆ ಇರುತ್ತದೆ. ಇದರಲ್ಲಿ ಇರುವ ಹಲವಾರು ಪೌಷ್ಟಿಕಾಂಶ ಮನುಷ್ಯನ ಆರೋಗ್ಯಕ್ಕೆ ಬಹಳಷ್ಟು ಬಗೆಯಲ್ಲಿ ಸಹಾಯಕಾರಿ ಎಂದು ತಿಳಿದುಬಂದಿದೆ. ಬೇರೆ ಎಲ್ಲ ಹಸಿರು ತರಕಾರಿಗಳನ್ನು ಮೀರಿಸುವ ವಂಥಹ ಸತ್ವಗಳು ಈ ಬಸಳೆ ಸೊಪ್ಪಿನಲ್ಲಿ ಅಡಗಿದೆ. ಇದರಲ್ಲಿ ಕಡಿಮೆ ಕ್ಯಾಲೋರಿ ಅಂಶವಿದ್ದು ವಿಟಮಿನ್ಸ್ ಸಿ, ಎ, ಬಿ, ಕಬ್ಬಿಣಾಂಶ, ಕ್ಯಾಲ್ಸಿಯಂ, ತಾಮ್ರ, ಪೊಟ್ಯಾಷಿಯಂ, ಫಾಸ್ಪರಸ್, ಇನ್ನಿತರ ಖನಿಜಾಂಶಗಳು ಸೇರಿವೆ. ಬಾಯಿಯಲ್ಲಿ ಉಂಟಾಗುವ ಹುಣ್ಣಿನಿಂದ ಹಿಡಿದು ಸರ್ವ ರೋಗಕ್ಕೂ ಮದ್ದು ಎಂಬ ಖ್ಯಾತಿ ಬಸಳೆ ಸೊಪ್ಪಿಗೆ ಇದೆ. ಹಾಗಾದ್ರೆ ಸ್ನೇಹಿತರೇ ಈಗ ಬಸಳೆ ಸೊಪ್ಪಿನ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ. ಹೃದಯದ ತೊಂದರೆ ದೂರ. ಬಸಳೆ ಸೊಪ್ಪಿನಲ್ಲಿ ಪೋಲೈಟ್ ಅಂಶ ಅಧಿಕವಾಗಿದೆ. ಇದು ರಕ್ತದಲ್ಲಿ ಹಿಮೋ ಸಿಸ್ಟೀನ್ ಅಂಶ ತಗ್ಗಿಸುತ್ತದೆ. ಇನ್ನೂ ಪೋಲೈಟ್ ಅಂಶ ಹೆಚ್ಚಾಗಿರುವ ಬಸಳೆ ಸೊಪ್ಪನ್ನು ಸೇವನೆ ಮಾಡುವುದರಿಂದ ಹೃದಯದ ರಕ್ತನಾಳಗಳ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಮಾನಸಿಕ ಖಿನ್ನತೆಯಿಂದ ಮುಕ್ತಿ. ಬಸಳೆ ಸೊಪ್ಪನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಿತ್ಯವೂ ಕೆಲವು ಕ್ಲಿಷ್ಟಕರ ಅನುಭವಗಳಿಂದ ಉಂಟಾಗುವ ಮಾನಸಿಕ ಒತ್ತಡ ಆತಂಕ ಯಾವುದೇ ಔಷಧವನ್ನು ಬಳಕೆ ಮಾಡದೇ ಮಾಡಬಹುದು. ಇದು ಮಾನಸಿಕ ಚೈತನ್ಯವನ್ನು ತುಂಬುತ್ತದೆ. ಆದ್ದರಿಂದ ಈ ಸೊಪ್ಪು ಸೇವಿಸುವುದು ಉತ್ತಮ. ಅನೀಮಿಯಾ ಸಮಸ್ಯೆ ದೂರವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ತಮ್ಮ ದೇಹದಲ್ಲಿ ಕಬ್ಬಿಣಾಂಶ ಕೊರತೆಯಿಂದ ಅನೀಮಿಯಾ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ದೇಹದಲ್ಲಿ ಕೆಂಪು ರಕ್ತ ಕಣಗಳು ಅಸಮರ್ಪಕವಾಗಿ ರೂಪು ಗೊಳ್ಳುವುದರಿಂದ ಅನೀಮಿಯಾ ಸಮಸ್ಯೆ ಕಾಣುವುದು. ಆದರೆ ಬಸಳೆ ಸೊಪ್ಪಿನಲ್ಲಿ ಹೇರಳವಾಗಿ ಕಬ್ಬಿಣಾಂಶ ಇರುವುದರಿಂದ ರಕ್ತ ಹೆಚ್ಚುತ್ತದೆ. ಅನೀಮಿಯಾ ಸಮಸ್ಯೆ ದೂರವಾಗುತ್ತದೆ. ಜೊತೆಗೆ ಮೆದುಳಿನ ಆರೋಗ್ಯವನ್ನು ಕೂಡ ಹೆಚ್ಚಿಸುತ್ತದೆ. ಗರ್ಭಿಣಿಯರಿಗೆ ಸಹಾಯಕಾರಿ. ಗರ್ಭಾವಸ್ಥೆಯಲ್ಲಿ ಇರುವ ಮಹಿಳೆಯರಿಗೆ ಸುಗಮವಾಗಿ ಗರ್ಭಧಾರಣೆಯಾದ ಸಮಯದಿಂದ ಹೆರಿಗೆ ಆಗುವ ಸಮಯವರೆಗೂ ತಮ್ಮ ಆರೋಗ್ಯದ ಪ್ರತಿ ವಿಚಾರವೂ ಮುಖ್ಯವಾಗಿರುತ್ತದೆ. ಕೆಲವು ಮಹಿಳೆಯರಿಗೆ ಅಗತ್ಯವಾದ ಪೋಷಕಾಂಶಗಳ ಕೊರತೆಯಿಂದ ಹೃದಯ ಮತ್ತು ಕೈ ಕಾಲುಗಳಿಗೆ ಸಂಭಂದ ಪಟ್ಟ ಸಮಸ್ಯೆ ಕಾಣುತ್ತದೆ. ಮುಖ್ಯವಾಗಿ ಪೋಲೈಟ್ ಅಂಶ ಕಡಿಮೆಯಿಂದ ಹುಟ್ಟಿದ ಮಗು ಸಮಸ್ಯೆಯನ್ನು ಎದುರಿಸುತ್ತದೆ. ಆದ್ದರಿಂದ ಗರ್ಭಿಣಿಯರು ನಿಯಮಿತವಾಗಿ ಬಸಳೆ ಸೊಪ್ಪನ್ನು ಸೇವಿಸುವ ಅಭ್ಯಾಸ ಮಾಡಿಕೊಂಡರೆ ಎಲ್ಲ ವಿಧದಲ್ಲಿಯು ಒಳ್ಳೆಯದು. ಬಸಳೆ ಕ್ಯಾನ್ಸರ್ ನಿವಾರಕವಾಗಿದೆ ಅದರಲ್ಲೂ ಕರುಳಿನ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಕೋಶದ ಕ್ಯಾನ್ಸರ್, ಬ್ರೈನ್ ಟ್ಯೂಮರ್, ನಂತಹ ದೊಡ್ಡ ಮಹಾಮಾರಿ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಇನ್ನೂ ಕೊನೆಯದಾಗಿ ದೇಹಕ್ಕೆ ಶಕ್ತಿ ಮತ್ತು ಚೈತನ್ಯವನ್ನೂ ಒದಗಿಸುತ್ತದೆ. ಆದ್ದರಿಂದ ಹಿರಿಯರು ಹೇಳಿದ ಹಾಗೆ ಬಸಳೆ ಸೊಪ್ಪಿನಲ್ಲಿ ಎಲ್ಲ ಬಗೆಯ ಅಂಶವಿರುವುದರಿಂದ ಇದರ ಸೇವನೆ ತುಂಬಾನೇ ಉತ್ತಮವಾಗಿದೆ.

- Advertisement -

Latest Posts

Don't Miss