Saturday, April 12, 2025

Latest Posts

ಹಂಸಲೇಖ  ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ..!                

- Advertisement -

  ಬೆಂಗಳೂರು: ಹಂಸಲೇಖ ಅವರು  ನೀಡಿದಂತಹ ವಿವಾದಾತ್ಮಕ ಹೇಳಿಕೆಗೆ ಹೈಕೋರ್ಟ್  ಅವರ ತನಿಖೆಗೆ  ತಡೆಯಾಜ್ನೆ ನೀಡಿದೆ.  ಮೈಸೂರಿನ ಖಾಸಗಿ ಕಾರ್ಯಕ್ರಮವೊಂದರಲ್ಲಿ ಹಂಸಲೇಖರವರು ಪೇಜಾವರ ಶ್ರೀಗಳ ಬಗ್ಗೆ ನೀಡಿದಂತಹ ವಿವಾದಾತ್ಮಕ ಹೇಳಿಕೆಗೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಡಾ. ಮುರಳೀಧರ ವಿವಾದಾತ್ಮಕ ಹೇಳಿಕೆಯನ್ನು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದರ ಸಲುವಾಗಿ ಗಂಗರಾಜು ಅಲಿಯಾಸ್ ಹಂಸಲೇಖರವರು ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಇಂದು ಹೈಕೋರ್ಟ್ ನಲ್ಲಿ  ಹಂಸಲೇಖರ ಪರವಾಗಿ ವಕೀಲ ಕಾಶಿನಾಥ್ ಮತ್ತು ದ್ವಾರಕನಾಥ್  ವಾದ ಮಂಡಿಸಿದರು,ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್ ಅವರ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಿದೆ. ಇದರಿಂದ ಅವರ ವಿರುದ್ಧ ಕೇಸ್ ದಾಖಲಿಸಿದ್ದವರಿಗೆ ಭಾರಿ ಮುಖಭಂಗವಾಗಿದೆ.

- Advertisement -

Latest Posts

Don't Miss