Friday, December 27, 2024

Latest Posts

ರಾಯಚೂರಲ್ಲಿ ಧಾರಾಕಾರ ಮಳೆಗೆ ಜನರು ತತ್ತರ..!

- Advertisement -

ರಾಯಚೂರು: ರಾಯಚೂರಲ್ಲಿ ಸುರಿದ ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ರಾಯಚೂರು ನಗರದ ಹಲವಡೆ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ ಕಾರಣ ಜನರು ಪರದಾಡುತ್ತಿದ್ದಾರೆ. ಮಳೆ ನೀರಿನಿಂದ ಮನೆಯಲ್ಲಿರುವ ದವಸ ಧಾನ್ಯಗಳು ಸಂಪೂರ್ಣವಾಗಿ ಹಾಳಾಗಿದ್ದು, ನೀರಿನ ಮಧ್ಯೆ ಜನರು ರಾತ್ರಿಯಿಡೀ ಕಳೆಯುವಂತಾಗಿತ್ತು.

ರಾಯಚೂರು ನಗರದ ತಗ್ಗು ಪ್ರದೇಶಗಳಾದ ಸಿಯಾತಲಾಬ್, ಬಸವನಬಾವಿ ವೃತ್ತ, ಜಹಿರಾಬಾದ್ ಬಡಾವಣೆ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿದೆ. ಇದ್ರಿಂದ ರಾತ್ರಿಯಿಡೀ ಬಡಾವಣೆಯ ಜನ ಜಾಗರಣೆ ಮಾಡುವಂತಾಯ್ತು. ಮನೆಗೆ ನುಗ್ಗಿದ ನೀರಿನಲ್ಲಿ ಪಾತ್ರೆ ಪಗಡೆಗಳು ತೇಲಿಕೊಂಡು ಹೋಗುವ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.

ಇನ್ನು ಹಲವು ವರ್ಷಗಳ ಹಿಂದೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಕಾಲವೆ ಕಾಮಗಾರಿಯಿಂದ ಈ ರೀತಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿವೆ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಅಂತ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ.

ಈ ಮಧ್ಯೆ ನಾಯಿಯೊಂದು  ತನ್ನ ಪುಟ್ಟ ಮರಿಯನ್ನು ಮಳೆ ನೀರಿನಿಂದ ಕಾಪಾಡಲು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದ ದೃಶ್ಯ ಕೂಡ ಕಂಡುಬಂತು.

ಒಟ್ಟಾರೆ, ರಾಯಚೂರು ನಗರದಲ್ಲಿ ಜನರು ಮಳೆ ಬಂದ್ರೆ ಹೆದರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಇಲ್ಲಿನ ಜನರು ನೆಮ್ಮದಿಯುತ ಜೀವನ ನಡೆಸುವಂತೆ ಮಾಡಬೇಕಿದೆ.

ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು

- Advertisement -

Latest Posts

Don't Miss